Home Breaking Entertainment News Kannada Rashmika Mandanna : ಈ ಯುವ ಕ್ರಿಕೆಟಿಗನಿಗೆ ನಟಿ ರಶ್ಮಿಕಾ ಮೇಲೆ ಬೇಜಾನ್‌ ಕ್ರಶ್‌ ಅಂತೆ!...

Rashmika Mandanna : ಈ ಯುವ ಕ್ರಿಕೆಟಿಗನಿಗೆ ನಟಿ ರಶ್ಮಿಕಾ ಮೇಲೆ ಬೇಜಾನ್‌ ಕ್ರಶ್‌ ಅಂತೆ! ಯಾರೀ ಸ್ಟಾರ್‌ ಕ್ರಿಕೆಟಿಗ?

Hindu neighbor gifts plot of land

Hindu neighbour gifts land to Muslim journalist

Rashmika Mandanna:ನ್ಯಾಷನಲ್ ಕ್ರಶ್ ಅಂತಲೇ ಕರೆಯಲ್ಪಡುವ ರಶ್ಮಿಕಾ ಮಂದಣ್ಣ ಅವರ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ತಮ್ಮ ಹವಾ ಫುಲ್ ಜೋರಾಗಿಯೇ ಇದೆ. ಅದರಲ್ಲೂ ಸಾಮಾಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿಯು ಹೌದು. ಇದೀಗ ಸ್ಟಾರ್ ಕ್ರಿಕೆಟಿಗನೊಬ್ಬ ನಟಿ ರಶ್ಮಿಕಾ ಗೆ ಫುಲ್ ಫಿದಾ ಆಗಿದ್ದಾರೆ.

ಇತ್ತೀಚೆಗೆ ಶುಭ್​ಮನ್ ಗಿಲ್​ ನೀಡಿದ ಮಾಧ್ಯಮ ಸಂವಾದದಲ್ಲಿ ನಿಮಗೆ ಯಾವ ನಟಿಯೆಂದರೆ ಇಷ್ಟ? ಯಾರ ಮೇಲೆ ಕ್ರಶ್ ಇದೆ ಎಂಬ ಪ್ರಶ್ನೆ ಕೇಳಲಾಗಿದ್ದು, ಈ ಪ್ರಶ್ನೆಗೆ ಮೊದಲು ಗಿಲ್ ಮುಗುಳ್ನಗೆ ಬೀರಿ ಸುಮ್ಮನಾಗಿದ್ದಾರೆ . ಆ ನಂತರ ಮಾಧ್ಯಮದವರು ಉತ್ತರ ಹೇಳುವಂತೆ ಒತ್ತಾಯಿಸಿದಾಗ, ನನಗೆ ನಟಿ ರಶ್ಮಿಕಾ ಮಂದಣ್ಣ ಎಂದರೆ ಬಹಳ ಇಷ್ಟ ಎಂದಿದ್ದಾರೆ.

ಹೌದು ಇತ್ತೀಚೆಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್(Sara Ali Khan) ಜೊತೆಗೆ ಹೆಚ್ಚಾಗಿ ಹೆಸರು ಕೇಳಿ ಬರುತ್ತಿರುವ ಭಾರತದ ಯುವ ಕ್ರಿಕೆಟರ್ ಶುಭ್ಮನ್ ಗಿಲ್ (Shubman Gill), ಇತ್ತೀಚೆಗೆ ಮಾಧ್ಯಮದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಎಂದರೆ ಬಹಳ ಇಷ್ಟವೆಂದು ಹೇಳಿಕೊಂಡಿದ್ದಾರೆ.

ಆದರೆ ಶುಭ್​ಮನ್ ಗಿಲ್ ಹೆಸರು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆಗೆ ಡೇಟಿಂಗ್ ನಲ್ಲಿ ಬಿಸಿ ಆಗಿದ್ದಾರೆ ಎಂಬ ಗಾಸಿಪ್ ನಡುವೆ ಶುಭ್​ಮನ್ ಗಿಲ್ ತಮಗೆ ರಶ್ಮಿಕಾ ಮೇಲೆ ಕ್ರಶ್ ಆಗಿದೆ ಎಂದಿರುವುದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.

ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ, ಸಿನಿಮಾ ರಂಗಕ್ಕೆ ಕಾಲಿಟ್ಟ ರಶ್ಮಿಕಾ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳ ಅವಕಾಶವನ್ನು ತಮ್ಮದಾಗಿಸಿಕೊಂಡಿದರೆ.

ಸದ್ಯ ರಶ್ಮಿಕಾ ಪ್ರಸ್ತುತ ರಣ್ಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಟೈಗರ್ ಶ್ರಾಫ್​ ಜೊತೆ ಹೊಸದೊಂದು ಸಿನಿಮಾಕ್ಕೂ ಒಪ್ಪಿಗೆ ಸೂಚಿಸಿದ್ದಾರೆ. ತೆಲುಗಿನಲ್ಲಿ ಪುಷ್ಪ 2 ಸಿನಿಮಾದಲ್ಲಿ ನಟಿಸುತ್ತಿದ್ದು, ತಮಿಳಿನ ಒಂದು ಸಿನಿಮಾಕ್ಕೂ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ.

ಆದರೆ ಹ್ಯಾಂಡ್​ಸಮ್ ಯುವ ಕ್ರಿಕೆಟಿಗ ಶುಭ್​ಮನ್ ಗಿಲ್ ಜೊತೆ ರಶ್ಮಿಕಾ ಡೇಟ್​ಗೆ ಹೋಗುತ್ತಾರಾ? ಎಂದು ಅಭಿಮಾನಿಗಳು ಕಾದು ನೋಡಬೇಕಿದೆ. ಒಟ್ಟಿನಲ್ಲಿ ರಶ್ಮಿಕಾ ಯುವ ಕ್ರಿಕೆಟಿಗನ ಮನಸ್ಸು ಗೆದ್ದು ಮತ್ತೇ ತಮ್ಮತ್ತ ಅಭಿಮಾನಿಗಳು ತಿರುಗಿ ನೋಡುವಂತೆ ಆಗಿದೆ.