Home Breaking Entertainment News Kannada Umair Sandhu Tweet On Yash : ಯಶ್ ವಿರುದ್ಧ ಮತ್ತೆ ಗುಡುಗಿದ ವಿಮರ್ಶಕ ಉಮೈರ್‌...

Umair Sandhu Tweet On Yash : ಯಶ್ ವಿರುದ್ಧ ಮತ್ತೆ ಗುಡುಗಿದ ವಿಮರ್ಶಕ ಉಮೈರ್‌ ಸಂಧು ; ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತ!!

Umair Sandhu Tweet On Yash

Hindu neighbor gifts plot of land

Hindu neighbour gifts land to Muslim journalist

Umair Sandhu Tweet On Yash: ಸಿನಿಮಾ ಎಂಬ ದುನಿಯಾ ಪ್ರಪಂಚದಲ್ಲಿ ಎತ್ತರದ ಮೆಟ್ಟಿಲನ್ನು ಹತ್ತುವುದು ಸುಲಭದ ಮಾತಲ್ಲ. ಯಶ್ (Yash) ಕೂಡ ಸಣ್ಣಪುಟ್ಟ ಸಿನಿಮಾ ಮಾಡಿ, ನಂತರ ಕೆಜಿಎಫ್‌ (KGF) ಎಂಬ ಬಹುದೊಡ್ಡ ಹಿಟ್ ಸಿನಿಮಾದ ಮೂಲಕ ಎಲ್ಲೆಡೆ ಖ್ಯಾತಿ ಪಡೆದರು. ಬ್ಲಾಕ್ ಬಸ್ಟರ್ ಮೂವಿ (block buster movie) ಕೆಜಿಎಫ್ 2(KGF 2) ಚಲನಚಿತ್ರದ ಮೂಲಕ ಜನಮನ ಗೆದ್ದು, ಜನಪ್ರೀಯತೆ ಗಳಿಸಿದ್ದು ಮಾತ್ರವಲ್ಲದೆ, ಕನ್ನಡ ಸಿನಿಮಾರಂಗವನ್ನು ಬೇರೆ ಲೆವೆಲ್ ಗೆ ಕೊಂಡೊಯ್ದರು. ಯಶ್‌ ಅಬ್ಬರಕ್ಕೆ ಸಿನಿರಂಗದ ಎಲ್ಲ ದಾಖಲೆಗಳು ಉಡೀಸ್‌ ಆದವು. ಅಭಿಮಾನಿಗಳು ಹೆಚ್ಚಾದಾಗೇ ದುಷ್ಮನ್ ಗಳೂ ಹೆಚ್ಚಾಗಿದ್ದಾರೆ. ಹೌದು, ಈ ಹಿಂದೆ ಕೆಜಿಎಫ್ 2 ಚಲನಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ನಾಯಕಿಯಾಗಿದ್ದ ಶ್ರೀನಿಧಿ ಶೆಟ್ಟಿಯ (srinidhi Shetty) ಹೆಸರನ್ನು ಬಳಸಿಕೊಂಡು ರಾಕಿಂಗ್ ಸ್ಟಾರ್ ಯಶ್ (rocking star Yash) ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ್ದ ಉಮೈರ್‌ ಸಂಧು ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ (Umair Sandhu Tweet On Yash). ಮತ್ತೆ ಯಶ್ ವಿರುದ್ಧ ಗುಡುಗಿದ್ದು, ಅಭಿಮಾನಿಗಳು ಈತನ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಸ್ವಯಂಘೋಷಿತ ವಿಮರ್ಶಕ ಉಮೈರ್ ಸಂಧು ಅವರು “ಕೆಜಿಎಫ್‌ ಸಿನಿಮಾದ (KGF Cinema) ಶೂಟಿಂಗ್‌ (Shooting) ಸೆಟ್‌ನಲ್ಲಿ ನಟ ಯಶ್‌ ಶ್ರೀನಿಧಿ ಶೆಟ್ಟಿ ಅವರಿಗೆ ಕಿರುಕುಳ ನೀಡಿದ್ದಾರೆ” ಎಂಬ ಟ್ವೀಟ್ ಮಾಡಿದ್ದರು. ಕೆಜಿಎಫ್‌ ಚಾಪ್ಟರ್‌ 2 ( KGF – 2)ಶೂಟಿಂಗ್‌ ಸೆಟ್‌ನಲ್ಲಿ ಯಶ್‌ ಅವರಿಂದ ಮಾನಸಿಕವಾಗಿ ಕಿರುಕುಳ ಅನುಭವಿಸಿದ್ದು, ಇನ್ಮುಂದೆ ನಾನು ಯಶ್‌ ಜೊತೆ ಎಂದಿಗೂ ಕೆಲಸ ಮಾಡುವುದಿಲ್ಲ ಎಂಬ ಟ್ವೀಟ್ ವೈರಲ್ ಆಗಿದ್ದು, ಇದನ್ನು ಉಮೈರ್‌ ಸಂಧು (Umair Sandhu) ಶ್ರೀನಿಧಿ ಹೇಳಿದ್ದಾರೆಂದು ಹೇಳಿಕೊಂಡು ಟ್ಟಿಟರ್‌ನಲ್ಲಿ ಯಶ್ ವಿಷಕಾರಿ, ಕಿರುಕುಳ ನೀಡುವ ವ್ಯಕ್ತಿತ್ವದವರು ಎಂದು ಹೇಳಿದ ಪೋಸ್ಟ್ (Post) ಮಾಡಿದ್ದರು. ಇದು ಎಲ್ಲೆಡೆ ವೈರಲ್ ಆಗಿ ರಾಕಿಭಾಯ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ನಂತರದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಪೋಸ್ಟ್ ಗಮನಿಸಿ, ಶ್ರೀನಿಧಿ ಪ್ರತಿಕ್ರಿಯೆ ನೀಡಿದ್ದು, (Srinidhi Shetty Clarification on Umair Sandhu Tweet) ”ಕೆಲವರು ಸಾಮಾಜಿಕ ಮಾಧ್ಯಮದ ಬಳಸಿಕೊಂಡು ಗಾಳಿಸುದ್ದಿ ಹರಡಲು ಯತ್ನಿಸಿದ್ದು, ನಾನು ಪ್ರೀತಿ, ಸಂತೋಷವನ್ನು ಹರಡಲು ಮತ್ತು ನನ್ನ ಜೀವನದಲ್ಲಿ ಮಹತ್ವದ ವ್ಯಕ್ತಿಗಳಿಗೆ ನನ್ನ ಆಳವಾದ ಮೆಚ್ಚುಗೆಯನ್ನು ತೋರಿಸಲು ಅದನ್ನು ಬಳಕೆ ಮಾಡುತ್ತೇನೆ. KGF ನ ವೈಭವದ ಜಗತ್ತು ಸೃಷ್ಟಿಯಾದಾಗ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಕೆಲಸ ಮಾಡಿರುವುದು ನನಗೆ ನಿಜವಾಗಿಯೂ ಸಂಪೂರ್ಣ ಗೌರವ, ಅವಕಾಶ ನೀಡಿದೆ. ಯಶ್‌ ಜತೆ ಕೆಲಸ ಮಾಡಲು ನಾನು ನಿಜಕ್ಕೂ ಅದೃಷ್ಟ ಮಾಡಿದೆ. ಅವರೊಬ್ಬ ರಿಯಲ್‌ ಜೆಂಟಲ್‌ಮ್ಯಾನ್ ಅಷ್ಟೆ ಅಲ್ಲದೆ ಒಬ್ಬ ಮೆಂಟರ್‌ ಜೊತೆಗೆ ಅಷ್ಟೇ ಒಳ್ಳೆಯ ಸ್ನೇಹಿತರಾಗಿದ್ದಾರೆ. ಯಶ್‌ ನನ್ನ ಸ್ಫೂರ್ತಿ” ಎಂದು ಶ್ರೀ ನಿಧಿ ಶೆಟ್ಟಿ ಹೇಳಿಕೊಂಡಿದ್ದಾರೆ. ಇದೆಲ್ಲದರ ನಡುವೆ ನಾನು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಬಹುದೊಡ್ಡ ಅಭಿಮಾನಿಯೆಂದು ಹೇಳಿದ್ದು, ಜಾಲತಾಣದಲ್ಲಿ ಹರಿದಾಡಿದ ಊಹಾಪೋಹ ಗಳಿಗೆ ತೆರೆ ಎಳೆದಿದ್ದಾರೆ.

ಆದರೆ ಇಷ್ಟಕ್ಕೆ ಸುಮ್ಮನಿರದ ಸ್ವಯಂಘೋಷಿತ ವಿಮರ್ಶಕ ಉಮೈರ್ ಸಂಧು ಅವರು ಮತ್ತೆ ಯಶ್ ವಿರುದ್ಧ ಕಿಡಿಕಾರಿದ್ದಾರೆ. ಹೌದು, ಈ ಬಾರಿ ಯಶ್ ಗೆ ತುಂಬಾ ಆಯಟಿಟ್ಯೂಡ್ ಇದೆ ಎಂದು ಎಲ್ಲೆಡೆ ಸುದ್ದಿ ಹರಡಿದ್ದಾರೆ. “ಆಯಟಿಟ್ಯೂಡ್ ನೋಡಿ ದಕ್ಷಿಣ ಹಾಗೂ ಬಾಲಿವುಡ್‌ನ ಪ್ರೊಡಕ್ಷನ್​ ಹೌಸ್‌ಗಳು ಯಶ್ ಅವರನ್ನು ಹೊರಗಿಟ್ಟಿವೆ. ಕೆಜಿಎಫ್ 2 ಬಳಿಕ ಅವರು ಪ್ರತಿ ಚಿತ್ರಕ್ಕೆ 75 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ. ಇದು ತುಂಬಾ ಜಾಸ್ತಿಯಾಯಿತು ಎಂದು ನಿರ್ಮಾಪಕರ ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಕ್ಕೆ ಯಾರೂ ಯಶ್ ಜೊತೆ ಸಿನಿಮಾ ಮಾಡಲು ಮುಂದೆ ಬರ್ತಿಲ್ಲ” ಎಂದು ಸಂಧು ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದು, ಯಶ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಈ ಟ್ವೀಟ್ ಗೆ ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Weekend With Ramesh : ವೀಕೆಂಡ್‌ ವಿತ್‌ ರಮೇಶ್‌ ಶೋನ ಗೆಸ್ಟ್‌ ಲಿಸ್ಟ್‌ ಬಹಿರಂಗ ಪಡಿಸಿದ ರಮೇಶ್‌ ಅರವಿಂದ್!‌ ಇಲ್ಲಿದೆ ಸಂಪೂರ್ಣ ಪಟ್ಟಿ