Home ದಕ್ಷಿಣ ಕನ್ನಡ ಮಂಗಳೂರು : ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ವೀಡಿಯೋ ತೋರಿಸಿ ಕಿರುಕುಳ | ಆರೋಪಿಯ ಬಂಧನ

ಮಂಗಳೂರು : ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ವೀಡಿಯೋ ತೋರಿಸಿ ಕಿರುಕುಳ | ಆರೋಪಿಯ ಬಂಧನ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರವೆಸಗಿ, ವೀಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ನ ಎನ್ ಐಟಿಕೆ ಬೀಚ್ ಗೆಂದು ತನ್ನ ಸಹಪಾಠಿಯೊಂದಿಗೆ ಜು. 27 ರಂದು ಈ ವಿದ್ಯಾರ್ಥಿನಿ ಬಂದಿದ್ದಳು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಮುನಾಝ್ ಅಹಮ್ಮದ್ ವಿದ್ಯಾರ್ಥಿನಿಯ ಸಹಪಾಠಿಯನ್ನು ಹೆದರಿಸಿ ಓಡಿಸಿದ್ದಾನೆ. ನಂತರ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಅಷ್ಟು ಮಾತ್ರವಲ್ಲದೇ ಈ ಕೃತ್ಯದ ವೀಡಿಯೋ ಮಾಡಿದ್ದಾನೆ ಕೂಡಾ. ಅನಂತರ ಆರೋಪಿ ಬಳಿಕ ಅದನ್ನು ವಿದ್ಯಾರ್ಥಿನಿಗೆ ತೋರಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ‌

ಇದರಿಂದ ನೊಂದ ವಿದ್ಯಾರ್ಥಿನಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಳು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮುನಾಝ್ ಅಹಮ್ಮದ್ ಬಂಧಿತ ಆರೋಪಿ. ಈತ ಮೀನು ಲಾರಿ
ಚಾಲಕನಾಗಿ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿನಿ ಕೊಟ್ಟ ದೂರಿನ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.