Home ಬೆಂಗಳೂರು ಆತ್ಮಗಳ ಜೊತೆ ಮಾತನಾಡುತ್ತೇನೆಂದು ಮನೆಬಿಟ್ಟು ತೆರಳಿದ್ದ ಯುವತಿ ಎರಡು ತಿಂಗಳ ಬಳಿಕ ಪತ್ತೆ !! |...

ಆತ್ಮಗಳ ಜೊತೆ ಮಾತನಾಡುತ್ತೇನೆಂದು ಮನೆಬಿಟ್ಟು ತೆರಳಿದ್ದ ಯುವತಿ ಎರಡು ತಿಂಗಳ ಬಳಿಕ ಪತ್ತೆ !! | ಅಷ್ಟಕ್ಕೂ ಆಕೆ ಇಷ್ಟು ದಿನ ಎಲ್ಲಿದ್ದಳು ಗೊತ್ತಾ??

Hindu neighbor gifts plot of land

Hindu neighbour gifts land to Muslim journalist

ಎಂದಿಗೂ ಒಬ್ಬಂಟಿಯಾಗಿ ಹೊರಗೆ ಹೋಗದ 17 ವರ್ಷದ ಬಾಲಕಿ ಅನುಷ್ಕಾ ವರ್ಮ ಮಾಟ ಮಂತ್ರದ ಆಕರ್ಷಣೆಗೊಳಗಾಗಿ ಮನೆ ಬಿಟ್ಟು ಹೋಗಿದ್ದು, ಇದೀಗ 2 ತಿಂಗಳ ನಂತರ ಮನೆಗೆ ಮರಳಿದ್ದಾಳೆ ಎಂದು ತಿಳಿದುಬಂದಿದೆ.

ಶಮನಿಸಂ ಆಚರಣೆಯೆಡೆಗೆ ಆಕರ್ಷಿತಳಾಗಿದ್ದ ಬಾಲಕಿ ಕಳೆದ ಅ. 31ರಂದು ಮನೆಬಿಟ್ಟು ನಾಪತ್ತೆಯಾಗಿದ್ದಳು.
ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಪ್ರಾಪ್ತೆ ಅನುಷ್ಕಾ ವರ್ಮಾ ಗುಜರಾತ್‌ನ ಸೂರತ್‌ನ ಅನಾಥಾಶ್ರಮವೊಂದರಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಪತ್ತೆಹಚ್ಚಿ ನಗರಕ್ಕೆ ಕರೆತಂದಿರುವ ಸುಬ್ರಹ್ಮಣ್ಯನಗರ ಪೊಲೀಸರು ಆಕೆಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

ತಮ್ಮ ಮಗಳು ಕಾಣೆಯಾಗಿರುವುದರ ಸಂಬಂಧ ಅನುಷ್ಕಾ ತಂದೆ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಯ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದು, ಪೊಲೀಸರು ಸೆಕ್ಷನ್ 363ರ ಅಡಿಯಲ್ಲಿ ಕೇಸ್ ದಾಖಲಿಸಿದ್ದರು.

ಅನುಷ್ಕಾ ತನ್ನ ಮೊಬೈಲನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರಿಂದ ಆಕೆಯ ಚಲನವಲನಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ತಲೆ ನೋವಾಗಿತ್ತು. ಆಕೆಯನ್ನು ಪತ್ತೆ ಹಚ್ಚಲು ಪೊಲೀಸರು ನಗರದ ಹಲವು ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಸಂಪರ್ಕಿಸಿದ್ದರು. ಅನುಷ್ಕಾ 12ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಶಾಮನಿಸಂನತ್ತ ಆಕರ್ಷಿತರಾಗಿದ್ದರು. ಸೈಕೆಡೆಲಿಕ್ ಶಿಕ್ಷಣತಜ್ಞರಿಂದ ಪ್ರಭಾವಿತಳಾಗಿದ್ದರು. ಶಮನಿಸಂ ಅನ್ನು ಅಭ್ಯಾಸ ಮಾಡುವ ಬಯಕೆಯ ಬಗ್ಗೆ ತನ್ನ ತಂದೆ-ತಾಯಿಯ ಜೊತೆ ಮಾತನಾಡಿದ್ದಳು ಎಂದು ಆಕೆಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದರು.

ಶಮಾನಿಸಂ (ಆತ್ಮಗಳೊಂದಿಗೆ ಮಾತನಾಡುವುದು) ಎನ್ನುವುದು ಧಾರ್ಮಿಕ ಆಚರಣೆಯಾಗಿದ್ದು, ಅದರ ಅಭ್ಯಾಸ ಮಾಡುವವರು ಅರೆ ಪ್ರಜ್ಞಾವಸ್ಥ ಸ್ಥಿತಿಯಲ್ಲಿ ಆತ್ಮಗಳೊಂದಿಗೆ ಮಾತುಕತೆ ನಡೆಸುತ್ತಾರೆ ಎಂಬ ನಂಬಿಕೆಯ ಮೇಲೆ ಆಧಾರಿತವಾಗಿದೆ. ಇದು ಪುರಾತನ ಹೀಲಿಂಗ್ ವಿಧಾನ ಎನ್ನಲಾಗಿದೆ. ಇದರಿಂದ ಆಕರ್ಷಿತರಾಗಿದ್ದ ಅನುಷ್ಕಾ, ಮನೆ ಬಿಟ್ಟು ತೆರಳಿದ್ದರು.