Home ದಕ್ಷಿಣ ಕನ್ನಡ ಗಗನಕ್ಕೇರಿದ ಗಲ್ಫ್‌ ವಿಮಾನ ಪ್ರಯಾಣ ದರ, ಮಂಗಳೂರಿಗರೇ ಗಮನಿಸಿ

ಗಗನಕ್ಕೇರಿದ ಗಲ್ಫ್‌ ವಿಮಾನ ಪ್ರಯಾಣ ದರ, ಮಂಗಳೂರಿಗರೇ ಗಮನಿಸಿ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ರಜೆಯ ಕಾರಣದಿಂದ ಬಹುತೇಕ ಗಲ್ಫ್ ರಾಷ್ಟ್ರಗಳ ವಿಮಾನ ಪ್ರಯಾಣ ದರ ಈಗ ಗಗನಕ್ಕೇರಿದೆ. ಮಂಗಳೂರಿನಿಂದ ಕೊಲ್ಲಿ ರಾಷ್ಟ್ರಗಳಿಗೆ ಕಳೆದೊಂದು ತಿಂಗಳಿನಿಂದ ಪ್ರಯಾಣ ದರ ಹೆಚ್ಚಾಗಿದ್ದು, ಜುಲೈ ತಿಂಗಳ ಅಂತ್ಯದವರೆಗೂ ದರ ಇದೇ ರೀತಿಯಲ್ಲಿ ಮುಂದುವರಿಯಲಿದೆ.

ದಮಾಮ್‌ನಿಂದ ಮಂಗಳೂರಿಗೆ ತಡೆರಹಿತ ವಿಮಾನ ಯಾನದ ದರವು 50 ಸಾವಿರ ರೂ. ಆಗಿದೆ. ಇದು ಉಳಿದ ಎಲ್ಲಾ ರಾಷ್ಟ್ರಗಳ ಪ್ರಯಾಣಕ್ಕಿಂತಲೂ ಅತ್ಯಂತ ದುಬಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ಕೋವಿಡ್ ಮಹಾಮಾರಿಯ ನಂತರದ ದಿನಗಳಲ್ಲಿ ದ್ವಿಮುಖ ಸಂಚಾರದ ಟಿಕೆಟ್ ದರ 25 ಸಾವಿರ ರೂ.ಗಿಂತ ಕಡಿಮೆಯಿತ್ತು. ಈಗ ಅದೇ ದರ 35 ಸಾವಿರದಿಂದ 40 ಸಾವಿರಕ್ಕೆ ತಲುಪಿದೆ. ಬಹರೈನ್‌ನಿಂದ ಮಂಗಳೂರಿಗೆ ವಿಮಾನ ಪ್ರಯಾಣ ದರ 50 ಸಾವಿರ ದಾಟಿದೆ.

ಕೋವಿಡ್ ಸಾಂಕ್ರಾಮಿಕ ನಂತರದ ದಿನಗಳಲ್ಲಿ ದ್ವಿಮುಖ ಸಂಚಾರದ ಟಿಕೆಟ್ ದರ 25 ಸಾವಿರ ರೂ.ಗಿಂತ ಕಡಿಮೆಯಿತ್ತು. ಈಗ ಅದೇ ದರ 35 ಸಾವಿರದಿಂದ 40 ಸಾವಿರಕ್ಕೆ ತಲುಪಿದೆ. ಬಹರೈನ್‌ನಿಂದ ಮಂಗಳೂರಿಗೆ ವಿಮಾನ ಪ್ರಯಾಣ ದರ 50 ಸಾವಿರ ದಾಟಿದೆ. ಸಾಮಾನ್ಯ ದಿನಗಳಲ್ಲಿ ಈ ಮಾರ್ಗದಲ್ಲಿ ದ್ವಿಮುಖ ಸಂಚಾರ 40 ಸಾವಿರ ರೂ. ಒಳಗೆ ಲಭ್ಯವಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಗಲ್ಫ್ ರಾಷ್ಟ್ರಗಳಿಗೆ ಮಂಗಳೂರಿನಿಂದ ಸಂಚರಿಸುವ ಬಹುತೇಕ ಎಲ್ಲ ವಿಮಾನಗಳು ಫುಲ್ ಬುಕ್ಕಿಂಗ್ ಕಾಣುತ್ತಿದ್ದು, ಭಾರೀ ಡಿಮ್ಯಾಂಡ್ ಇರುವ ಕಾರಣದಿಂದ ವಿಮಾನ ದರದಲ್ಲಿ ವಿಪರೀತ ಏರಿಕೆ ಕಂಡು ಬಂದಿದೆ ಎಂದು ವಿಮಾನಯಾನಗಳ ಮೂಲಗಳು ತಿಳಿಸಿವೆ.

ಕೋವಿಡ್ ಬಳಿಕ ಗಲ್ಫ್ ರಾಷ್ಟ್ರಗಳಲ್ಲಿ ಸಹಜ ಸ್ಥಿತಿ ಇರುವ ಕಾರಣ ಎಲ್ಲ ವಿಮಾನ ಸಂಚಾರಗಳು ಯಥಾಸ್ಥಿತಿಯಲ್ಲಿ ಸಂಚರಿಸುತ್ತಿವೆ. ಈ ಕಾರಣ ಗಲ್ಫ್ ವಿಮಾನ ಯಾನಕ್ಕೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಇದಲ್ಲದೆ ಸದ್ಯ ಗಲ್ಫ್ ರಾಷ್ಟ್ರಗಳಲ್ಲಿ ರಜೆ ಇರುವ ಕಾರಣದಿಂದ ಬಹುತೇಕರು ಅಲ್ಲಿಂದ ಸ್ವದೇಶಕ್ಕೆ ಬಂದು ಮರಳಿ ಹೋಗಲು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಈ ಕಾರಣದಿಂದ ಸಹಜವಾಗಿಯೇ ಟಿಕೆಟ್ ದರದಲ್ಲಿ ಭಾರಿ ಏರಿಕೆಯಾಗಿದೆ. ಜುಲೈ ಬಳಿಕ ಟಿಕೆಟ್ ದರದಲ್ಲಿ ಸಹಜ ಸ್ಥಿತಿಗೆ ಬರಲಿದೆ ಎಂದು ಟ್ರಾವೆಲ್ಸ್ ಏಜೆನ್ಸಿಯೊಂದರ ಸಿಬ್ಬಂದಿ ವಿನ್ಸೆಂಟ್ ಮಾಹಿತಿ ನೀಡಿದ್ದಾರೆ.