ಗಂಡನ ಜೊತೆ ಜಗಳವಾಡಿ ‘ನಾನು ಸಾಯುತ್ತೇನೆ’ ಎಂದು ಕೆರೆಯ ಮಧ್ಯೆ ಹೋಗಿ ಕೂತ ಮಹಿಳೆ !! | ಆಕೆಯ ರಂಪಾಟಕ್ಕೆ ಸಾರ್ವಜನಿಕರು ಸುಸ್ತೋ ಸುಸ್ತು

ಗಂಡ, ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಅದೆಷ್ಟೋ ದಂಪತಿಗಳು ಜಗಳವಾಡಿ ಸ್ವಲ್ಪ ಹೊತ್ತಿನಲ್ಲೇ ಸರಿಹೋಗಿ ಅನ್ಯೋನ್ಯವಾಗಿರುತ್ತಾರೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಕೆಲವು ಜಗಳಗಳು ಬೀದಿಗೆ ಬಂದಿದ್ದಲ್ಲದೇ, ಕೋರ್ಟ್ ಮೆಟ್ಟಿಲೇರಿದ ಪ್ರಸಂಗಗಳೂ ನಡೆದಿವೆ. ಆದರೆ ಮಹಿಳೆಯೊಬ್ಬರು ಗಂಡನ ಜೊತೆಗೆ ಜಗಳವಾಡಿ ಸಾಯುತ್ತೇನೆ ಎಂದು ಕೆರೆಯ ಮಧ್ಯೆ ಹೋಗಿ ಕೂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 

ಕೋರಮಂಗಲ 3ನೇ ಬ್ಲಾಕ್‍ನಲ್ಲಿ ಈ ಘಟನೆ ನಡೆದಿದ್ದು, ವಾಕಿಂಗ್ ಹೋಗುವ ವೇಳೆ ಗಂಡನೊಂದಿಗೆ ಮಹಿಳೆ ಜಗಳವಾಡಿದ್ದಾರೆ. ನಂತರ ಕೋಪ ಮಾಡಿಕೊಂಡ ಮಹಿಳೆ ನಾನು ಸಾಯುತ್ತೇನೆ ಎಂದು ಕೋರಮಂಗಲ ಮೂರನೇ ಬ್ಲಾಕ್ ನಲ್ಲಿರುವ ಕೆರೆಯೊಳಗೆ ಹೋಗಿ ಕುಳಿತುಕೊಳ್ಳಬೇಕೆ. ಅದು ಕೂಡ ಕಲುಷಿತ ನೀರಿನ ಕೆರೆ !!

ಕೋಪಗೊಂಡ ಈ ಮಹಿಳೆಯ ಮನವೊಲಿಸಲು ಸಾಕಷ್ಟು ಮಂದಿ ಪ್ರಯತ್ನಿಸಿದ್ದಾರೆ. ಪಾರ್ಕ್ ಗೆ ಇಂದು ವಾಕಿಂಗ್ ಬಂದವರಿಗೆಲ್ಲ ಈ ಮಹಿಳೆಯನ್ನು ಸಮಾಧಾನಿಸುವ ಕೆಲಸವೇ ವ್ಯಾಯಾಮಕ್ಕಿಂತ ಹೆಚ್ಚಾಗಿತ್ತು. ಆದರೆ ಮಹಿಳೆ ಯಾರಾದರೂ ಹತ್ತಿರ ಬಂದರೆ ಕೆರೆಯೊಳಗೆ ಮುಳುಗಿ ಬಿಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾರೆ. ಕೊನೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು 2 ಗಂಟೆಯ ಬಳಿಕ ಹೇಗೋ ಆಕೆಯ ಮನವೊಲಿಸಿ ಕೆರೆಯಿಂದ ಹೊರಗೆ ಕರೆಸಿದ್ದಾರೆ.

Leave A Reply

Your email address will not be published.