Home ದಕ್ಷಿಣ ಕನ್ನಡ ಬೆಳ್ತಂಗಡಿ : ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಜಪ್ತಿಗೆ ತಡೆಯಾಜ್ಞೆ!!!

ಬೆಳ್ತಂಗಡಿ : ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಜಪ್ತಿಗೆ ತಡೆಯಾಜ್ಞೆ!!!

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಜಪ್ತಿಗೆ ಸಾಲ ವಸೂಲಾತಿ ಪ್ರಾಧಿಕಾರ ಒಂದು ತಿಂಗಳ ಕಾಲಾವಕಾಶ ನೀಡಿರುವುದರಿಂದ ಕಾಂಪ್ಲೆಕ್ಸ್ ನಲ್ಲಿದ್ದ ಬಾಡಿಗೆದಾರರು ಕೊಂಚ ನಿರಾಳರಾಗಿದ್ದಾರೆ.

ಕಟ್ಟಡ ನಿರ್ಮಾಣ ಮಾಡಲು ಮುಂಬಯಿ ಮೂಲದ
ಬ್ಯಾಂಕ್ ನಿಂದ ಪಡೆದ ಸಾಲವನ್ನು ಮರುಪಾವತಿಸದೇ ಇದ್ದುದರಿಂದ ಕಟ್ಟಡವನ್ನು ಇಂದು 11 ಗಂಟೆಗೆ ಪಡೆದುಕೊಳ್ಳುವ ಬಗ್ಗೆ ಬ್ಯಾಂಕ್ ನೋಟಿಸ್ ಜಾರಿಗೊಳಿಸಿತ್ತು. ಆದರೆ ಒಂದು ತಿಂಗಳವರೆಗೆ ಜಪ್ತಿ ಮಾಡದಂತೆ ಸಾಲ ವಸೂಲಾತಿ ಪ್ರಾಧಿಕಾರ ತಡೆಯಾಜ್ಞೆ ನೀಡಿದೆ.

ಘಟನೆ ಹಿನ್ನೆಲೆ : ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ , ವಿಘ್ನೇಶ್ ಸಿಟಿ ಎಂಬ ಹೆಸರಿನ ಕಟ್ಟಡಕ್ಕೆ, ವಿಘ್ನೇಶ್ ಕನ್ಸ್ಟ್ರಕ್ಟರ್ಸ್ PWD ಕಂಟ್ರ್ಯಾಕ್ಟರ್ & ಅರ್ಥ್ ಮೂವರ್ಸ್ ನಡೆಸುತ್ತಿರುವ ಬೆಳ್ತಂಗಡಿ ನಗರದ ಕಲ್ಲಗುಡ್ಡೆ ಬಳಿ ಇರುವ ರವಿ ಕುಮಾರ್ ಎಂಬವರು ಮುಂಬಯಿ ಮೂಲದ NKGSB Co-op ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಆದ್ರೆ ಕಳೆದ ನಾಲ್ಕು ವರ್ಷಗಳಿಂದ ಬಡ್ಡಿ, ಅಸಲು ಸೇರಿ ಸುಮಾರು ಆರುವರೇ ಕೋಟಿ ಹಣವನ್ನು ಬ್ಯಾಂಕ್ ಗೆ ಕಟ್ಟದೆ ವಂಚನೆ ಮಾಡಿದ್ದಾರೆ. ಇನ್ನೂ ಕಟ್ಟಡ ಬಿಡಲು ಎಲ್ಲಾ ಬಾಡಿಗೆ ಹೊಂದಿರುವ ಮಾಲಕರಿಗೆ ಮಂಗಳೂರು ಕೋರ್ಟ್ ಮುಖಾಂತರ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಹಚ್ಚಿ ಹೋಗಿದ್ದರು.

ಕೋರ್ಟ್ ಮುಖಾಂತರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕೋರ್ಟ್ ಕಮಿಷನರ್ ಮುಖಾಂತರ ಜಪ್ತಿ ಮಾಡಲಿದ್ದೇವೆ. ನೀವಾಗಿ ಕೋಣೆಯನ್ನು ಖಾಲಿ ಮಾಡಿ, ಹೋಗಿ ಇಲ್ಲವಾದರೆ ನಾವೇ ಎಲ್ಲವನ್ನು ಜಪ್ತಿ ಮಾಡಿ ತೆಗೆದುಕೊಂಡು ಹೋಗುತ್ತೇವೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.