Home ದಕ್ಷಿಣ ಕನ್ನಡ ನಟಿ ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆಯಲು ಬರುತ್ತಿದ್ದಾಳೆ ಕೂರ್ಗ್ ಬೆಡಗಿ!! ರಿಷಬ್ ಶೆಟ್ಟಿ ಮುಂದಿನ ಚಿತ್ರದಲ್ಲಿ...

ನಟಿ ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆಯಲು ಬರುತ್ತಿದ್ದಾಳೆ ಕೂರ್ಗ್ ಬೆಡಗಿ!! ರಿಷಬ್ ಶೆಟ್ಟಿ ಮುಂದಿನ ಚಿತ್ರದಲ್ಲಿ ಪಾತ್ರ ಪಡೆದ ಆಕೆ ಯಾರು!??

Hindu neighbor gifts plot of land

Hindu neighbour gifts land to Muslim journalist

2016 ರಲ್ಲಿ ತೆರೆಕಂಡ ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ ನಾಯಕನಟನಾಗಿ ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರ ರಂಗದಲ್ಲಿ ತನ್ನ ನಟನೆಯ ಮೂಲಕ ಹೆಚ್ಚು ಸುದ್ದಿಯಾದರು.ಆ ಬಳಿಕ ತೆಲುಗು ಚಿತ್ರರಂಗದತ್ತ ಮುಖ ಮಾಡಿದ ಮಂದಣ್ಣ, ಅಲ್ಲಿಯೂ ಅಭಿಮಾನಿಗಳನ್ನು ಸಂಪಾದಿಸಿ ಬಹುಭಾಷಾ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ರಶ್ಮಿಕಾ ಗೆ ಸೆಡ್ಡು ಹೊಡೆಯಬಲ್ಲ ನಟಿ ಇನ್ನೊಬ್ಬರಿಲ್ಲ ಎನ್ನುವ ಮಾತು ಕೇಳಿ ಬರುತ್ತಲೇ ಇನ್ನೊಬ್ಬ ಕೂರ್ಗಿನ ನಟಿ ರಿಷಬ್ ಶೆಟ್ಟಿ ಗರಡಿಯಲ್ಲಿ ಪಳಗಲು ಸಜ್ಜಾಗಿದ್ದಾರೆ.

ಹೌದು, ರಶ್ಮಿಕಾ ಮಂದಣ್ಣರನ್ನು ಸಿನಿ ರಂಗಕ್ಕೆ ಪರಿಚಯಿಸಿದ ಶೆಟ್ಟಿ ಯವರು ಈಗ ಮತ್ತೋರ್ವ ಯುವ ನಟಿಯನ್ನು ಸಿನಿ ರಂಗಕ್ಕೆ ಪರಿಚಯಿಸಿದ್ದು ಕೂರ್ಗ್ ಮೂಲದ ತಪಸ್ವಿನಿ ಪೂನಚ್ಚ ಅವರೇ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟ ಯುವ ನಟಿ.ರಿಷಬ್ ಶೆಟ್ಟಿಯ ಹೊಸ ಚಿತ್ರವಾದ ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ಶಾಸಕರೊಬ್ಬರ ಪುತ್ರಿಯಾಗಿ ನಟಿಸಲಿರುವ ಪೂನಚ್ಚ ತಮ್ಮ ಹೊಸ ಚಿತ್ರದ ಬಗ್ಗೆ ಟೀಸರ್ ಬಿಡುಗಡೆಯ ವೇಳೆ ಖುಷಿ ವ್ಯಕ್ತಪಡಿಸಿದ್ದಾರೆ.

ಖುಷಿ ಜೋಕುಮಾರ ಸ್ವಾಮಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪೂನಚ್ಚ ಕನ್ನಡ ಸಿನಿಮಾದಲ್ಲಿ ಹೆಚ್ಚು ಹೆಸರು ಮಾಡಲಿ, ಇನ್ನಷ್ಟು ಅವಕಾಶಗಳು ಒಲಿದು ಬರಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.