Home ದಕ್ಷಿಣ ಕನ್ನಡ ಮಂಗಳೂರು:ಬುರ್ಖಾದ ಮರೆಯಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಬೀಳಲಿದೆಯೇ ಬ್ರೇಕ್!! ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗಿಟ್ಟಿಸಿಕೊಂಡ ಆ ಒಂದು...

ಮಂಗಳೂರು:ಬುರ್ಖಾದ ಮರೆಯಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಬೀಳಲಿದೆಯೇ ಬ್ರೇಕ್!! ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗಿಟ್ಟಿಸಿಕೊಂಡ ಆ ಒಂದು ಗೂಂಡಾ ಗ್ಯಾಂಗ್ ತಯಾರಾಗಿದ್ದು ಯಾಕೆ!??

Hindu neighbor gifts plot of land

Hindu neighbour gifts land to Muslim journalist

ಮಂಗಳೂರು:ಹಿಂದೂ ಯುವತಿಯರ ಓಡಾಟ, ಮೋಜು ಮಸ್ತಿಯ ಮೇಲೆ ನಿಗಾ ಇಡಲು ಹಿಂದೂ ಸಂಘಟನೆಗಳು ಒಟ್ಟಾಗಿರುವ ಬೆನ್ನಲ್ಲೇ ಮಂಗಳೂರಿನಲ್ಲಿ ಮುಸ್ಲಿಂ ಸಂಘಟನೆಯೊಂದು ತಮ್ಮ ಧರ್ಮದ ಯುವತಿಯರ ಬೆನ್ನು ಬಿದ್ದಿದೆ.ಬುರ್ಖಾದ ಮರೆಯಲ್ಲಿ ಇಲ್ಲಸಲ್ಲದ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗುವ ಯುವತಿಯರ ಮೇಲೆ ನಿಗಾ ಇಡಲು ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ತಂಡವೊಂದು ತಯಾರಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿದೆ.

ಇತ್ತೀಚಿಗೆ ಮಂಗಳೂರಿನ ಪ್ರತಿಷ್ಟಿತ ಫೋರಮ್ ಫಿಜ್ಜಾ ಮಾಲ್ ಒಂದರ ಮೂಲೆಯಲ್ಲಿ ಬುರ್ಖಾ ಧರಿಸಿದ್ದ ಯುವತಿಯೊರ್ವಳು ತನ್ನ ಸ್ನೇಹಿತನೊಂದಿಗೆ ಮೈಮರೆತ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಹೆಚ್ಚು ಸುದ್ದಿಯಾಗುವುದರೊಂದಿಗೆ ಮುಸ್ಲಿಂಮರ ಆಕ್ರೋಶಕ್ಕೂ ಕಾರಣವಾಗಿತ್ತು. ಇಂತಹ ಹಲವು ಘಟನೆಗಳು ಬುರ್ಖಾದ ಮರೆಯಲ್ಲಿ ನಡೆಯುತ್ತಿದೆ, ಮುಂದೆ ಇಂತಹ ಘಟನೆ ಮರುಕಲಿಸದಂತೆ ಈ ತಂಡ ನಿಗಾ ವಹಿಸಲಿದೆಯಂತೆ.

ಈ ಮೊದಲು ಹಲವು ಬಾರಿ ಹುಡುಗರು ಸಿಕ್ಕಿ ಬಿದ್ದಿದ್ದು ಎಚ್ಚರಿಕೆ ನೀಡಲಾಗಿತ್ತು. ಆದರೆ ಈಗ ಹುಡುಗಿಯರೇ ಬುರ್ಖಾದ ಮರೆಯಲ್ಲಿ ಇಂತಹ ಕೆಲಸಕ್ಕೆ ಕೈಹಾಕುತ್ತಿದ್ದೂ ಇನ್ನೂ ಸುಧಾರಣೆಯಾದಂತೆ ಕಾಣುತ್ತಿಲ್ಲವಂತೆ. ಇದಕ್ಕಾಗಿಯೇ ಈ ತಂಡ ತಯಾರಾಗಿದ್ದು, ಇನ್ನು ಧರ್ಮದೇಟು ಕೊಟ್ಟೇ ಸರಿಪಡಿಸುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿದೆ.

ನಮ್ಮ ಕೈಗೆ ಸಿಕ್ಕಿ ಮಾನ ಕಳೆದುಕೊಳ್ಳುವ ಮುನ್ನ ಜಾಗ್ರತೆ ವಹಿಸಿ ಎಂಬ ಎಚ್ಚರಿಕೆಯ ಕರೆಯನ್ನು ಈ ತಂಡ ಯುವತಿಯರ ಪೋಷಕರಿಗೂ ನೀಡಿದ್ದು, ತಂಡದ ಕಾರ್ಯ ಯಾವ ಹಂತ ತಲುಪಲಿದೆ, ನಿಜಕ್ಕೂ ಬುರ್ಖಾದ ಮರೆಯಲ್ಲಿ ನಡೆಯುವ ಅನೈತಿಕ ಚಟುವಟಿಕೆ ಬೆಳಕಿಗೆ ಬರಲಿದೆಯೇ ಎಂಬುವುದನ್ನು ಇನ್ನಷ್ಟೇ ಕಾಣಬೇಕಿದೆ.