ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಶರಣ್ ಪಂಪ್ ವೆಲ್ ಹೆಸರಿನಲ್ಲಿ ಸಂದೇಶ!! ಹಿಂದೂ ಕಾರ್ಯಕರ್ತರ ಹೆಣ ಬೀಳಬೇಕು- ಆಗ ಬೀದಿಗಿಳಿಯಲು ಸುಲಭ!!

ಸಾಮಾಜಿಕ ಜಾಲತಾಣದಲ್ಲಿ ಶರಣ್ ಪಂಪ್ ವೆಲ್ ಹೆಸರಿನಲ್ಲಿ ಸಂದೇಶವೊಂದು ರವಾನೆಯಾಗಿದ್ದು, ಸದ್ಯ ಹಿಂದೂ ಕಾರ್ಯಕರ್ತರಲ್ಲಿ ಜೀವ ಭಯ ಶುರುವಾಗಿದೆ.ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ, ದಂಗೆ ಏಳಿಸಲು ಹುಮ್ಮಸ್ಸು ತೋರುವ ರೀತಿಯಲ್ಲಿರುವ ಸಂದೇಶವೊಂದು ರವಾನೆಯಾದ ಬಳಿಕ ಪಂಪ್ ವೆಲ್ ಮೇಲೆ ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕೆಂಬುವುದು ನೆಟ್ಟಿಗರ ಆಗ್ರಹವಾಗಿದೆ.

ಹಾಗಾದರೆ ಆ ಸಂದೇಶಗಳು ಯಾವುವು? ಸ್ವತಃ ಪಂಪ್ ವೆಲ್ ಅವರೇ ರವಾನಿಸಿದ್ದಾರಾ? ಸದಾ ಹಿಂದೂ ಕಾರ್ಯಕರ್ತರ ಕಾಳಜಿ ವಹಿಸುವ ಬಲಿಷ್ಠ ನಾಯಕನ ಮನಸ್ಥಿತಿ ಇದೇನಾ ಎಂದು ಹಿಂದೂ ಕಾರ್ಯಕರ್ತರು ಆಲೋಚಿಸುವಂತಾಗಿದೆ.

ಮೊನ್ನೆಯ ದಿನ ಉಪ್ಪಿನಂಗಡಿಯಲ್ಲಿ ನಡೆದ ತಲವಾರು ದಾಳಿ ವಿಚಾರದಲ್ಲಿ ಕಾರ್ಯಕರ್ತರೆಂದು ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ್ದ ವ್ಯಕ್ತಿಯೋರವರಿಗೆ,ಉತ್ತರವೊಂದು ಬಂದಿದ್ದು, ಅದರಲ್ಲಿ “ನಮಗೆ ನಮ್ಮವರ ಹೆಣ ಬೀಳ್ಬೇಕು, ಆಗ ಮಾತ್ರ ನಾವು ಬೀದಿಗೆ ಇಳಿಯಲು ಸಾಧ್ಯ, ಮೊನ್ನೆಯ ದಾಳಿಯಲ್ಲಿ ಆತ ಸತ್ತಿಲ್ಲ. ಎಲೆಕ್ಷನ್ ಹತ್ತಿರ ಬರುತ್ತಿರುವಾಗ ಇದೆಲ್ಲಾ ಬೇಕು, ಅದಕ್ಕಾಗಿಯೇ ನಾವೂ ಸಣ್ಣಪುಟ್ಟ ಹಲ್ಲೆಗಳನ್ನು ನಡೆಸುತ್ತಿದ್ದೇವೆ” ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೂ, ಶರಣ್ ಪಂಪ್ ವೆಲ್ ಅವರೇ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಬಿಂಬಿಸಲಾಗಿದೆ.ಸದಾ ಹಿಂದುತ್ವಕ್ಕಾಗಿ ದುಡಿಯುವ ನಾಯಕನ ಅವಹೇಳನ ನಡೆಸಲೂ ಕಾಣದ ಕೈ ಕೆಲಸ ಮಾಡಿದೆಯೇ? ಅಥವಾ ಪಂಪ್ ವೆಲ್ ಅವರೇ ಸಂದೇಶ ರವಾನಿಸಿದ್ದಾರೆಯೇ ಎಂಬುವುದಕ್ಕೆ ಶರಣ್ ಪಂಪ್ ವೆಲ್ ಅವರೇ ಉತ್ತರಿಸಬೇಕಾಗಿದ್ದು, ಕಾರ್ಯಕರ್ತರಲ್ಲಿ ಧೈರ್ಯ ತುಂಬಬೇಕಾಗಿದೆ.

Leave A Reply

Your email address will not be published.