Home ದಕ್ಷಿಣ ಕನ್ನಡ ಉಜಿರೆ: ಅಕ್ರಮ ಗೋ ಸಾಗಾಟ ಪತ್ತೆ-ಬಜರಂಗದಳದ ಕ್ಷಿಪ್ರ ಕಾರ್ಯಾಚರಣೆ!! ವಾಹನ ಸಹಿತ ಆರೋಪಿಗಳು ಪೊಲೀಸರ...

ಉಜಿರೆ: ಅಕ್ರಮ ಗೋ ಸಾಗಾಟ ಪತ್ತೆ-ಬಜರಂಗದಳದ ಕ್ಷಿಪ್ರ ಕಾರ್ಯಾಚರಣೆ!! ವಾಹನ ಸಹಿತ ಆರೋಪಿಗಳು ಪೊಲೀಸರ ವಶಕ್ಕೆ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ:ಪಿಕ್ ಅಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ ನಡೆಸುತ್ತಿದ್ದ ವಾಹನ ಸಹಿತ ಇಬ್ಬರನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆದಿದ್ದು,ಈ ವೇಳೆ ವಾಹನದಲ್ಲಿ ಎರಡು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸುತ್ತಿರುವ ದೃಶ್ಯ ಕಂಡುಬಂದಿದೆ.ಕೊಡಲೇ ವಾಹನ ಸಹಿತ ಇಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಗುಜುರಿ ಕೇಳುವ ನೆಪದಲ್ಲಿ ಮನೆ ಮನೆಗೆ ಬರುತ್ತಿರುವ ಇಂತಹ ಜಾಲವೊಂದು ಉಜಿರೆ ಪರಿಸರದಲ್ಲಿ ಸಕ್ರಿಯವಾಗಿದ್ದು, ಮನೆಯಲ್ಲಿ ದನ ಕರುಗಳಿರುವ ಮಾಹಿತಿ ಪಡೆದು ಬಳಿಕ ರಾತ್ರಿ ವೇಳೆ ಕದ್ದುಕೊಂಡು ಹೋಗುತ್ತಿರುವ ಹಲವು ಉದಾಹರಣೆಗಳಿವೆ. ಸದ್ಯ ಪೊಲೀಸರು ಇಂತಹ ಜಾಲಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಎಲ್ಲೆಡೆಯಿಂದಲೂ ವ್ಯಕ್ತವಾಗಿದೆ.