Shah Rukh Khan -Venky Mysore : ಶಾರುಖ್ ಒಡೆತನದ ಕೆಕೆಆರ್ ನ ಸಂಪೂರ್ಣ ಜವಾಬ್ದಾರಿ ಕನ್ನಡಿಗರೊಬ್ಬರದ್ದು! ಶಾರುಖ್ ಆಪ್ತ, ಯಾರಿವರು?

Shah Rukh Khan-Venky Mysore: ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) (Kolkata Knight Riders) “ಇಂಡಿಯನ್ ಪ್ರೀಮಿಯರ್ ಲೀಗ್” (ಐಪಿಎಲ್) ನಲ್ಲಿ ಜನಪ್ರಿಯ ತಂಡವಾಗಿದೆ. ಈ ತಂಡ
2012 ಮತ್ತು 2014 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಕೆಕೆಆರ್ ನ ಸಂಪೂರ್ಣ ಜವಾಬ್ದಾರಿಯನ್ನು ಕನ್ನಡಿಗರೊಬ್ಬರು (Shah Rukh Khan-Venky Mysore) ಹೊತ್ತುಕೊಂಡಿದ್ದಾರೆ. ಯಾರು? ಅವರ ಹಿನ್ನೆಲೆ ಏನು?

 

ಶಾರುಖ್ ಖಾನ್ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ದೇಶದ ಪ್ರಮುಖ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಮಾಲೀಕರಾಗಿದ್ದಾರೆ. ಈ ಎರಡು ಸಂಸ್ಥೆಗಳ ಸಿಇಒ ‘ವೆಂಕಿ ಮೈಸೂರು’ (Venky Musore) ಎಂಬವರು ಆಗಿದ್ದಾರೆ. ರೆಡ್ ಚಿಲ್ಲೀಸ್ ಸಿಇಒ, ಕೆಕೆಆರ್ ತಂಡದ ಸಿಇಒ (KKR CEO) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ವೆಂಕಿ ಮೈಸೂರು ಕನ್ನಡಿಗ. ಇವರು ಕರ್ನಾಟಕದ (Karnataka) ಮೈಸೂರಿನಲ್ಲಿ ಜನಿಸಿದರು. ಇವರಿಗೆ ಮೊದಲೇ ಕ್ರಿಕೆಟ್ ಮೇಲೆ ಒಲವಿದ್ದರೂ ತಂದೆಯ ಒತ್ತಾಯ, ಆಸೆಯ ಮೇರೆಗೆ ಕ್ರಿಕೆಟ್ ಚಿಂತೆ ಬಿಟ್ಟು ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಮಾರ್ಕೆಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಎಂಬಿಎ ಪೂರ್ಣಗೊಳಿಸಿದರು. ವೆಂಕಿ ಮೈಸೂರು ಅವರ ಪತ್ನಿಯ ಹೆಸರು ವೀಣಾ. ಈ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ. ವರದಿ ಪ್ರಕಾರ, ವೆಂಕಿ ಅವರ ನಿವ್ವಳ ಮೌಲ್ಯ ಸುಮಾರು 14 ಕೋಟಿ ರೂಪಾಯಿ ಇದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಕೆಕೆಆರ್‌ಗೆ ಸೇರುವ ಮೊದಲು ವೆಂಕಿ ಮೈಸೂರು 2002 ರಿಂದ 2003 ರವರೆಗೆ ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್‌ನ ಬೆಂಗಳೂರು (Bengaluru) ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ವಿಮಾ ಉದ್ಯಮದಲ್ಲಿ 25 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ವಿಮಾ ಉದ್ಯಮದಲ್ಲಿ ಭಾರೀ ಹೆಸರು ಪಡೆದಿದ್ದರು. 2010 ರಲ್ಲಿ, ವೆಂಕಿ ಮೈಸೂರು ಅವರು ಮೆಟ್‌ಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದರು. 21 ವರ್ಷಗಳ ಕಾಲ ಮೆಟ್‌ಲೈಫ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ನಂತರ ಶಾರುಖ್ ಖಾನ್ ಅವರ ಕೆಕೆಆರ್ ಗೆ ಸೇರಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ ತಂಡ ಟ್ರಿನ್‌ಬಾಗೊ ನೈಟ್ ರೈಡರ್ಸ್ (ಆಗ ಟ್ರಿನಿಡಾಡ್ ಮತ್ತು ಟೊಬಾಗೊ ರೆಡ್ ಸ್ಟೀಲ್ಸ್) ಅನ್ನು ಖರೀದಿಸುವಲ್ಲಿ ವೆಂಕಿಯವರದ್ದೇ ಪ್ರಮುಖ ಪಾತ್ರವಿದೆ ಎಂದು ನಂಬಲಾಗಿದೆ. ಫೋರ್ಬ್ಸ್ ಪ್ರಕಾರ, ಕೋಲ್ಕತ್ತಾ ನೈಟ್ ರೈಡರ್ಸ್ ನ ನಿವ್ವಳ ಮೌಲ್ಯ $1.1 ಬಿಲಿಯನ್ ಮತ್ತು ಆದಾಯ $41.2 ಮಿಲಿಯನ್ ಆಗಿದ್ದು ಇದರ ಆದಾಯ 14.1 ಮಿಲಿಯನ್ ಡಾಲರ್ ಆಗಿದೆ.

 

ಇದನ್ನು ಓದಿ : ESIC Recruitment 2023: ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ಸಂಬಳ 1 ಲಕ್ಷಕ್ಕೂ ಹೆಚ್ಚು! 

Leave A Reply

Your email address will not be published.