Home ದಕ್ಷಿಣ ಕನ್ನಡ ಪುತ್ತೂರು : ಮಹಿಳೆಯ ಮನೆಗೆ ಭೇಟಿ ನೀಡುವ ಅಪಪ್ರಚಾರದ ವಿಚಾರ- ಯುವಕನ ಮೇಲೆ ಮಾರಣಾಂತಿಕ ಹಲ್ಲೆ!!!

ಪುತ್ತೂರು : ಮಹಿಳೆಯ ಮನೆಗೆ ಭೇಟಿ ನೀಡುವ ಅಪಪ್ರಚಾರದ ವಿಚಾರ- ಯುವಕನ ಮೇಲೆ ಮಾರಣಾಂತಿಕ ಹಲ್ಲೆ!!!

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಮಹಿಳೆಯ ಮನೆಗೆ ಮಧ್ಯರಾತ್ರಿ ವ್ಯಕ್ತಿಯೋರ್ವ ಭೇಟಿ ನೀಡುತ್ತಾನೆಂದು ಅಪ್ರಚಾರ ಮಾಡಿದ ಆರೋಪದಲ್ಲಿ ಯುವಕನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದ ಘಟನೆಯೊಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುನ್ನೂರು ಗ್ರಾಮದ ರಾಕೇಶ್ ಎಂಬಾತನಿಗೆ ಏ.4 ರಂದು ರಾತ್ರಿ ಪಂಚೋಡಿಯ ಲೋಕೇಶ ಪಾಟಾಳಿ ಎಂಬಾತನು ಕರೆ ಮಾಡಿ ‘ಮಹಿಳೆಯ ಮನೆಗೆ ಮಧ್ಯರಾತ್ರಿ ಹೋಗುತ್ತೇನೆಂದು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತೀಯಾ? ಎಂದು ಪ್ರಶ್ನಿಸಿದ್ದಾನೆ.

ಇಷ್ಟೆಲ್ಲಾ ಆದ ನಂತರ ಎ.06 ರಂದು ಮೇನಾಲದ ಭಾಸ್ಕರ ಎಂಬ ವ್ಯಕ್ತಿ ರಾಕೇಶ್‌ಗೆ ಕರೆ ಮಾಡಿ ,ಒಮ್ಮೆ ಖುದ್ದಾಗಿ ಮಾತನಾಡಲು ಸಿಗಬೇಕು ಎಂದು ಹೇಳಿದ್ದಾನೆ.

ಹೀಗಾಗಿ ರಾಕೇಶ ಮೇನಾಲದಲ್ಲಿ ಭಾಸ್ಕರನನ್ನು ಕಾಣಲು ಹೋದಾಗ, ”ನನ್ನ ಅತ್ತೆಯ ಮಗಳ ಮನೆಗೆ ಪಂಚೋಡಿಯ ಲೋಕೇಶ ಪಾಟಾಳಿ ರಾತ್ರಿ ವೇಳೆ ಬರುತ್ತಿರುವುದಾಗಿ ನೀನು ಪ್ರಚಾರ ಮಾಡುತ್ತೀಯಾ?’ ಎಂದು ಪ್ರಶ್ನಿಸಿದಾಗ “ನನಗೆ ಈ ವಿಚಾರ ಗೊತ್ತಿಲ್ಲ” ಎಂಬುದಾಗಿ ರಾಕೇಶ್ ಹೇಳಿದ್ದಾನೆ.

ಆ ಸಮಯದಲ್ಲಿ ಅಲ್ಲಿಗೆ ಕಾರಿನಲ್ಲಿ ಬಂದ ಪಂಚೋಡಿಯ ಲೋಕೇಶ ಪಾಟಾಳಿ ಮತ್ತು ಕೇಶವ ಪಾಟಾಳಿ ಅವಾಚ್ಯ ಶಬ್ದದಿಂದ ನಿಂದಿಸಿ, ನಿನ್ನನ್ನು ಇಲ್ಲಿಯೇ ಕೊಂದು ಬಿಡುತ್ತೇನೆ ಎನ್ನುತ್ತಾ ಕೈಯಲ್ಲಿದ್ದ ಚೂರಿಯಿಂದ ಇರಿಯಲು ಬಂದಾಗ ರಾಕೇಶ್‌ನ ಕೈಗೆ ಚೂರಿ ತಾಗಿ ಗಾಯವಾಗಿದೆ.

ಇದೇ ವೇಳೆ ಅದೇ ರಸ್ತೆಯಲ್ಲಿ ಮೋಟಾರ್ ಸೈಕಲೊಂದು ಬರುತ್ತಿರುವುದನ್ನು ನೋಡಿದ ರಾಕೇಶ್ ಆರೋಪಿಗಳಿಂದ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ ಭಾಸ್ಕರನು ಹಿಡಿದಿಟ್ಟಾಗ ಮತ್ತೆ ಕೇಶವ ಪಾಟಾಳಿಯು ಮರದ ದೊಣ್ಣೆಯಿಂದ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾನೆ.

ಬಳಿಕ ಬೈಕ್ ಏರಿ ತಪ್ಪಿಸಿದಾಗ “ಇವತ್ತು ನೀನು ಬದುಕಿದೆ. ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುದಾಗಿ ಭಾಸ್ಕರ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ರಾಕೇಶ್‌ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.