Home ದಕ್ಷಿಣ ಕನ್ನಡ ಸುಳ್ಯ : ಇಂದು ಸಂಜೆ ಮತ್ತೆ ಕಂಪಿಸಿದ ಭೂಮಿ! ಜನರಲ್ಲಿ ಹೆಚ್ಚಿದ ಆತಂಕ

ಸುಳ್ಯ : ಇಂದು ಸಂಜೆ ಮತ್ತೆ ಕಂಪಿಸಿದ ಭೂಮಿ! ಜನರಲ್ಲಿ ಹೆಚ್ಚಿದ ಆತಂಕ

Hindu neighbor gifts plot of land

Hindu neighbour gifts land to Muslim journalist

ಕಳೆದ ಕೆಲದಿಗಳಿಂದ ವ್ಯಾಪಕ ಮಳೆಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಹಾಗೂ ಕೊಡಗು ಜಿಲ್ಲೆ ಮಡಿಕೇರಿ ಪ್ರದೇಶದ ಹಲವೆಡೆ ಭೂಕಂಪನವಾಗುತ್ತಿದೆ.

ಈಗ ಮತ್ತೆ ಸುಳ್ಯ ಕಡೆ ಲಘು ಭೂಕಂಪನವಾಗಿದೆ. ಈ ಭೂಕಂಪನದಿಂದಾಗಿ ಸುಳ್ಯದ ಜನರು ಭಯಭೀತರಾಗಿದ್ದಾರೆ‌. ಇಂದು ಸಂಜೆ 4 ಗಂಟೆ ವೇಳೆಗೆ ಹಲವೆಡೆ ಮತ್ತೆ ಭೂಮಿ ಕಂಪಿಸಿರುವುದಾಗಿ ವರದಿಯಾಗಿದೆ.

ಅರಂತೋಡು, ಮರ್ಕಂಜ, ಪೆರಾಜೆ, ಚೆಂಬು, ತೊಡಿಕಾನ, ಉಬರಡ್ಕ ಮತ್ತಿತರ ಪ್ರದೇಶಗಳಲ್ಲಿ ಕಂಪನ ಆಗಿರುವುದಾಗಿ ಹಲವರು ತಿಳಿಸಿದ್ದಾರೆ. ನಿನ್ನೆಯೂ ಇದೇ ಭಾಗದಲ್ಲಿ ಭೂಮಿ ಬೆಳಗ್ಗಿನ ಜಾವದಲ್ಲಿ ಕಂಪಿಸಿತ್ತು. ಇದೀಗ ಮತ್ತೆ ಕಂಪನ ಜನರಲ್ಲಿ ಆತಂಕ ದಿನಿದಿಂದ ದಿನಕ್ಕೆ ಹೆಚ್ಚಾಗುವಾಗೇ ಮಾಡಿದೆ.