ಶಾಲಾ ಮಕ್ಕಳಿಗೆ ಕಾಡುತ್ತಿದೆ ಹೊಸ ರೋಗ!!
ಬೆಂಗಳೂರು : ಕೋರೊನಾ ಆತಂಕದ ನಡುವೆ ಮಕ್ಕಳಿಗೆ ಹೊಸ ರೋಗದ ಆತಂಕ ಶುರುವಾಗಿದ್ದು, ಕರ್ನಾಟಕದ ಮಕ್ಕಳ ಕೈ,ಕಾಲು ಮತ್ತು ಬಾಯಿ ಸುತ್ತಮುತ್ತ ಗುಳ್ಳೆಗಳು ಕಾಣಿಸಿಕೊಳ್ಳುತ್ತಿದ್ದು ಪೋಷಕರನ್ನು ಕಂಗಾಲಾಗಿಸಿದೆ.
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಇದು ಮಕ್ಕಳಿಂದ ಮಕ್ಕಳಿಗೆ ಹರಡುತ್ತಿದ್ದು, ಪೋಸಕರಿಗೆ ಹೊಸ ಆತಂಕ ಶುರುವಾಗಿದೆ. ಕೈ ಹಾಗೂ ಬಾಯಿ ಸುತ್ತಮುತ್ತ ಮಕ್ಕಳಿಗೆ ಗುಳ್ಳೆಗಳು ಕಾಣಿಸಿಕೊಳ್ಳುತ್ತಿದೆ. ಗುಳ್ಳೆಗಳು ಹಾಗೂ ಗಾಯಗಳಿಂದ ಮಕ್ಕಳಿಗೆ ತೀವ್ರ ಜ್ವರ ಕಾಣಿಸಿಕೊಳ್ಳುತ್ತಿದೆ.
ಮುಂಗಾರು ಮಳೆಯ ಆರ್ಭಟ ಮತ್ತು ಬೆಂಗಳೂರಿನಲ್ಲಿ ಹಠಾತ್ ಹವಾಮಾನ ಬದಲಾವಣೆಯಿಂದ ಸೋಂಕುಗಳ ಉಲ್ಬಣವಾಗುತ್ತಿದೆ. ಕೈ, ಕಾಲು ಮತ್ತು ಬಾಯಿ ರೋಗದ ಪ್ರಕರಣಗಳು ಹೆಚ್ಚುತ್ತಿವೆ. ಚಿಕ್ಕ ಮಕ್ಕಳಲ್ಲಿ ಹೆಚ್ಚುತ್ತಿರುವ ಕೈ, ಕಾಲು ಮತ್ತು ಬಾಯಿ ರೋಗ ಪ್ರಕರಣಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಶಾಲೆಗಳು ಮಕ್ಕಳು ಹಾಗೂ ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ. ಈ ರೋಗ ಲಕ್ಷಣಗಳು ಮಕ್ಕಳಲ್ಲಿ ಕಂಡು ಬಂದರೆ ಸೂಕ್ತ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.