Seed Bank: ರೈತರಿಗೆ ಮುಖ್ಯ ಮಾಹಿತಿ, ಅತಿ ಶೀಘ್ರದಲ್ಲಿ ಬೀಜ ಬ್ಯಾಂಕ್ ಸ್ಥಾಪನೆ
Seed Bank: ರೈತರಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ನಡುವೆ, ದೇಶಿ ಬೆಳೆಗಳ ಪ್ರೋತ್ಸಾಹ ಮತ್ತು ರೈತರ ಅಭಿವೃದ್ಧಿಗಾಗಿ ಚಿಕ್ಕಬಳ್ಳಾಪುರ (Chikkaballapura Establishment Of Seeds Bank)ಜಿಲ್ಲೆಯಲ್ಲಿ ಬೀಜ ಬ್ಯಾಂಕ್(Seed Bank) ಸ್ಥಾಪನೆ ಮಾಡಲಾಗುತ್ತಿದ್ದು, ಹೀಗಾಗಿ, ರೈತರು ವಿವಿಧ ತಳಿಯ ಬೀಜಗಳನ್ನು ಖರೀದಿ ಮಾಡಲು ನೆರವಾಗಲಿದೆ.
ಚಿಕ್ಕಬಳ್ಳಾಪುರದಲ್ಲಿ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್, ಕೃಷಿ ಇಲಾಖೆ, ಕೃಷಿ ವಿಶ್ವ ವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿರಿಧಾನ್ಯಗಳು, ತರಕಾರಿ ಮತ್ತು ಹಣ್ಣುಗಳಲ್ಲಿನ ಬೀಜಗಳ ವೈವಿಧ್ಯತೆಯ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಸದ್ಗುರು ಮಧುಸೂಧನ ಸಾಯಿ ಕಾಲಕ್ಕೆ ಅನುಗುಣವಾಗಿ ಬೆಳೆ ಬೆಳೆಯುವ ಬಗ್ಗೆ ರೈತರಿಗೆ ಅರಿವು ತರಬೇತಿ ನೀಡುವುದು ಅವಶ್ಯಕ ಎಂದು ಮಾಹಿತಿ ನೀಡಿದ್ದಾರೆ. ಅತೀ ಶೀಘ್ರದಲ್ಲೇ ಆಶ್ರಮದಲ್ಲಿ ರೈತರ ಸಬಲೀಕರಣಕ್ಕೆ ಪೂರಕವಾಗಿ(Seed Bank In Chikkaballapur) ಬೀಜ ಬ್ಯಾಂಕ್ ಸ್ಥಾಪಿಸಲಾಗುತ್ತದೆ. ಇದು ರೈತರಿಗೆ (Farmers) ವಿವಿಧ ತಳಿಗಳ ಬೀಜಗಳ ಖರೀದಿಯ ಜೊತೆಗೆ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಮಧುಸೂಧನ ಸಾಯಿ ಅವರು ಮಾಹಿತಿ ನೀಡಿದ್ದಾರೆ.
ರೈತರ ಕೃಷಿ, ತೋಟಗಾರಿಕೆ ಪದ್ದತಿಯಲ್ಲಿ ಸಮಗ್ರ ಬೆಳೆ ಪದ್ಧತಿಯನ್ನು ರೂಡಿಸಿಕೊಂಡು, ದೇಶಿಯ ತಳಿಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ರೈತರು ಹೊಸ ಹೊಸ ತಳಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಈ ಕಾರ್ಯಕ್ರಮದಲ್ಲಿ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಅಂಶವನ್ನು ಸಮೃದ್ಧಗೊಳಿಸುವ ಸಾವಯವ ಗೊಬ್ಬರಗಳ ಅಪರೂಪದ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶನ ಮಾಡಲಾಗಿದೆ. ಹಳೆಯ ಕಾಲದಲ್ಲಿ ರೈತರು ಬಳಕೆ ಮಾಡುತ್ತಿದ್ದ ಪ್ರಾಚೀನ ಕೃಷಿ ಉಪಕರಣಗಳ ಪ್ರದರ್ಶನ ಮಾಡಲಾಗಿ, 200ಕ್ಕೂ ಹೆಚ್ಚು ಬಗೆಯ ಭತ್ತದ ತಳಿಗಳನ್ನು ಪ್ರದರ್ಶಿಸಲಾಯಿತು.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಸತ್ಯ ಸಾಯಿ ಆಶ್ರಮದಲ್ಲಿನಡೆದ ತರಕಾರಿ ಮತ್ತು ಹಣ್ಣುಗಳಲ್ಲಿನ ಬೀಜಗಳ ವೈವಿಧ್ಯತೆಯ ಪ್ರದರ್ಶನದಲ್ಲಿ ಇರಿಸಲಾದ ವಿವಿಧ ತಳಿಯ ಬೀಜಗಳನ್ನು ಸದ್ಗುರು ಮಧುಸೂಧನ ಸಾಯಿ ಅವರು ವೀಕ್ಷಣೆ ಮಾಡಿದ್ದಾರೆ. ಬದನೆಕಾಯಿ, ಮೆಣಸಿನಕಾಯಿಗಳೇ ಮೊದಲಾದ ತರಕಾರಿಗಳ ಬಿತ್ತನೆಗಳು ವಿವಿಧ ರೀತಿಯ ಸೊಪ್ಪುಗಳು ಹಲಸು, ಮಾವುಗಳಂತಹ ಋುತುಮಾನದ ಹಣ್ಣುಗಳ ವೈವಿಧ್ಯಮಯ ಬೀಜಗಳ ಪ್ರದರ್ಶನ ನೀಡಲಾಗಿದೆ.
ಈ ಸಂದರ್ಭ ರೈತರು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ವಿವರಗಳ ಮಾಹಿತಿ ಪಡೆದಿದ್ದಾರೆ. ವಿವಿಧ ಪ್ರಗತಿಪರ ಸಾವಯವ ಕೃಷಿಕ ರೈತರೊಂದಿಗೆ ಸಂವಾದ ನಡೆಸಿ ತರಬೇತಿ ಕಾರ್ಯಕ್ರಮವನ್ನು ಕೈಗೊಳ್ಳಲಾಗಿತ್ತು. ಈ ಅಧಿವೇಶನದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಅನೇಕ ರೈತರು, ನಾನಾ ಬಗೆಯ ಕೃಷಿ ಸಂಶೋಧಕರು, ಸಾವಯವ ಪರಿವಾರದ ಮುಖ್ಯಸ್ಥ ಆನಂದ, ಸತ್ಯಸಾಯಿ ಸಂಸ್ಥೆಗಳ ಪ್ರಧಾನ ಸಂಪರ್ಕಾಧಿಕಾರಿ ಗೋವಿಂದ ರೆಡ್ಡಿ ಭಾಗಿಯಾಗಿದ್ದರು.