Virat Kohli Viral Photo: ವಿರಾಟ್ ಕೊಹ್ಲಿ ಬಾಲ್ಯದ ಫೋಟೋ ವೈರಲ್ ; ಕೊಹ್ಲಿ ಜೊತೆಗಿರುವ ಆಟಗಾರ ಯಾರು? ಕಂಡುಹಿಡಿಯಿರಿ!!

Virat Kohli Childhood Photo : ವಿರಾಟ್ ಕೊಹ್ಲಿ (Virat Kohli) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಅದೆಷ್ಟೋ ಜನರ ಫೇವರೆಟ್ ಆಟಗಾರ. ಅಲ್ಲದೆ, ಅಪಾರ ಅಭಿಮಾನಿಗಳನ್ನು ಹೊಂದಿರುವ ಆಟಗಾರನೂ ಹೌದು. ಸದ್ಯ ಭಾರತೀಯ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿಯ ಫೋಟೋವೊಂದು (Virat Kohli Viral Photo) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾವ ಫೋಟೋ ಅಂತೀರಾ?

ವೈರಲ್ ಆಗಿರುವ ಫೋಟೋ ವಿರಾಟ್ ಕೊಹ್ಲಿಯ ಬಾಲ್ಯದ್ದಾಗಿದ್ದು (Virat Kohli childhood photo), ಫೋಟೋದಲ್ಲಿ ವಿರಾಟ್ ಮತ್ತು ಅವರ ಸಹ ಆಟಗಾರ ಬಸ್ಸಿನಲ್ಲಿ ಕುಳಿತಿರುವುದು ನೋಡಬಹುದು. ಈ ಫೋಟೋವನ್ನು 19 ವರ್ಷದೊಳಗಿನವರ ವಿಶ್ವಕಪ್ ಸಮಯದಲ್ಲಿ ತೆಗೆಯಲಾಗಿದ್ದು ಅತ್ಯುನ್ನತ ಆಟಗಾರ ಕೊಹ್ಲಿಯನ್ನು ನೀವು ಈ ಫೋಟೋದಲ್ಲಿ ಕಂಡುಹಿಡಿಯುತ್ತೀರಾ ಆದರೆ, ಕೊಹ್ಲಿ ಪಕ್ಕದಲ್ಲಿ ಕುಳಿತಿರುವವರು ಯಾರು?

ಈ ಚಾಲೆಂಜ್ ನಿಮಗೆ. ನಿಮಗೆ ಸಾಧ್ಯವಾದರೆ ಕೊಹ್ಲಿ ಪಕ್ಕದಲ್ಲಿ ಕುಳಿತಿರುವ ಆಟಗಾರ ಯಾರು ಎಂದು ಗುರುತಿಸಿ. ಸದ್ಯ ಭರ್ಜರಿ ಫಾರ್ಮ್​​​ನಲ್ಲಿರುವ ಕೊಹ್ಲಿ, ಐಪಿಎಲ್​​ನಲ್ಲೂ (IPL) ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಮುಂಬೈ ಇಂಡಿಯನ್ಸ್ (mumbai indians) ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 49 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ತಂಡವನ್ನು ಗೆದ್ದುಕೊಂಡರು. 2ನೇ ಪಂದ್ಯದಲ್ಲಿ 21 ರನ್​ಗಳಿಗೆ ಸುಸ್ತಾದರು. ಸದ್ಯ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದ್ದು, ಏಪ್ರಿಲ್​ 10 ರಂದು ಸೆಣಸಾಟ ನಡೆಸಲು ಸಜ್ಜಾಗಿದೆ. ಆ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.

 

 

 

 

ಇದನ್ನು ಓದಿ : Arecanut Coffee Rate 08/04/2023 : ಇಂದಿನ ಅಡಿಕೆ, ಕಾಫಿ, ಏಲಕ್ಕಿ ಧಾರಣೆ ಎಷ್ಟಿದೆ?  

 

 

1 Comment
  1. binance says

    Can you be more specific about the content of your article? After reading it, I still have some doubts. Hope you can help me.

Leave A Reply

Your email address will not be published.