Home ಬೆಂಗಳೂರು ಕನ್ನಡ ಶಾಲೆಯಲ್ಲಿ ಪ್ರತಿದಿನ ಮಲಿಯಾಳಿ ನಾಡಗೀತೆ| ವಾರಕ್ಕೆ ಒಂದು ದಿನ ಮಾತ್ರ ಕನ್ನಡ ನಾಡಗೀತೆ| ಆಡಳಿತ...

ಕನ್ನಡ ಶಾಲೆಯಲ್ಲಿ ಪ್ರತಿದಿನ ಮಲಿಯಾಳಿ ನಾಡಗೀತೆ| ವಾರಕ್ಕೆ ಒಂದು ದಿನ ಮಾತ್ರ ಕನ್ನಡ ನಾಡಗೀತೆ| ಆಡಳಿತ ಮಂಡಳಿಯ ವಿರುದ್ಧ ಕನ್ನಡಪರ ಸಂಘಟನೆ ಆಕ್ರೋಶ

Hindu neighbor gifts plot of land

Hindu neighbour gifts land to Muslim journalist

ಒಂದು ಕಡೆ ಹಿಜಬ್ ಕೇಸರಿ ವಿವಾದ ಇನ್ನೂ ಮುಗಿದಿಲ್ಲ‌. ಇದೀಗ ಶಾಲೆಯಲ್ಲಿ ಕನ್ನಡದ ಬದಲು ಮಲಯಾಳಿ ನಾಡಗೀತೆ ಹಾಡಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಟಿ ದಾಸರಹಳ್ಳಿ ಸಮೀಪದ ಮಲ್ಲಸಂದ್ರದ ಅಯ್ಯಪ್ಪ ವಿದ್ಯಾಕೇಂದ್ರದಲ್ಲಿ ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ. ವಾರಕ್ಕೆ ಒಂದು ಬಾರಿ ಮಾತ್ರ ಕನ್ನಡ ನಾಡಗೀತೆ ಹಾಡಿಸಿ, ಉಳಿದ ಎಲ್ಲಾ‌ ದಿನಗಳಲ್ಲಿ ಮಲಿಯಾಳಿ ನಾಡಗೀತೆ ಹಾಡಿಸಲಾಗುತ್ತದೆ.

ಈ ಬಗ್ಗೆ ಕನ್ನಡಪರ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಯಲ್ಲಿ ಮಕ್ಕಳಿಗೆ ದಿನನಿತ್ಯ ಕನ್ನಡ ಹಾಡು ಹಾಡಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದಿದ್ದಾರೆ.