Home ದಕ್ಷಿಣ ಕನ್ನಡ ಮಂಗಳೂರು: ಇಸ್ಲಾಂ ಅನ್ನೋದು ಧರ್ಮವಲ್ಲ, ಅದೊಂದು ಕಾಮುಕರ ಗ್ಯಾಂಗ್ !! | ಹಿಂದೂ ಜಾಗರಣ ವೇದಿಕೆ...

ಮಂಗಳೂರು: ಇಸ್ಲಾಂ ಅನ್ನೋದು ಧರ್ಮವಲ್ಲ, ಅದೊಂದು ಕಾಮುಕರ ಗ್ಯಾಂಗ್ !! | ಹಿಂದೂ ಜಾಗರಣ ವೇದಿಕೆ ಮುಖಂಡರ ವಿವಾದಾತ್ಮಕ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದ ಹಿಂದೂ ಜಾಗೃತಿ ಸಭೆಯ ಪ್ರಧಾನ ಭಾಷಣದಲ್ಲಿ, ಇಸ್ಲಾಂ ಅನ್ನೋದು ಧರ್ಮವಲ್ಲ, ಅದೊಂದು ಕ್ರೌರ್ಯ, ಕಾಮುಕರ ಗ್ಯಾಂಗ್ ಎಂಬುದಾಗಿ ಅರ್ಥೈಸಿಕೊಳ್ಳಬಹುದು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಸ್ಲಾಂ ಎನ್ನುವಂತದ್ದು ಧರ್ಮವಲ್ಲ, ಮತವಲ್ಲ, ಸಂಸ್ಕೃತಿಯಲ್ಲ, ಸಭ್ಯತೆಯಲ್ಲ, ಸಂಸ್ಕಾರವಲ್ಲ, ಮಾನವೀಯತೆಯೂ ಅಲ್ಲ. ಅದೊಂದು ಕ್ರೌರ್ಯ, ಅಮಾನುಷತೆ, ಅತ್ಯಾಚಾರ, ಲೂಟಿಕೋರರ ತಂಡ. ಅದೊಂದು ಕಾಮುಕರ ಗ್ಯಾಂಗ್. ಈ ರೀತಿಯಾಗಿ ಇಸ್ಲಾಂನ್ನು ಅರ್ಥೈಸಿಕೊಳ್ಳಬಹುದು ಅನ್ನಿಸುತ್ತದೆ ಎಂದಿದ್ದಾರೆ.

ಅವರ ಎಲ್ಲ ಚಟುವಟಿಕೆಗಳು ಮುಂಚೂಣಿಗೆ ಬಂದಾಗ, ನಾವು ಅದನ್ನು ಗಮನಿಸಿದಾಗ ಈ ಎಲ್ಲ ಬೆಳವಣಿಗೆಗಳು ನಮಗೆ ಅರ್ಥವಾಗುತ್ತದೆ ಎಂದ ರಾಧಾಕೃಷ್ಣ, ಲವ್ ಜಿಹಾದ್ ಬಗ್ಗೆಯೂ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಭಾಷಣದ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.