Career Guidance: ಪಿಯುಸಿಯಲ್ಲಿ ಕಾಮರ್ಸ್ ವಿಭಾಗ ಆಯ್ಕೆ ಮಾಡಿದ್ದೀರಾ? ಹಾಗಾದ್ರೆ ಇಲ್ಲಿದೆ ನಂತರದ ಬೆಸ್ಟ್ ಕೋರ್ಸ್ ಗಳು!!
Career Guidance: ಪಿಯುಸಿ (PUC) ಮುಗಿದ ಬಳಿಕ ಸಾಕಷ್ಟು ವಿದ್ಯಾರ್ಥಿಗಳಿಗೆ ಮುಂದೆ ಏನು? ಎಂಬ ಪ್ರಶ್ನಾರ್ಥಕ ಚಿಹ್ನೆ ತಲೆಯಲ್ಲಿ ಇದ್ದೇ ಇರುತ್ತದೆ. ಪಿಯುಸಿಯಲ್ಲಿ commerce (ವಾಣಿಜ್ಯ ವಿಭಾಗ) ಆಯ್ಕೆ ಮಾಡಿರುವ ವಿದ್ಯಾರ್ಥಿಗಳಿಗೆ ಅದ್ಭುತ ವೃತ್ತಿ ಆಯ್ಕೆಗಳು ಇಲ್ಲಿವೆ (Career Guidance). ಈ ಕೋರ್ಸ್ ಗಳು ನಿಮಗೆ ಯಶಸ್ಸಿನ ಹಾದಿಯನ್ನು ತೋರಲಿವೆ.
ಬ್ಯಾಚುಲರ್ ಆಫ್ ಕಾಮರ್ಸ್ (B.Com): 12 ನೇ ತರಗತಿಯ ನಂತರ ಹೆಚ್ಚು ಬೇಡಿಕೆಯಿರುವ ಕೋರ್ಸ್‌ಗಳಲ್ಲಿ B.com ಒಂದಾಗಿದೆ. ನೀವು ಸೆಕೆಂಡ್ ಪಿಯು ನಂತರ ವಾಣಿಜ್ಯದಿಂದ ಪದವಿ ಪಡೆಯಲು ಬಯಸಿದರೆ, B.Com ಉತ್ತಮ ಆಯ್ಕೆಯಾಗಿದೆ. B.Com ಮುಖ್ಯವಾಗಿ ಖಾತೆಗಳು, ಗಣಿತ ಮತ್ತು ಅರ್ಥಶಾಸ್ತ್ರದ ಮೇಲೆ ಕೇಂದ್ರೀಕರಿಸುತ್ತದೆ.
ಇದರಲ್ಲಿ ವಿದ್ಯಾರ್ಥಿಗಳು ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ (marketing management), ಅಕೌಂಟಿಂಗ್ (accounting) ಮತ್ತು ಫೈನಾನ್ಶಿಯಲ್ ಮ್ಯಾನೇಜ್ಮೆಂಟ್ (financial management), ಇಂಟರ್ನ್ಯಾಷನಲ್ ಟ್ರೇಡ್ ಮತ್ತು ಫೈನಾನ್ಸ್, ಇ-ಕಾಮರ್ಸ್, ಬ್ಯಾಂಕಿಂಗ್ (banking) ಅಥವಾ ಮಾನವ ಮತ್ತು ಸಂಪನ್ಮೂಲ ನಿರ್ವಹಣೆಯಿಂದ ಯಾವುದೇ ಒಂದು ವಿಷಯವನ್ನು ಆಯ್ಕೆ ಮಾಡಬಹುದು. ಈ ಪದವಿಯ ನಂತರ ಅಕೌಂಟಿಂಗ್ ಫೈನಾನ್ಸ್, ಗೂಡ್ಸ್ ಅಕೌಂಟಿಂಗ್ (goods accounting), ಅಕೌಂಟ್ಸ್, ಕಾರ್ಯಾಚರಣೆಗಳು, ತೆರಿಗೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮಾಡಬಹುದು.
ಚಾರ್ಟರ್ಡ್ ಅಕೌಂಟೆಂಟ್ (CA): ಬ್ಯಾಂಕಿಂಗ್, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ಹುದ್ದೆಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಸಹ ಒಂದು. ಉತ್ತಮ ಸ್ಯಾಲರಿ ಸಿಗುವ ಹುದ್ದೆಗಳಲ್ಲಿ ಇದು ಒಂದು. ವಾಣಿಜ್ಯ ವಿಭಾಗದಲ್ಲಿ 12 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ CA ಯಲ್ಲಿ ವೃತ್ತಿಜೀವನವನ್ನು ಮಾಡಬಹುದು. CA ಯಲ್ಲಿ ವೃತ್ತಿಜೀವನವನ್ನು ಮಾಡಲು ಇದು ಸಾಮಾನ್ಯ ಪ್ರಾವೀಣ್ಯತೆ ಪರೀಕ್ಷೆ (CPT) ಯೊಂದಿಗೆ ಪ್ರಾರಂಭವಾಗುತ್ತದೆ. CA ಓದಿದವರು ಅಕೌಂಟೆಂಟ್ ಆಗಬಹುದು, ಆಡಿಟರ್, ಇಂಟರ್ನಲ್ ಆಡಿಟರ್, ಫೈನಾನ್ಸಿಯಲ್ ರಿಪೋರ್ಟರ್ (financial reporter), SAP FICO ಕನ್ಸಲ್ಟೆಂಟ್ ಮತ್ತು ಟ್ಯಾಕ್ಸ್ ಕನ್ಸಲ್‌ಟಂಟ್ ಆಗಿ ಕರ್ತವ್ಯ ನಿರ್ವಹಿಸಬಹುದು.
ಕಂಪನಿ ಕಾರ್ಯದರ್ಶಿ (CS): ಪಿಯುಸಿಯಲ್ಲಿ ವಾಣಿಜ್ಯ ವಿಭಾಗ ಆರಿಸಿದ ವಿದ್ಯಾರ್ಥಿಗಳು 12th ನಂತರ ಕಂಪನಿ ಕಾರ್ಯದರ್ಶಿ ಅಧ್ಯಯನ ಮಾಡಬಹುದು. ಈ ಪದವಿಯ ನಂತರ ಉತ್ತಮ ವೃತ್ತಿ ಜೀವನ ನಿಮ್ಮದಾಗಲಿದೆ. ನಿಮಗೆ ದೊಡ್ಡ ಕಂಪನಿ, ಸಂಸ್ಥೆ ಅಥವಾ ಯಾವುದೇ ಇನ್ಸ್ಟಿಟ್ಯೂಟ್ನಲ್ಲಿ CA ಕೆಲಸ ಸಿಗುತ್ತದೆ. ಹೆಚ್ಚಿನ ವೇತನ ದೊರೆಯುತ್ತದೆ.
ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ (CWA) : 12 ರ ನಂತರವೂ ವಿದ್ಯಾರ್ಥಿಗಳು ICWA ಕೋರ್ಸ್ ಮಾಡಬಹುದು. ಇದಕ್ಕಾಗಿ 12ನೇ ತರಗತಿ ತೇರ್ಗಡೆಯಾದ ವಿದ್ಯಾರ್ಥಿಗಳು (students) ಮೊದಲು ಫೌಂಡೇಶನ್ ಕೋರ್ಸ್ ಮಾಡಬೇಕು. ವೆಚ್ಚ ನಿರ್ವಹಣಾ ಲೆಕ್ಕಪರಿಶೋಧಕರಾಗುವ ಗುರಿ ಹೊಂದಿರುವ ವಿದ್ಯಾರ್ಥಿಗಳು ಈ ಕೋರ್ಸ್ ಅನ್ನು ಮಾಡುತ್ತಾರೆ. ಕೋರ್ಸ್ ಮುಗಿದ ನಂತರ, ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಲಭ್ಯವಾಗುತ್ತದೆ.
ಇದನ್ನೂ ಓದಿ: Free Travel Facility For Senior Citizen : ಹಿರಿಯ ನಾಗರಿಕರೇ ನಿಮಗಿದೋ ಜಾಕ್‌ಪಾಟ್ ಸುದ್ದಿ!