Home ದಕ್ಷಿಣ ಕನ್ನಡ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಅನ್ಯಮತೀಯರನ್ನು ಬಹಿಷ್ಕರಿಸಲು ಆಗ್ರಹ!! ದೇವಾಲಯದ ಅಧೀನಕ್ಕೆ ಒಳಪಟ್ಟ ಜಾಗಗಳಲ್ಲಿ ನಡೆಯುತ್ತಿರುವ ಕಾರುಬಾರುಗಳಿಗೆ ಬೀಳಲಿದೆ...

ಕುಕ್ಕೆ ಸುಬ್ರಹ್ಮಣ್ಯದಲ್ಲೂ ಅನ್ಯಮತೀಯರನ್ನು ಬಹಿಷ್ಕರಿಸಲು ಆಗ್ರಹ!! ದೇವಾಲಯದ ಅಧೀನಕ್ಕೆ ಒಳಪಟ್ಟ ಜಾಗಗಳಲ್ಲಿ ನಡೆಯುತ್ತಿರುವ ಕಾರುಬಾರುಗಳಿಗೆ ಬೀಳಲಿದೆ ಬ್ರೇಕ್

Hindu neighbor gifts plot of land

Hindu neighbour gifts land to Muslim journalist

ಸುಬ್ರಹ್ಮಣ್ಯ: ದಕ್ಷಿಣ ಭಾರತದ ಹೆಸರಾಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅಧೀನಕ್ಕೆ ಒಳಪಟ್ಟ ಜಾಗಗಳಲ್ಲಿ ಅನ್ಯಾಮತೀಯರೇ ತುಂಬಿ ಹೋಗಿದ್ದು, ಅವರದ್ದೇ ಕಾರುಬಾರು ನಡೆಯುತ್ತಿದೆ ಎಂದು ಹಿಂದೂ ಸಂಘಟನೆಗಳ ಮುಖಂಡರು ಕಿಡಿಕಾರಿದರು.

ಈ ಬಗ್ಗೆ ದೇವಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಲ್ಲಿ ಮನವಿ ಮಾಡಿದ ಹಿಂದೂ ನಾಯಕರು, ವರ್ತಮಾನ ಕಾಲದಲ್ಲಿ ದೇವಾಲಯದ ಸಿಬ್ಬಂದಿಗಳಾಗಿರುವ ಕೆಲ ಅನ್ಯಮತೀಯರನ್ನು ತಕ್ಷಣವೇ ಸೇವೆಯಿಂದ ಬೇರೆಡೆಗೆ ವರ್ಗಾವಣೆ ನಡೆಸಬೇಕು,ಹಾಗೂ ಇತ್ತೀಚೆಗೆ ನಡೆದ ಗೋಕಳವು ಯತ್ನ ಪ್ರಕರಣದ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಜಿಲ್ಲೆಯ ಹಲವು ದೇವಾಲಯಗಳ ಜಾತ್ರೆ, ಉತ್ಸವದ ಸಂದರ್ಭ ಅನ್ಯಮತೀಯರನ್ನು ಬಹಿಷ್ಕರಿಸಲಾಗಿದ್ದು,ಹಿಜಾಬ್ ಬಳಿಕ ನಡೆದ ಕೆಲ ಪ್ರಸಂಗಗಳು ಇಂತಹ ನಡೆಗೆ ಕಾರಣವಾಗಿದೆ.ಪುತ್ತೂರು ಮಹಾಲಿಂಗೇಶ್ವರನ ಜಾತ್ರೆಯ ಸಂದರ್ಭವೂ ಅನ್ಯಮತೀಯರನ್ನು ಬಹಿಷ್ಕರಿಸಲಾಗಿದ್ದು ಮುಂದಿನ ದಿನಗಳಲ್ಲಿ ಕುಕ್ಕೆಯಲ್ಲೂ ಈ ಕ್ರಮ ನಡೆಯಲಿದೆ ಎಂದು ಹಿಂದೂ ಸಂಘಟನೆಗಳ ನಾಯಕರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.