Home ದಕ್ಷಿಣ ಕನ್ನಡ SSLC ಫಲಿತಾಂಶ ಪ್ರಕಟ : 10 ವರ್ಷಗಳಲ್ಲೇ ದಾಖಲೆಯ ಫಲಿತಾಂಶ – ಈ ವರ್ಷವೂ ಬಾಲಕಿಯರದ್ದೇ...

SSLC ಫಲಿತಾಂಶ ಪ್ರಕಟ : 10 ವರ್ಷಗಳಲ್ಲೇ ದಾಖಲೆಯ ಫಲಿತಾಂಶ – ಈ ವರ್ಷವೂ ಬಾಲಕಿಯರದ್ದೇ ಮೇಲುಗೈ – ವಿಜಯಪುರ ಜಿಲ್ಲೆ ಟಾಪ್!!!

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಿದೆ. ಮಲ್ಲೇಶ್ವರಂನಲ್ಲಿರುವ ಪ್ರೌಢ ಶಿಕ್ಷಣ ಪರೀಕ್ಷಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು 2021-22ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಈ ವರ್ಷವೂ ಬಾಲಕಿಯರದ್ದೇ ಮೇಲುಗೈ ಸಾಧಿಸಿದ್ದಾರೆ.
ಈ ವರ್ಷ 85.63%  ಫಲಿತಾಂಶ ಬಂದಿದೆ.

2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಅಮಿತ್ ಮಾದರ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಮಿತ್ ವಿಜಯಪುರ ಜಿಲ್ಲೆಯ ವಿದ್ಯಾರ್ಥಿಯಾಗಿದ್ದಾರೆ. ತುಮಕೂರಿನ ಭೂಮಿಕಾ ಅವರು ರಾಜ್ಯಕ್ಕೆ 2 ನೇ ಸ್ಥಾನ ಪಡೆದಿದ್ದಾರೆ.

ಮಿಕ್ಕಂತೆ ನಂತರದ ಸ್ಥಾನ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಇಂತಿದೆ

625ಕ್ಕೆ 624 ಅಂಕ ಪಡೆದವರು- 309 ವಿದ್ಯಾರ್ಥಿಗಳು

625ಕ್ಕೆ 623ಅಂಕ ಪಡೆದವರು 472 ವಿದ್ಯಾರ್ಥಿಗಳು

622 ಅಂಕ ಪಡೆದವರು- 615 ವಿದ್ಯಾರ್ಥಿಗಳು

621 ಅಂಕ ಪಡೆದವರು- 706 ವಿದ್ಯಾರ್ಥಿಗಳು

620 ಅಂಕ ಪಡೆದವರು -773 ವಿದ್ಯಾರ್ಥಿಗಳು

ಕೊರೋನಾ ಆತಂಕ, ಹಿಜಾಬ್ ವಿವಾದದ ನಡುವೆ ಪರೀಕ್ಷೆಗೆ ಹಾಜರಾಗಿದ್ದ 8,73,884 ವಿದ್ಯಾರ್ಥಿಗಳ ಪೈಕಿ 8,53,436 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 7,30,881 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದಾರೆ.

ಈ ಬಾರಿ ವಿಜಯಪುರ ಜಿಲ್ಲೆ ಟಾಪ್ 1, ತುಮಕೂರು 2, ಹಾವೇರಿ 3, ಬೆಳಗಾವಿ 4 ನೇ ಸ್ಥಾನ ಪಡೆದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಮಾರ್ಕ್ಸ್ ಪಡೆದಿದ್ದಾರೆ. ಪ್ರತಿ ಬಾರಿಯಂತೆ ಮೊದಲ ಸ್ಥಾನ ಪಡೆಯುತ್ತಿದ್ದ ದ.ಕ.ಜಿಲ್ಲೆ ಈ ಬಾರಿ ಮೊದಲ ಸ್ಥಾನ ಪಡೆಯದಿರುವುದು ಗಮನಾರ್ಹ ವಿಷಯವಾಗಿದೆ. ಈ ಬಾರಿ ಹಳ್ಳಿ ಸೊಗಡಿನ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿರುವುದು ಅವರು ಪಟ್ಟ ಶ್ರಮಕ್ಕೆ ಸಂದ ಫಲವಾಗಿದೆ.

ಎಸ್ಎಸ್ಎಲ್‌ಸಿ ಫಲಿತಾಂಶ ಚೆಕ್ ಮಾಡುವ ವಿಧಾನ

– ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಫಲಿತಾಂಶ ವೆಬ್‌ಸೈಟ್ https://karresults.nic.in ಗೆ ಭೇಟಿ
ನೀಡಿ. – ಓಪನ್ ಆದ ಪೇಜ್‌ನಲ್ಲಿ ಮೊದಲು ರಿಜಿಸ್ಟ್ರೇಷನ್ ನಂಬರ್ ಟೈಪ್ಚಮಾಡಿ.

– ನಂತರ ವಿದ್ಯಾರ್ಥಿಗಳು ತಮ್ಮ ಜನ್ಮ ದಿನಾಂಕ ಮಾಹಿತಿ
ಸೆಲೆಕ್ಟ್ ಮಾಡಿ ನೀಡಿ.

-‘SUBMIT’ ಎಂಬಲ್ಲಿ ಕ್ಲಿಕ್ ಮಾಡಿ.

– ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರದರ್ಶನವಾಗುತ್ತದೆ.

– ತಮ್ಮ ಫಲಿತಾಂಶವನ್ನು ವಿಷಯವಾರು ಗಳಿಸಿದ ಅಂಕಗಳು, ಒಟ್ಟು ಅಂಕಗಳು, ಶೇಕಡ ಅಂಕಗಳ ಮಾಹಿತಿ ಲಭ್ಯ ಇರುತ್ತದೆ.

– ಮುಂದಿನ ರೆಫರೆನ್ಸ್ ಗಾಗಿ ಪ್ರಿಂಟ್ ತೆಗೆದುಕೊಳ್ಳಿ.

ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್ಎಂಎಸ್ ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ. ಮೊಬೈಲ್ ನಲ್ಲೂ ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ಪಡೆಯಬಹುದು.

ಮೇ 27ರಿಂದ ಪೂರಕ ಪರೀಕ್ಷೆ: ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಮೇ 27ರಿಂದ ಎಸ್‌ಎಸ್ ಎಲ್‌ಸಿ ಪೂರಕ ಪರೀಕ್ಷೆ ನಡೆಯುತ್ತದೆ. ಮೇ 27ರಿಂದ ಜೂನ್ 4ರವರೆಗೆ ನಡೆಯುತ್ತದೆ. ಮೇ 20ರಿಂದ 30ರವರೆಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಇರುತ್ತದೆ.