Home ದಕ್ಷಿಣ ಕನ್ನಡ ಮಂಗಳೂರು:ಸಿರಿಯಾ ಪ್ರಿನ್ಸೆಸ್ ಹಡಗು ಮುಳುಗಡೆಯಿಂದ ತೈಲ ಸೋರಿಕೆಯ ಆತಂಕ!! ಲೆಬನಾನ್ ಸಾಗಬೇಕಿದ್ದ ಹಡಗು ಇಲ್ಲಿಗೇಕೆ ಬಂತು!??

ಮಂಗಳೂರು:ಸಿರಿಯಾ ಪ್ರಿನ್ಸೆಸ್ ಹಡಗು ಮುಳುಗಡೆಯಿಂದ ತೈಲ ಸೋರಿಕೆಯ ಆತಂಕ!! ಲೆಬನಾನ್ ಸಾಗಬೇಕಿದ್ದ ಹಡಗು ಇಲ್ಲಿಗೇಕೆ ಬಂತು!??

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಸಿರಿಯಾ ದೇಶದ ಎಂಬಿ ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಜೂನ್ 23 ರಂದು ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಇದೀಗ ವಿದೇಶಿ ಸರಕು ಸಾಗಾಣೆ ಹಡಗಿನಲ್ಲಿ ಬರೋಬ್ಬರಿ 220 ಮೆಟ್ರಿಕ್ ಟನ್ ತೈಲ ಸೋರಿಕೆಯಾಗಿರುವ ಬಗ್ಗೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಜೂನ್ 23 ರಂದು ಮಂಗಳೂರಿನ ಉಚ್ಚಿಲ ಬಟ್ಟಪಾಡಿ ಕಡಲ ತೀರದಲ್ಲಿ ಸಿರಿಯಾ ದೇಶದ ಎಂಬಿ ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಮುಳುಗಡೆಯಾಗಿತ್ತು. ಅದು ಚೀನಾದಿಂದ ಲೆಬನಾನ್‌ಗೆ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿತ್ತು. ಹಡಗು ಮುಳುಗಡೆ ವೇಳೆ ಇಂಡಿಯನ್ ಕೋಸ್ಟ್ ಗಾರ್ಡ್ ಅದರಲ್ಲಿದ್ದ 15 ಸಿಬ್ಬಂದಿಯ ರಕ್ಷಣೆ ಮಾಡಿತ್ತು. ಆದರೆ ಇದೀಗ ತೈಲ ಸೋರಿಕೆ ಬಗ್ಗೆ ಆತಂಕ ಸೃಷ್ಟಿಯಾಗಿದೆ.

ತೈಲ ಸೋರಿಕೆಯಾದರೆ, ಮತ್ಸ್ಯ ಸಂಕುಲದ ನಾಶವಾಗಿ, ಮೀನುಗಾರರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ತೈಲ ಸೋರಿಕೆ ಆತಂಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಅಲರ್ಟ್ ಆಗಿದೆ. ತೈಲ ಸೋರಿಕೆಯಾದರೆ, ಮುಂದಿನ ಕ್ರಮಗಳ ಬಗ್ಗೆ ದ.ಕ. ಡಿಸಿ ಡಾ. ರಾಜೇಂದ್ರ ಮಾನಿಟರ್ ಮಾಡುತ್ತಿದ್ದಾರೆ.

ಚೀನಾದ ಹಡಗು ಮಂಗಳೂರು ಸಮುದ್ರ ತೀರ ಪ್ರವೇಶದ ಬಗ್ಗೆ ಅನುಮಾನ ಮೂಡಿದ್ದು, ಲೆಬನಾನ್‌ಗೆ ಸಾಗಬೇಕಿದ್ದ ಹಡಗು ಮಂಗಳೂರಿಗೆ ಬಂದಿದ್ದೇಕೆ ಎಂಬ ಪ್ರಶ್ನೆ ಕೂಡ ಮೂಡಿದೆ. ಈ ಬಗ್ಗೆ ಕೇಂದ್ರ ತನಿಖಾ ದಳದಿಂದ ತನಿಖೆ ನಡೆಸುವ ಸಾಧ್ಯತೆ ಇದೆ.