ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್ ವೆಲ್ ಚೆನ್ನೈ ನಾರಿಯೊಂದಿಗೆ ಹಿಂದೂ – ತಮಿಳು ಸಂಪ್ರದಾಯದ ಪ್ರಕಾರ ಇಂದು ಮದುವೆ !
ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿವಿ ರಾಮನ್ ಶುಕ್ರವಾರ ಮಾರ್ಚ್ 18 ರಂದು ಆಸ್ಟ್ರೇಲಿಯಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹವಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ.
ಮ್ಯಾಕ್ಸ್ ವೆಲ್ ಮತ್ತು ವಿವಿ ರಾಮನ್ ವಿವಾಹದ ಲಗ್ನಪತ್ರಿಕೆ ತಮಿಳು ಭಾಷೆಯಲ್ಲಿ ಮುದ್ರಿಸಲಾಗಿತ್ತು ಜೊತೆಗೆ ಅದು ವೈರಲ್ ಕೂಡಾ ಆಗಿತ್ತು.. ಕ್ರಿಶ್ಚಿಯನ್ ಸಂಪ್ರದಾಯದಂತೆ ಉಂಗುರವನ್ನು ಬದಲಿಸಿಕೊಂಡು ವಿವಾಹವಾದ ಜೋಡಿ ಮಾರ್ಚ್ 28 ರಂದು ಹಿಂದು ಸಂಪ್ರದಾಯದಂತೆ ವಿವಾಹವಾಗಲಿದ್ದಾರೆ ಎಂದು ಬರೆದಿತ್ತು.
ಹಾಗಾಗಿ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ತನ್ನ ದೀರ್ಘಕಾಲದ ಗೆಳತಿ ವಿನಿ ರಾಮನ್ ಅವರು ಸೋಮವಾರ ( ಮಾ.28) ಹಿಂದೂ- ತಮಿಳು ಸಂಪ್ರದಾಯದ ಪ್ರಕಾರ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮ್ಯಾಕ್ಸ್‌ವೆಲ್ ( 33 ವರ್ಷ) ಶರ್ವಾನಿ ಹಾಕಿಕೊಂಡಿದ್ದು ಹಾಗೂ ಭಾರತ ಮೂಲದ ವಿನಿ ಸೀರೆ ಧರಿಸಿ ಹಾರ ಬದಲಾಯಿಸಿಕೊಂಡಿರುವ ದೃಶ್ಯ ಮನೋಹರವಾಗಿತ್ತು. ಅಷ್ಟು ಮಾತ್ರವಲ್ಲದೇ ಮ್ಯಾಕ್ಸ್‌ವೆಲ್ ಹಾರ ಹಿಡಿದು ಭಾರತೀಯ ವಾದ್ಯ ಸಂಗೀತಕ್ಕೆ ಹಾರ ಹಿಡಿದುಕೊಂಡು ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರೂ ಖುಷಿಯಿಂದ ವೀಕ್ಷಿಸಿ ಹಾರೈಸಿದ್ದಾರೆ.