Home Jobs RDPR Recruitment 2023 : ಪಂಚಾಯತ್‌ ರಾಜ್‌ ಇಲಾಖೆಯಿಂದ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ!...

RDPR Recruitment 2023 : ಪಂಚಾಯತ್‌ ರಾಜ್‌ ಇಲಾಖೆಯಿಂದ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!

RDPR Recruitment 2023

Hindu neighbor gifts plot of land

Hindu neighbour gifts land to Muslim journalist

RDPR Recruitment 2023: ಸರ್ಕಾರಿ ಉದ್ಯೋಗದ (government job) ಹುಡುಕಾಟದಲ್ಲಿರುವವರಿಗೆ ಉತ್ತಮ ಅವಕಾಶ ಇಲ್ಲಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಸಂಬಂಧದಲ್ಲಿ ಸ್ವೀಕೃತವಾಗುವ ದೂರಗಳ ವಿಲೇವಾರಿ ಹಾಗೂ ಕುಂದುಕೊರತೆಗಳ ನಿವಾರಣೆಗಾಗಿ ಓಂಬುಡ್ಸ್‌ಪರ್ಸನ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ (RDPR Recruitment 2023). ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಒಂಬುಡ್ಸ್‌ಮನ್‌ ಹುದ್ದೆಯು (Ombuds Persons job) Full Time ಹುದ್ದೆಯಾಗಿದ್ದು, ವಿದ್ಯಾರ್ಹತೆ, ವೇತನ, ಅರ್ಹತೆಗಳ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಹುದ್ದೆಯ ವಿವರ:
ಹುದ್ದೆಯ ಹೆಸರು : ಒಂಬುಡ್ಸ್‌ಮನ್‌

ಪ್ರಮುಖ ದಿನಾಂಕಗಳು:
ಪ್ರಕಟಣೆ ದಿನಾಂಕ -16/3/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 13/4/2023

ವೇತನ: INR 19998/Month
ವಿದ್ಯಾರ್ಹತೆ : ಪದವಿ / ಸ್ನಾತಕೋತ್ತರ ಪದವಿ
ವಯೋಮಿತಿ: ಗರಿಷ್ಠ 66 ವರ್ಷ

ಉದ್ಯೋಗ ಸ್ಥಳ: ಚಾಮರಾಜನಗರ, ಗದಗ, ಮಂಡ್ಯ, ತುಮಕೂರು ಮತ್ತು ವಿಜಯಪುರ.

ಅರ್ಹತೆ:
• ಸಾರ್ವಜನಿಕ ಆಡಳಿತ / ಕಾನೂನು / ಶೈಕ್ಷಣಿಕ ಕ್ಷೇತ್ರ / ಸಮಾಜ ಸೇವೆ/ ಮ್ಯಾನೇಜ್‌ಮೆಂಟ್‌ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಕಾರ್ಯಾನುಭವ ಇರಬೇಕು.
• ಸಾರ್ವಜನಿಕರೊಂದಿಗೆ ಅಥವಾ ಸಮುದಾಯದ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇರಬೇಕು.
• ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷದ ಮತ್ತು ನಿಷೇದಿತ ಸಂಘ ಸಂಸ್ಥೆಯ ಸದಸ್ಯರಾಗಿರಬಾರದು.
• ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲು ದೈಹಿಕವಾಗಿ ಸಮರ್ಥರಾಗಿರಬೇಕು.

ಪ್ರಸ್ತುತ ಮಾಸಿಕ ರೂ.10,000 ಗೌರವಧನ ಹಾಗೂ ಪ್ರತಿ ಸಿಟ್ಟಿಂಗ್‌ಗೆ ರೂ.1000 ದಂತೆ ಗರಿಷ್ಠ ರೂ.20,000 ಮಿತಿಗೊಳಪಟ್ಟು ಸಿಟ್ಟಿಂಗ್ ಫೀಜು ನೀಡಲಾಗುತ್ತದೆ. ನೇಮಕಾತಿಯು 2 ವರ್ಷಗಳ ಅವಧಿಯದಾಗಿರುತ್ತದೆ. ಹಾಗೆಯೇ ಕೇಂದ್ರ / ರಾಜ್ಯ ಸರ್ಕಾರದ ಆದೇಶಗಳ ಅನುಸಾರ ವೇತನ, ಸಿಟ್ಟಿಂಗ್ ಫೀಜು ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ:
• ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್‌ www.rdpr.karnataka.gov.in ಗೆ ಭೇಟಿ ನೀಡಿ.
• ನಂತರ ನೀಡಲಾದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ‌
• ಕೇಳಲಾಗುವ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ.

ವಿಳಾಸ : ಆಯುಕ್ತರು ಗ್ರಾಮೀಣಾಭಿವೃದ್ಧಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
5ನೇ ಮಹಡಿ, ಪ್ಲಾಟ್ ನಂಬರ್ 1243
ಕೆಎಸ್‌ಐಐಡಿಸಿ ಕಟ್ಟಡ
ಐಟಿ ಪಾರ್ಕ್‌, ಸೌತ್‌ ಬ್ಲಾಕ್‌
ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್
ಬೆಂಗಳೂರು -560044.