KEA ಯಿಂದ ಉದ್ಯೋಗವಕಾಶ! ಆಸಕ್ತರು ಈ ಕೂಡಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ! ಹೆಚ್ಚಿನ ಮಾಹಿತಿ ಇಲ್ಲಿದೆ

KEA Job Notification 2023 : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ಕಛೇರಿಯಲ್ಲಿ ಮಾಧ್ಯಮ ಸಂಯೋಜಕ ಕಂ ಕಾಲ್ ಸೆಂಟರ್ ಉಸ್ತುವಾರಿ ಹುದ್ದೆಗಳ ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಬೆಂಗಳೂರು ಕಛೇರಿಯಲ್ಲಿ ಅವಶ್ಯವಿರುವ ಮೀಡಿಯಾ ಕೋಆರ್ಡಿನೇಟರ್ (Media coordinators)ಕಮ್ ಕಾಲ್ ಸೆಂಟರ್ ಇನ್‌ಚಾರ್ಜ್‌ ಹುದ್ದೆಗಳ ಭರ್ತಿಗೆ ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯು (KEA) ಅರ್ಜಿ ಆಹ್ವಾನ(KEA Job Notification 2023) ಮಾಡಿದ್ದು, ಈ ಹುದ್ದೆಗೆ ಅಭ್ಯರ್ಥಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಖಾಲಿ ಹುದ್ದೆಗಳು, ವೇತನ, ಆಯ್ಕೆ ಪ್ರಕ್ರಿಯೆ ಕುರಿತ ಮಾಹಿತಿ ತಿಳಿದಿರುವುದು ಅವಶ್ಯಕ.

ಉದ್ಯೋಗ ಇಲಾಖೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)
ಹುದ್ದೆಯ ಹೆಸರು: ಮಾಧ್ಯಮ ಸಂಯೋಜಕ ಕಂ ಕಾಲ್ ಸೆಂಟರ್ ಉಸ್ತುವಾರಿ
ಹುದ್ದೆಗಳ ಸಂಖ್ಯೆ : 01
ಹುದ್ದೆಯ ಅವಧಿ : 06 ತಿಂಗಳು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 19-03-2023
ವಿದ್ಯಾರ್ಹತೆ(Education Qualification)
ಪಿಹೆಚ್‌ಡಿ, ಎಂಎ ಜೊತೆಗೆ ಸ್ಪಷ್ಟ, ಸುಲಲಿತವಾಗಿ ಮಾತನಾಡುವ ಕೌಶಲ್ಯವಿರಬೇಕು. ಸಮಯ ನಿರ್ವಹಣೆ (Time Management Skills), ಕನ್ನಡ ಮತ್ತು ಇಂಗ್ಲಿಷ್ ಅನ್ನು ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು.

ಕಾರ್ಯಾನುಭವ :
20 ವರ್ಷ ಕನಿಷ್ಠ ಯಾವುದಾದರೂ ಒಂದು ಪ್ರಮುಖ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು. ಸರ್ಕಾರಿ ಕಛೇರಿಗಳಲ್ಲಿ 1 ವರ್ಷ ಕನಿಷ್ಠ ಮಾಧ್ಯಮ ಸಂಯೋಜಕರಾಗಿ ಕೆಲಸ ಮಾಡಿರಬೇಕಾಗುತ್ತದೆ.

ನೇಮಕ ವಿಧಾನ(Selection Procedures)
ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಪ್ರಾಯೋಗಿಕ ಪರೀಕ್ಷೆಯ ಮುಖಾಂತರ ತಮ್ಮ ರೆಸ್ಯೂಮ್( Resume)ಅಗತ್ಯ ದಾಖಲೆಗಳ ಸ್ಕ್ಯಾನ್ ಕಾಪಿಗಳನ್ನು ಪ್ರಾಧಿಕಾರದ ಇ-ಮೇಲ್ ವಿಳಾಸ keaopportunities@gmail.com ಗೆ ಕಳುಹಿಸಬೇಕಾಗುತ್ತದೆ.

ವೇತನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ಹೊರಡಿಸಿರುವ ನೋಟಿಫಿಕೇಶನ್‌(KEA Job Notification 2023) ಅನುಸಾರ ವೇತನದ ಬಗ್ಗೆ ಮಾಹಿತಿ ನೀಡಿಲ್ಲ ಆದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನದ ಕುರಿತು ಶೀಘ್ರದಲ್ಲೇ ಮಾಹಿತಿ ನೀಡಲಾಗುತ್ತದೆ. ಆಯ್ಕೆಯಾದ (Shortlist) ಆದ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗೆ ಇ-ಮೇಲ್‌ ಮೂಲಕ ಹಾಜರಾಗಲು ಮಾಹಿತಿ ನೀಡಲಾಗುತ್ತದೆ. ಈ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾರ್ಚ್ 19 ಕೊನೆ ದಿನಾಂಕವಾಗಿದ್ದು, ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

Leave A Reply

Your email address will not be published.