Home ಸುದ್ದಿ Coffee board: ಕಾಫಿ ಮಂಡಳಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Coffee board: ಕಾಫಿ ಮಂಡಳಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Hindu neighbor gifts plot of land

Hindu neighbour gifts land to Muslim journalist

 

Coffee board: ಕಾಫಿ ಮಂಡಳಿ ವತಿಯಿಂದ ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳ ಯೋಜನೆಯಡಿಯಲ್ಲಿ ಕಾಫಿತೋಟಗಳಲ್ಲಿ ಹಾಗು ಕಾಫಿ ಕ್ಯೂರಿಂಗಳಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅರ್ಹ ವಿದ್ಯಾರ್ಥಿಗಳಿಂದ 2025-26ನೆ ಸಾಲಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಬಂಧನೆಗಳು

1. ಹಿಂದಿನ ವರ್ಷಗಳಲ್ಲಿ ತೇರ್ಗಡೆ ಹೊಂದಿ 2025-26ನೇ ಸಾಲಿನಲ್ಲಿ ಪ್ರಥಮ ಪಿಯುಸಿ / ಪದವಿ/ತಾಂತ್ರಿಕ ಪದವಿ/ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಛೇರಿ ಸಮಯದಲ್ಲಿ ಅರ್ಜಿಗಳನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ

2. ಅನುದಾನದ ಲಭ್ಯತೆಗಾನುಗುಣವಾಗಿ ಹಾಗೂ ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು.

3. ದಾಖಲಾತಿಗಳ ವಿವರ(ಸ್ವಂತ ದೃಢೀಕರಿಸಿದ ಝೆರಾಕ್ಸ್ ಪ್ರತಿಗಳು)

a.ಆಧಾರ್

b.ಬ್ಯಾಂಕ್ ಪಾಸ್ ಬುಕ್ ಪ್ರತಿ

c. ಜಾತಿ ಪ್ರಮಾಣ ಪತ್ರ (SC&ST)

d.ಹಿಂದಿನ ವರ್ಷ ತೇರ್ಗಡೆ ಹೊಂದಿದ ಅಂಕಪಟ್ಟಿ

e. ತೋಟದ ಮಾಲಿಕರ ದೃಡೀಕರಣ ಮತ್ತು ಪಹಣಿ

f.ಕಾಲೇಜಿನ ಪ್ರಾಂಶುಪಾಲರ ದೃಡೀಕರಣ ಪತ್ರ

g.ವಿದ್ಯಾರ್ಥಿಯ ಫೋಟೋ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28.11.2025