Bollywood Actress: ಮದುವೆ ನಂತರ ಸಿನಿರಂಗವನ್ನು ತೊರೆದ ನಟಿಯರಿವರು!!
Bollywood Actress: ಮದುವೆಯಾದ ನಂತರವೂ ಹಲವು ನಟಿಯರು ತಮ್ಮ ಸಿನಿಜರ್ನಿಯನ್ನು ಮುಂದುವರೆಸುತ್ತಾರೆ. ಆದರೆ ಕೆಲವು ನಟಿಯರು (Bollywood Actress) ಮದುವೆಯಾದ ನಂತರ ಚಿತ್ರರಂಗಕ್ಕೆ ಕಾಲಿಡುವುದಿಲ್ಲ. ತಮ್ಮ ಸಿನಿ ಜರ್ನಿಯನ್ನು ಮುಕ್ತಾಯಗೊಳಿಸುತ್ತಾರೆ. ಯಾರೆಲ್ಲಾ ನಟಿಯರು ಮದುವೆ (marriage) ಬಳಿಕ ಕುಟುಂಬಕ್ಕಾಗಿ ಸಿನಿರಂಗವನ್ನು ತ್ಯಜಿಸಿದರು ಎಂಬ ಮಾಹಿತಿ ಇಲ್ಲಿದೆ.
ನೀತು ಕಪೂರ್: ನಟಿ ನೀತು ಕಪೂರ್ (neetu Kapoor) ಅವರು ರಿಷಿ ಕಪೂರ್ (Rishi kapoor) ಅವರನ್ನು ಪ್ರೀತಿಸಿ, ಜನವರಿ 22, 1980 ರಂದು ವಿವಾಹವಾದರು. ಬಾಲನಟಿಯಾಗಿದ್ದ ನೀತು ಸಿಂಗ್ ನಂತರ ನಾಯಕಿಯಾಗಿ ಬಾಲಿವುಡ್ನಲ್ಲಿ ಅಭಿನಯಿಸತೊಡಗಿದ್ದರು. ಆದರೆ ವಿವಾಹದ ನಂತರ ತನ್ನ ಸಂಪೂರ್ಣ ಗಮನವನ್ನು ಕುಟುಂಬದ ಕಡೆ ಕೊಡಲು ನಿರ್ಧರಿಸಿದ ನೀತು ಸಿಂಗ್ ಸಿನಿರಂಗಕ್ಕೆ ಫುಲ್ ಸ್ಟಾಪ್ ಇಟ್ಟರು. ಆದರೆ, ಮದುವೆಯಾಗಿ ಹಲವು ವರ್ಷಗಳ ನಂತರ ಮತ್ತೆ ತೆರೆಗೆ ಮರಳಿದ್ದರು. ರಿದ್ಧಿಮಾ ಕಪೂರ್ ಹಾಗೂ ರಣಬೀರ್ ಕಪೂರ್ (Ranbir Kapoor) ಇವರ ಮಕ್ಕಳು.
ಸೈರಾ ಬಾನು (Saira Banu): ಸೈರಾ ಬಾನು ಹಿರಿಯ ಚಲನಚಿತ್ರ ನಟಿ. ಇವರು ನಟ ದಿಲೀಪ್ ಕುಮಾರ್ ಅವರನ್ನು ವಿವಾಹವಾಗಿದ್ದು, ಮದುವೆಯ ನಂತರ ನಟಿ ಸೈರಾ ಬಾನು ಚಿತ್ರರಂಗವನ್ನು ತೊರೆದು ಕುಟುಂಬದತ್ತ ಗಮನಹರಿಸಿದರು.
ಮೀನಾಕ್ಷಿ : ಬಾಲಿವುಡ್ ನಟಿ ಹಿಟ್ ಸಿನಿಮಾಗಳನ್ನು ನೀಡಿದ್ದು, ಮದುವೆ ನಂತರ ಸಿನಿಮಾರಂಗ ತ್ಯಜಿಸಿದರು. ಕುಟುಂಬ ಸಮೇತ ಅಮೆರಿಕದಲ್ಲಿ ವಾಸವಾದರು.
ಮುಮ್ತಾಜ್ : ಮುಮ್ತಾಜ್ ಸೂಪರ್ ಹಿಟ್ ನಟಿಯೂ ಹೌದು. ನಟಿ ಮಯೂರ್ ಮಾಧ್ವನಿ ಅವರನ್ನು ಮದುವೆಯಾಗಿದ್ದು, ವಿವಾಹದ ನಂತರ ನಟಿ ಚಿತ್ರರಂಗವನ್ನು ತೊರೆದು ವಿದೇಶದಲ್ಲಿ ತೆರಳಿದರು.
ಬಬಿತಾ ರಣಧೀರ್ ಕಪೂರ್ (babita randhir kapoor) : ಬಬಿತಾ ರಣಧೀರ್ ಕಪೂರ್ ಎಂಬವರನ್ನು ವಿವಾಹವಾಗಿದ್ದು, ಮದುವೆಯ ಬಳಿಕ ನಟಿ ಸಿನಿರಂಗ ತ್ಯಜಿಸಿದರು. ಕಪೂರ್ ಕುಟುಂಬದಲ್ಲಿ ಮದುವೆಯ ನಂತರ ಸೊಸೆ ಸಿನಿಮಾಗಳಲ್ಲಿ ಕೆಲಸ ಮಾಡುವಂತಿರಲಿಲ್ಲ. ಈ ಕಾರಣಕ್ಕಾಗಿ, ಅವರು ಮದುವೆಯಾದ ನಂತರ ನಟನಾ ವೃತ್ತಿಯನ್ನು ತೊರೆದರು. ಸದ್ಯ ಇವರ ಮಕ್ಕಳು ಕರಿಷ್ಮಾ ಕಪೂರ್ (Karishma kapoor) ಮತ್ತು ಕರೀನಾ ಕಪೂರ್ (kareena kapoor).
ಸೊನಾಲಿ ಬೇಂದ್ರೆ (Sonali Bendre): ಇವರು ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ನಟಿ. ಬೆರಳೆಣಿಕೆಯಷ್ಟು ಪರಭಾಷಾ ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ `ಪ್ರೀತ್ಸೆ’ (preethse)ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಮದುವೆಯ ನಂತರ ಚಿತ್ರರಂಗಕ್ಕೆ ಬ್ರೇಕ್ ಕೊಟ್ಟರು. ಕೆಲವು ವರ್ಷಗಳ ನಂತರ, ಅವರು ಮತ್ತೆ ಉದ್ಯಮಕ್ಕೆ ಮರಳಿದರು.