Home ದಕ್ಷಿಣ ಕನ್ನಡ ಮಂಗಳೂರು : ಬಸ್ ಬೆಂಕಿಗಾಹುತಿಯಾದ ಪ್ರಕರಣ: ಆರೋಪಿ ಬಸ್ ಚಾಲಕನನ್ನು ಅರೆಸ್ಟ್ ಮಾಡಿದ ಪೊಲೀಸರು!

ಮಂಗಳೂರು : ಬಸ್ ಬೆಂಕಿಗಾಹುತಿಯಾದ ಪ್ರಕರಣ: ಆರೋಪಿ ಬಸ್ ಚಾಲಕನನ್ನು ಅರೆಸ್ಟ್ ಮಾಡಿದ ಪೊಲೀಸರು!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ನಗರದ ಹಂಪನಕಟ್ಟೆ ಬಳಿ ಎ.8 ರಂದು ಮಧ್ಯಾಹ್ನ ಖಾಸಗಿ ಬಸ್ಸೊಂದು ಬೈಕ್‌ಗೆ ಡಿಕ್ಕಿಯಾಗಿ ಬೆಂಕಿಗಾಹುತಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸ್ ಚಾಲಕ ಬಿಜು ಮೋನು ಎಂಬಾತನನ್ನು ಕದ್ರಿ ಸಂಚಾರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಈ ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಪ್ರಕರಣ ದಾಖಲಾಗಿದೆ. ಆ ಹಿನ್ನೆಲೆಯಲ್ಲಿ ಬಿಜು ಮೋನುನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿಗೆ ಎ.26ರ ತನಕ ನ್ಯಾಯಾಂಗ ಬಂಧನವಾಗಿದೆ.
ಸುರತ್ಕಲ್ ಜನತಾ ಕಾಲನಿಯಿಂದ ಬಿಜು ಮೋನು ಚಲಾಯಿಸಿಕೊಂಡು ಬರುತ್ತಿದ್ದ ರೂಟ್ ನಂಬರ್ 45 ಜಿ ಸಂಖ್ಯೆಯ ಅಶೆಲ್ ಹೆಸರಿನ ಬಸ್ ಹಾಗೂ ವೆಲೆನ್ಸಿಯಾದಲ್ಲಿ ಚಾರ್ಟೆಡ್ ಅಕೌಂಟ್ಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಬಳ್ಳಾಲ್ ಭಾಗ್ ನಿವಾಸಿ ಡೇಲನ್ (26) ಚಲಾಯಿಸುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಇದರಿಂದ ಎರಡೂ ವಾಹನಗಳು ಬೆಂಕಿಗಾಹುತಿಯಾಗಿದ್ದವು. ಘಟನೆಯಲ್ಲಿ ಬೈಕ್ ಸವಾರನ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿತ್ತು.