Actress Shobana : ಮಳೆಯ ಸೀನ್ ನಲ್ಲಿ ರಜನಿ ಸರ್ ಎತ್ತಿಕೊಂಡಾಗ ಒಳ ಉಡುಪು ಇರಲಿಲ್ಲ: ಶೋಭನ ಮಾತು ವೈರಲ್!

Actress Shobana: ಸಿನಿಮಾ ಎಂಬ ಬಣ್ಣದ ಲೋಕದ ಒಳಗೆ ಹೊರ ಹೊಕ್ಕ ಬಳಿಕ ವಾಸ್ತವ ಸತ್ಯದ ಅನಾವರಣವಾಗುತ್ತದೆ. ಸಿನಿಮಾರಂಗವನ್ನು ವೃತ್ತಿ ಜೀವನವಾಗಿ ಆಯ್ದುಕೊಂಡಾಗ ಸಾಕಷ್ಟು ಅಡೆತಡೆಗಳನ್ನು ದಾಟಿ ಮುಂದೆ ಸಾಗಬೇಕಾಗುತ್ತದೆ. ಅದರಲ್ಲಿಯೂ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುವ ಸವಾಲು ಅಷ್ಟಿಷ್ಟಲ್ಲ. ಸದ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ನಟ, ಶಾಸ್ತ್ರೀಯ ನೃತ್ಯಗಾರ್ತಿ (Classical Dancer) ಮತ್ತು ಪದ್ಮಶ್ರೀ ಪುರಸ್ಕೃತೆ ನಟಿ ಶೋಭನಾ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ್ದು, ಚಿತ್ರೀಕರಣದ ಸಂದರ್ಭದಲ್ಲಿ ತಾನು ಎದುರಿಸಿದ ಫಜೀತಿಯ ಬಗ್ಗೆ ವಿವರಣೆ ನೀಡಿದ್ದಾರೆ.

 

ಚಿತ್ರರಂಗದಲ್ಲಿ ಭದ್ರವಾದ ಅಡಿಪಾಯ ಹಾಕಿ ನೆಲೆಯೂರಲು ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತಂತೆ ಈಗಾಗಲೇ ಹಲವಾರು ನಟಿಯರು ಬಹಿರಂಗವಾಗಿ ಮಾತನಾಡಿದ್ದು ಕೂಡ ಇದೆ. ಕಾಸ್ಟ್​ ಕೌಚಿಂಗ್​ ಎಂಬ ಭಯಾನಕ ಸತ್ಯವನ್ನು ನಟಿಯರು ಮಾತ್ರವಲ್ಲದೇ ನಟರೂ ಕೂಡ ಸಮಾಜದ ಮುಂದೆ ಬಾಯ್ಬಿಟ್ಟಿದ್ದಾರೆ. ಬಹುಭಾಷಾ ನಟಿ (Actress Shobana) ಶೋಭನಾ ಅವರು ಇದೀಗ ಚಿತ್ರರಂಗದಲ್ಲಿ ತಾವು ಎದುರಿಸಿದ ನೋವನ್ನು ಬಹಿರಂಗಪಡಿಸಿದ್ದಾರೆ.

ಸಿನಿಮಾ ದುನಿಯಾದಲ್ಲಿ ನಟಿಯರನ್ನು ಕೆಲವೊಮ್ಮೆ ಉದ್ದೇಶ ಪೂರ್ವಕವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಕೂಡ ಶೋಭನಾ ನೋವನ್ನ ಹೊರ ಹಾಕಿದ್ದಾರೆ. ನಟಿ ಸುಹಾಸಿನಿ ಮಣಿರತ್ನಂ (Suhasini Maniratnam) ಅವರು ಇತ್ತೀಚಿನ ಸಂದರ್ಶನದ ಸಂದರ್ಭ, ಶೋಭನಾ ಅವರು ಚಿತ್ರರಂಗದಲ್ಲಿನ ಅನುಭವವನ್ನು ಹಂಚಿಕೊಂಡಿದ್ದಾರೆ. 1989ರಲ್ಲಿ ಬಿಡುಗಡೆಗೊಂಡ ಶಿವಾ ಚಿತ್ರವನ್ನು ನೆನಪಿಸಿಕೊಂಡಿದ್ದು, ಅದರಲ್ಲಿ ನಟ ರಜನಿಕಾಂತ್ (Rajinikanth )ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.

ರಜನೀಕಾಂತ್​ ಅವರ ಜೊತೆಗೆ ಹಲವು ಚಿತ್ರಗಳನ್ನು ಮಾಡಿರುವ ಶೋಭನಾ ಅವರಿಗೆ ಸಿನಿಮಾರಂಗದ ಅನುಭವ ಹಂಚಿಕೊಳ್ಳುವಂತೆ ನಟಿ ಸುಹಾಸಿನಿಯವರು ಕೇಳಿಕೊಂಡಿದ್ದು, ಅದಕ್ಕೆ ಉತ್ತರವಾಗಿ ಶೋಭನಾ (Shobhana) ಅನೇಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಶೋಭನಾ ಅವರು ರಜನೀಕಾಂತ್​ ಅವರ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದು, ರಜನೀಕಾಂತ್​ ಯಾವಾಗಲೂ ಸಂಭಾವಿತ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ. ಶಿವ ಚಿತ್ರದ ಸೆಟ್‌ನಲ್ಲಿ ನಡೆದ ಘಟನೆಯೊಂದನ್ನು ಈ ಸಂದರ್ಭ ಹಂಚಿಕೊಂಡಿದ್ದಾರೆ. ರಜನಿಕಾಂತ್​ ಅವರು ತಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಎಲ್ಲದಕ್ಕೂ ಸಹಕಾರ ನೀಡುತ್ತಿದ್ದರು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ ರಜನಿಕಾಂತ್ ಮಳೆಯ ದೃಶ್ಯದ ಭಯಾನಕ ಅನುಭವವನ್ನು (Experience)ಹಂಚಿಕೊಂಡಿದ್ದಾರೆ.

‘ಮಳೆಯಲ್ಲಿ(Rain) ನೆನೆದು ರಜನೀಕಾಂತ್​ ಅವರ ಜೊತೆ ಒಂದು ಹಾಡಿಗೆ ನೃತ್ಯ ಮಾಡಬೇಕಾದ ಪರಿಸ್ಥಿತಿ ಇತ್ತು. ಆದರೆ ಈ ಬಗ್ಗೆ ಶೋಭಾನ ಅವರಿಗೆ ಮೊದಲೇ ಹೇಳಿರಲಿಲ್ಲವಂತೆ. ಆದರೆ ರಜನಿಕಾಂತ್ ಅವರ ಬಟ್ಟೆಯನ್ನು ನೋಡಿದ ಬಳಿಕ ಇವರಿಗೆ ಗೊತ್ತಾಗಿದ್ದಂತೆ. ನಟಿ ಶೋಭಾನಾ ಅವರಿಗೆ ಬಿಳಿ ಪಾರದರ್ಶಕ (Trasnperent Saree)ಸೀರೆ ನೀಡಲಾಗಿತ್ತು. ಅದಾಗಲೇ ಇದು ಮಳೆ ಹಾಡು ಎಂಬುದು ನಟಿಗೆ ಅರ್ಥವಾಗಿತ್ತು. ಆದರೆ ಇದರ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಮಳೆಯಲ್ಲಿ ನೆನೆಯುವಾಗ ಸೀರೆಯ ಒಳಗೆ ಧರಿಸಲು ಸರಿಯಾದ ಬಟ್ಟೆ ಹಾಕಿಕೊಳ್ಳಬೇಕಾಗಿತ್ತು. ಆದರೆ ನಟಿಯ ಬಳಿ ಆ ಬಣ್ಣದ ಒಳ ಉಡುಪು ಇರಲಿಲ್ಲ’ ಎಂದು ನಟಿ ತಾನು ಅನುಭವಿಸಿದ ಕಹಿ ಘಟನೆಯನ್ನು ಹೇಳಿಕೊಂಡಿದ್ದಾರೆ.

ಬಿಳಿಯ ಪಾರದರ್ಶಕ ಸೀರೆಯಾಗಿದ್ದರಿಂದ ಒಳಗೆ ಏನೂ ಬಟ್ಟೆ ಹಾಕದೇ ಹೇಗೆ ನಟಿಸಲಿ ಎಂದು ತಿಳಿಯದೇ ನಟಿ ಕಂಗಾಲಾಗಿ ದ್ದು, ತಕ್ಷಣವೇ ತಾನು ಮನೆಗೆ ಹೋಗಿ ತಯಾರಾಗಿ ಬರಬಹುದೇ ಎಂದು ಕೇಳಿಕೊಂಡರಂತೆ. ಆದರೆ ಅದಕ್ಕೆ ಸಮಯವಿರಲಿಲ್ಲ. ಈ ಸಂದರ್ಭ ನಟಿಗೆ ಭಯ ಅಸಹ್ಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಶಾಟ್ (Shot) ಹತ್ತು ನಿಮಿಷಗಳಲ್ಲಿ ರೆಡಿಯಾಗಬೇಕು ಎಂದು ಹೇಳಿದ್ದರಂತೆ. ಇಂಥ ಮಳೆ ಹಾಡುಗಳು ಪೂರ್ವಯೋಜಿತ ಕೊಲೆ ಎಂದು ನಟಿ ಅಳಲು ತೋಡಿಕೊಂಡಿದ್ದು, ಬಲಿಪಶುವಿಗೆ ಮಾತ್ರ ತಿಳಿದಿರುವುದಿಲ್ಲ. ಆ ರೀತಿಯ ಪರಿಸ್ಥಿತಿ ನಮ್ಮದಾಗಿತ್ತು. ಈಗ ಆಗಿನ ಸ್ಥಿತಿ ನೆನೆದುಕೊಂಡರೆ ನಗು ಬರುತ್ತದೆ. ಆದರೆ ಅಂದು ಮಾತ್ರ ಜೀವವೇ ಕೈಗೆ ಬಂದಂತಾಗಿತ್ತು. ಏನು ಮಾಡಬೇಕು ಎಂದು ತಿಳಿಯಲಿಲ್ಲ. ಕೂಡಲೇ ಎವಿಎಂ ಸ್ಟುಡಿಯೋದಲ್ಲಿ ಇದ್ದ ಪ್ಲಾಸ್ಟಿಕ್ ಟೇಬಲ್ ಕವರ್ ತೆಗೆದುಕೊಂಡು ಸೀರೆ ಒಳಗೆ ಸುತ್ತಿಕೊಂಡು ಶಾಟ್​ಗೆ ಹಾಗೋ ಹೀಗೋ ರೆಡಿ ಆದೆ’ ಎಂದು ಶೋಭನಾ ಹೇಳಿಕೊಂಡಿದ್ದಾರೆ.

ಚಿತ್ರೀಕರಣದ ಸಮಯದಲ್ಲಿ, ರಜನಿ ಸರ್ ನನ್ನನ್ನು ಡ್ಯಾನ್ಸ್ ಸ್ಟೆಪ್‌ ಗಾಗಿ ಎತ್ತಿಕೊಳ್ಳಬೇಕಾಗಿತ್ತು. ಆದರೆ, ಅವರಿಗೆ ಶೋಭನ ಅವರ ಸ್ಥಿತಿಯ ಬಗ್ಗೆ ಏನು ತಿಳಿಯದ ಹಿನ್ನೆಲೆ ಡಾನ್ಸ್ ಗಾಗಿ ನಟಿಯನ್ನು ಎತ್ತಿಕೊಂಡಾಗ ಕವರ್ ಕವರ್ (Cover)ಶಬ್ದ ಅಚ್ಚರಿಯಿಂದ ವಿಚಿತ್ರವಾಗಿ ನೋಡಿದ್ದಾರೆ. ಸೀರೆ ಪಾರದರ್ಶಕವಾಗಿದ್ದ ಹಿನ್ನೆಲೆ ಕವರ್​ ಸುತ್ತಿಕೊಂಡಿದ್ದ ವಿಚಾರ ರಜನಿ ಅವರಿಗೆ ತಿಳಿದಿರಲಿಲ್ಲ. ಶಾಟ್​ ಸಮಯದಲ್ಲಿ ಅವರು ಗೊಂದಲಕ್ಕೊಳಕ್ಕಾಗಿದ್ದರಂತೆ. ಆಗ ನಟಿ ಅವರಿಗೆ ಸತ್ಯ ಹೇಳಬೇಕಾದ ಸ್ಥಿತಿ ಎದುರಾಗಿದೆ. ಹೀಗಾಗಿ, ಶೋಭನ ನಿಜ ಹೇಳಿದ್ದು, ಅವರು ಸಮಾಧಾನಪಡಿಸಿದ್ದು, ಮಾತ್ರವಲ್ಲದೇ ಅದರ ಬಗ್ಗೆ ಅವರು ಯಾರಿಗೂ ಏನು ಹೇಳಲು ಹೋಗಿಲ್ಲ. ಸೆಟ್‌ನಲ್ಲಿರುವ ಪ್ರತಿಯೊಬ್ಬರೂ ಆರಾಮವಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದು ಅವರ ಗುಣ. ಅಷ್ಟು ಒಳ್ಳೆಯ ವ್ಯಕ್ತಿ ಎಂದು ನಟಿ ಶೋಭನ ರಜನಿಕಾಂತ್ ಅವರ ಗುಣಗಾನ ಮಾಡಿದ್ದು, ತಾವು ಪೇಚಿಗೆ ಸಿಲುಕಿದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

 

ಇದನ್ನು ಓದಿ : Retirement Age of Govt Employees : ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಇಳಿಸಿದ ಕೇಂದ್ರ ಸರ್ಕಾರ ? Fact Sheet ಈಗ ಲಭ್ಯ 

Leave A Reply

Your email address will not be published.