Hombale Movie with Sudeep: ಕಿಚ್ಚನ ಮುಂದಿನ ಸಿನಿಮಾ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದಲ್ಲಿ! ಏನಿದು ಹೊಸ ವಿಚಾರ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Share the Article

Hombale Movie with Sudeep: ಸುದೀಪ್‌ ಹೊಸ ಸಿನಿಮಾಗಾಗಿ ಹೊಂಬಾಳೆ ಫಿಲಂಸ್‌ ಜೊತೆಗೆ ಕೈ ಜೋಡಿಸಲಿದೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ‘ವಿಕ್ರಾಂತ್‌ ರೋಣ’ ಸಿನಿಮಾದ ಬಳಿಕ ಕಿಚ್ಚ ಸುದೀಪ್‌ (Sudeep) ಅವರ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಅಧಿಕೃತವಾಗಿ ಘೋಷಣೆ ಆಗದೇ ಇದ್ದರೂ ಕೂಡ ಅನೂಪ್‌ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಬಾಷಾ’ ಚಿತ್ರದ ತೆರೆಮರೆಯ ಕೆಲಸಗಳಲ್ಲಿ ಬಿಝಿಯಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಸುದೀಪ್ ಬಗ್ಗೆ ಸುದ್ದಿಯೊಂದು ಜೋರಾಗಿ ಸದ್ದು ಮಾಡುತ್ತಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹೊಂಬಾಳೆ ಫಿಲಂಸ್‌ನ ಕಾರ್ತಿಕ್‌ ಗೌಡ ಕಿಚ್ಚ ಸುದೀಪ್‌ ಜತೆಗಿನ ಫೋಟೋ ಹಂಚಿಕೊಂಡಿದ್ದರು. “ಹೊಸ ಆರಂಭವೊಂದು ಸುದೀಪ್‌ ಸರ್‌ ಜತೆ ಶುರುವಾಗಲಿದೆ” ಎಂದು ಟ್ವೀಟ್ ಮಾಡಿದ್ದರು. ಆಗ ಹೆಚ್ಚಿನ ಮಂದಿ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ( Hombale Movie with Sudeep)ಸುದೀಪ್‌ ಸಿನಿಮಾ (Cinema)ಮಾಡುತ್ತಾರಾ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡಿತ್ತು ಇದೀಗ, ಈ ಸುದ್ದಿ ನಿಜವೇ ಎಂಬ ಅನುಮಾನ ಸದ್ಯ ಅಭಿಮಾನಿಗಳ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕನ್ನಡದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌, ಸುದೀಪ್‌ ಚಿತ್ರವನ್ನು ನಿರ್ಮಾಣ ಮಾಡಲಿದೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಸದ್ಯ ಈ ವಿಚಾರ ಅಭಿಮಾನಿ(Fans) ವಲಯದಲ್ಲಿ ಕೂಡ ಸಂಚಲನ ಸೃಷ್ಟಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಕಾಂತಾರ ಸಿನಿಮಾದ ಮೂಲಕ ಎಲ್ಲೆಡೆ ಖ್ಯಾತಿ ಪಡೆದಿರುವ ಕನ್ನಡ ಚಿತ್ರೋದ್ಯಮವನ್ನು ಬೇರೆ ಹಂತಕ್ಕೆ ಒಯ್ದ ಹೊಂಬಾಳೆ ಫಿಲಂಸ್‌ ಸುದೀಪ್ ಅವರ 46ನೇ ಚಿತ್ರದ ನಿರ್ಮಾಣ ಕಾರ್ಯಕ್ಕೆ ಅಡಿ ಇಟ್ಟಿದೆ ಎನ್ನಲಾಗಿದೆ.

ಸದ್ಯ ಅನೂಪ್‌ ಭಂಡಾರಿ ಕಿಚ್ಚನ ‘ಬಿಲ್ಲ ರಂಗ ಬಾಷಾ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ, ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿನ ಸುದೀಪ್‌ ಚಿತ್ರವನ್ನು ಮಹಿಳಾ ನಿರ್ದೇಶಕರು ಆಕ್ಷನ್‌ ಕಟ್‌ ಹೇಳುತ್ತಾರೆ ಅನ್ನೋ ಗುಸು ಗುಸು ಸುದ್ದಿ ಕೇಳಿ ಬರುತ್ತಿದೆ. ತಮಿಳಿನಲ್ಲಿ(Tamil) ಈ ಹಿಂದೆ ರಿಲೀಸ್‌ ಆಗಿದ್ದ ‘ಸೂರರೈ ಪೊಟ್ರು’ ಚಿತ್ರ ನಿರ್ದೇಶನ ಮಾಡಿದ್ದ ಸುಧಾ ಕೊಂಗಾರ, ಸುದೀಪ್‌ ಅವರ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಈಗಾಗಲೇ ‘ಬಿಲ್ಲ ರಂಗ ಬಾಷಾ’ ಸಿನಿಮಾ ಕೆಲಸಗಳು ನಡೆಯುತ್ತಿದ್ದು, ಪ್ರೀ ಪ್ರೊಡಕ್ಷನ್‌ ಹಂತದಲ್ಲಿ ಈ ಸಿನಿಮಾ ಇರುವ ಹಿನ್ನೆಲೆ, ಸದ್ಯದಲ್ಲೇ ಶೂಟಿಂಗ್‌ ಗಾಗಿ ತಂಡ ಚಾಲನೆ ನೀಡಲಿದ್ದು, ಒಂದು ವೇಳೆ ಹೊಂಬಾಳೆ ಜತೆಗಿನ ಸಿನಿಮಾ ಘೋಷಣೆಯಾದಲ್ಲಿ, ಎರಡೂ ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೆ ಸುದೀಪ್‌ ಡೇಟ್ಸ್‌ ನೀಡುವ ಸಾಧ್ಯತೆಗಳಿವೆ. ಕಳೆದ ಎರಡು ವರ್ಷದ ಹಿಂದೆಯೇ ಸುಧಾ ಕೊಂಗಾರ ಅವರ ಜೊತೆಗೆ ಹೊಂಬಾಳೆ ಫಿಲಂಸ್‌ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿತ್ತು. ಈಗ ಹರಿದಾಡುತ್ತಿರುವ ಸುದ್ದಿಗಳನ್ನು ಗಮನಿಸಿದರೆ, ಸುಧಾ ಕೊಂಗಾರ ಅವರೇ ಸುದೀಪ್‌ ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ನಿಜವೆಂದು ಕಂಡುಬರುತ್ತಿದೆ.

ಇದನ್ನೂ ಓದಿ: Pushpa 2 : ಪುಷ್ಪ 2 ಸಿನಿಮಾ ಶೂಟಿಂಗ್‌ ಸ್ಥಗಿತ!!

Leave A Reply