Avatar : ‘ಅವತಾರ್ : ದಿ ವೇ ಆಫ್ ವಾಟರ್ ’ ಸಿನಿಮಾ ಒಟಿಟಿಯಲ್ಲಿ ಪ್ರದರ್ಶನ ಶುರು !

Avatar 2 on OTT :ಹಾಲಿವುಡ್ ನಿರ್ದೇಶಕ ಜೇಮ್ಸ್ ಕೆಮರೂನ್ ಅವರ ‘ಅವತಾರ್ ದಿ ವೇ ಆಫ್ ವಾಟರ್’ ಸಿನಿಮಾ ಒಟಿಟಿ ವೇದಿಕೆಗೆ ( Avatar 2 on OTT) ಲಗ್ಗೆ ಇಟ್ಟಿದೆ.

 

ನಿನ್ನೆ ಮಾರ್ಚ್ 28 ರಿಂದ ಅಮೆಜಾನ್ ಪ್ರೈಮ್, ಆ್ಯಪಲ್ ಹಾಗೂ ಅಮೆರಿಕದ ಜನಪ್ರಿಯ ಸ್ಟ್ರೀಮಿಂಗ್ ಆ್ಯಪ್ (VUDU) ಗಳಲ್ಲಿ ಅವತಾರ್ 2 ಪ್ರಸಾರ ಶುರುವಾಗಿದೆ.

ಈ ಬಗ್ಗೆ ಅವತಾರ್ 2 ಚಿತ್ರದ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ಅವತಾರ್ 2 ಚಿತ್ರವು ಡಿಸೆಂಬರ್ 16 ರ ಶುಕ್ರವಾರ ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ತನ್ನ ಪ್ರದರ್ಶನ ಶುರುಮಾಡಿ ನಿರೀಕ್ಷೆಯಂತೆಯೇ ಭಾರೀ ಪ್ರಮಾಣದಲ್ಲಿ ಜನಮನ್ನಣೆ ಗಳಿಸಿತು. ಕಲೆಕ್ಷನ್ ನಲ್ಲಿ ಕೂಡಾ ಚಿತ್ರವು ಹಿಂದೆ ಬೀಳದೆ ಜಾಗತಿಕವಾಗಿ ಈಗ ಮೂರನೇ ಸ್ಥಾನಕ್ಕೆ ನೆಗೆದು ನಿಂತಿದೆ. ಅವತಾರ್ 2 ದ ವೇ ಆಫ್ ವಾಟರ್ ಚಿತ್ರವು ಜಾಗತಿಕವಾಗಿ 18,300 ಕೋಟಿಗಳನ್ನು ಗಳಿಸಿದ್ದು, ಆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದೇ ನಿರ್ದೇಶಕರ ಅವತಾರ್ ಚಿತ್ರ ಇದ್ದರೆ, ಎರಡನೆಯ ಸ್ಥಾನದಲ್ಲಿ ಅವೆಂಜರ್ ದ ಎಂಡ್ ಗೇಮ್ ಇದೆ.

3 ಗಂಟೆ 11 ನಿಮಿಷ ವಿಸ್ತಾರದ ಈ ಚಿತ್ರ ಭಾರತದಲ್ಲಿ ಸುಮಾರು 3,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿತ್ತು. ‘20th ಸೆಂಚುರಿ ಸ್ಟುಡಿಯೋಸ್‌ ಇಂಡಿಯಾ’ ಕಂಪನಿ ಭಾರತದಲ್ಲಿ ಈ ಚಿತ್ರವನ್ನು ಹಂಚಿಕೆ ಮಾಡಿತ್ತು. ಭಾರತ ಒಂದರಲ್ಲೇ ಈ ಚಿತ್ರವು 380 ಕೋಟಿಗಳನ್ನು ಗಳಿಸಿದೆ.

ಟೈಟಾನಿಕ್ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಈ ಚಿತ್ರದಲ್ಲಿ ನಟರಾದ ವರ್ಥಿಂಗ್‌ಟನ್, ಜೋ ಸಲ್ಡಾನಾ, ಸ್ಟೀಪನ್ ಲಾಂಗ್, ಮಿಚಲ್ ರೋಡ್ರಿಗಜ್, ಸಿಗೋರನಿ ವೇವರ್ ಮತ್ತು ಅಂದು ಟೈಟಾನಿಕ್ ಚಿತ್ರದಲ್ಲಿ ನಾಯಕಿಯಾಗಿ.ನಟಿಸಿದ ಕೇಟ್ ವಿನ್ಸ್‌ಲೆಟ್ ಕೂಡಾ ನಟಿಸಿದ್ದಾಳೆ. ಈಗ ಓಟಿಟಿ ಚಿತ್ರ ಬಿಡುಗಡೆಯಾಗಿದೆ. ಇಲ್ಲಿ ಅದ್ಯಾವ ಮೋದಿ ಮಾಡಲಿದೆ ಎನ್ನುವುದನ್ನು ಕಾದು ನೋಡಿ ಹೇಳಲು ಇನ್ನು ಹೆಚ್ಚು ದಿನಗಳು ಬೇಕಿಲ್ಲ.

Leave A Reply

Your email address will not be published.