Home ಬೆಂಗಳೂರು ಶ್ರಾವಣ ಮಾಸ ತಂದ ಶುಭಘಳಿಗೆ | ಕಾರ್ಮಿಕರ ಕನಿಷ್ಠ ವೇತನ ಪ್ರಕಟ, ನಿಮಗೆ ಇನ್ಮುಂದೆ ಇಷ್ಟು...

ಶ್ರಾವಣ ಮಾಸ ತಂದ ಶುಭಘಳಿಗೆ | ಕಾರ್ಮಿಕರ ಕನಿಷ್ಠ ವೇತನ ಪ್ರಕಟ, ನಿಮಗೆ ಇನ್ಮುಂದೆ ಇಷ್ಟು ವೇತನ ಗ್ಯಾರಂಟಿ

Hindu neighbor gifts plot of land

Hindu neighbour gifts land to Muslim journalist

ಶ್ರಾವಣ ಮಾಸ ಅಂದ್ರೆ ಹಬ್ಬಗಳ ಸಾಲು. ಈ ಸಂದರ್ಭದಲ್ಲಿ ಸರ್ಕಾರ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಹಬ್ಬಗಳ ಮಾಸದಲ್ಲೇ ಕಾರ್ಮಿಕರ ಬಾಳಲ್ಲಿ ಮತ್ತಷ್ಟು ರಂಗು ಬಂದಂತಾಗಿದೆ. ಈಗ ಒಂದಷ್ಟು ವಿಭಾಗಕ್ಕೆ ಕನಿಷ್ಠ ವೇತನ ಜಾರಿಯಾಗಿದ್ದು ಕಾರ್ಮಿಕರಿಗೆ ಹಬ್ಬಗಳ ಮಾಸದಂದೇ ಗಿಫ್ಟ್ ಸಿಕ್ಕಂತಾಗಿದೆ.

ಅಂದ ಹಾಗೆ, ಬಿಬಿಎಂಪಿ ಕಾರ್ಮಿಕರಿಗೂ ಸರ್ಕಾರ ಶುಭಸುದ್ದಿ ಕೊಟ್ಟಿದೆ. ಸರ್ಕಾರ ಕೊಡುವ ಕನಿಷ್ಠ ವೇತನ ಪ್ಲಾನ್‌ನಲ್ಲಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯೂ ಸೇರಿದೆ.

ಕೊರೋನಾದಿಂದ ಕನಿಷ್ಠ ವೇತನ ಪರಿಷ್ಕರಣೆ ಆಗಿರಲಿಲ್ಲ. ಈ ಹೊಸ ವೇತನವು ಜುಲೈ 28ರಿಂದ ಅಧಿಸೂಚನೆ ಪ್ರಕಟವಾದಾಗಿನಿಂದ ಜಾರಿಗೆ ಬಂದಿದೆ. ಕಾರ್ಮಿಕರ ವೇತನ, ಪಿಎಫ್‌ಗಾಗಿ ಕಡಿತವಾಗುವ ಹಣ ಹಾಗೂ ಕೆಲಸದ ಸಮಯ ಬದಲಾಗುತ್ತೆ ಅನ್ನೋ ಚರ್ಚೆ ನಡುವೆಯೇ ಕನಿಷ್ಠ ವೇತನ ಪ್ರಕಟವಾಗಿದೆ. ಕೊರೋನಾ ಕಾಟದಿಂದಾಗಿ ಕಳೆದ 2 ವರ್ಷಗಳಿಂದ ನಿಂತುಹೋಗಿದ್ದ ಕನಿಷ್ಠ ವೇತನವನ್ನು ಸರ್ಕಾರ ಜಾರಿಗೆ ಮುಂದಾಗಿದೆ. ಈ ಮೂಲಕ ಕಾರ್ಮಿಕರಿಗೆ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ.
ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಸಿಗಲಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಕನಿಷ್ಠ ವೇತನದಿಂದ BBMP ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ಕಾರ್ಮಿಕರು ಮತ್ತು ಕ್ಲರ್ಕ್‌ಗಳು, ಕಂಪ್ಯೂಟರ್/ ಡಾಟಾ ಎಂಟ್ರಿ ಆಪರೇಟರ್‌ಗಳು, ಲ್ಯಾಬ್ ತಂತ್ರಜ್ಞರು ಮತ್ತು ಸಹಾಯಕ ಗ್ರಂಥಪಾಲಕರು ಅಂದಾಜು 18,000 ರೂಪಾಯಿಯಷ್ಟು ಸಂಬಳ ಪಡೆಯಲಿದ್ದಾರೆ.

ಕ್ಲರ್ಕ್-16,564 ರೂ.
ಡ್ರೈವರ್ ಕಮ್ ನಿರ್ವಾಹಕರು-15,777 ರೂ.
ಚಾಲಕರು- 15,112 ರೂ.
ಕ್ಲೀನರ್- 13,974 ರೂ.
ಮೆಕ್ಯಾನಿಕ್‌ಗಳು- 14,657 ರೂ
ಪ್ಲಂಬರ್‌ಗಳು- 14,657 ರೂ
ವಾಟರ್‌ಮೆನ್‌ಗಳು- 14,657 ರೂ.

ಇಷ್ಟು ಮಾತ್ರವಲ್ಲದೇ, ವಿವಿಧ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಗುಡ್‌ನ್ಯೂಸ್ ಸಿಕ್ಕಿದೆ. ಅವರ ವೇತನವೂ 13 ಸಾವಿರ ರೂಪಾಯಿಯಿಂದ 17 ಸಾವಿರ ರೂಪಾಯಿವರೆಗೆ ಏರಿಕೆಯಾದಂತಾಗಿದೆ.

ಅಟೆಂಡರ್- 13,974 ರೂ.
ತೋಟದ ಕೆಲಸಗಾರರು- 13,974 ರೂ.
ಸೆಕ್ಯೂರಿಟಿ ಗಾರ್ಡ್- 13,974 ರೂ.
ಬೀದಿ ಗುಡಿಸುವವರು-17,306 ರೂ.
ತ್ಯಾಜ್ಯ ಕೆಲಸಗಾರರು- 17,306 ರೂ