Home ದಕ್ಷಿಣ ಕನ್ನಡ ಮಂಗಳೂರು: ಬಾಲ್ ತರಲೆಂದು ಹಾಸ್ಟೆಲ್ ಕಟ್ಟಡ ಏರಿದ ವಿದ್ಯಾರ್ಥಿ ಬಿದ್ದು ಮೃತ್ಯು!

ಮಂಗಳೂರು: ಬಾಲ್ ತರಲೆಂದು ಹಾಸ್ಟೆಲ್ ಕಟ್ಟಡ ಏರಿದ ವಿದ್ಯಾರ್ಥಿ ಬಿದ್ದು ಮೃತ್ಯು!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಹಾಸ್ಟೆಲ್ ಕಟ್ಟಡವೊಂದರ ನಾಲ್ಕನೇ ಮಹಡಿಯಿಂದ ವಿದ್ಯಾರ್ಥಿಯೊಬ್ಬ ಬಿದ್ದು ಮೃತಪಟ್ಟ ಘಟನೆ ಬುಧವಾರ ಅಪರಾಹ್ನ ನಡೆದಿದೆ. ಈ ಘಟನೆ
ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿಯಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಪ್ರಣವ್ ಎಸ್.ಮುಂಡಾಸ (17) ಎಂದು ಗುರುತಿಸಲಾಗಿದೆ.

ಮೂಲತಃ ಬಿಜಾಪುರದ ಸತೀಶ್ ಎಂಬವರ ಪುತ್ರನಾಗಿರುವ ಈತ ನಗರದ ಕೊಟ್ಟಾರ ಚೌಕಿಯ ಚೈತನ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಎಂದು ತಿಳಿದು ಬಂದಿದೆ.

ಕೆಲವು ಮಕ್ಕಳು ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭದಲ್ಲಿ ಹಾಸ್ಟೆಲ್ ಕಟ್ಟಡದ ಮೇಲ್ಗಡೆ ಬಾಲ್ ಬಿದ್ದಿದ್ದು, ಕಟ್ಟಡದ ನಾಲ್ಕನೇ ಮಹಡಿಯಲ್ಲಿದ್ದ ಪ್ರಣವ್ ಅದನ್ನು ಹೆಕ್ಕುವ ಸಲುವಾಗಿ ಮಹಡಿಗೆ ಅಳವಡಿಸಲಾದ ಶೀಟ್‌ಗೆ ಏರಿದ್ದಾನೆ. ಈ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದು, ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.