Home ದಕ್ಷಿಣ ಕನ್ನಡ ಮಂಗಳೂರು : ಮೀನು ಕಾರ್ಖಾನೆ ಐವರ ದುರಂತ ಸಾವು ಪ್ರಕರಣ; ಕಂಪನಿಯಿಂದ ಮೃತ ಕುಟುಂಬಗಳಿಗೆ ತಲಾ...

ಮಂಗಳೂರು : ಮೀನು ಕಾರ್ಖಾನೆ ಐವರ ದುರಂತ ಸಾವು ಪ್ರಕರಣ; ಕಂಪನಿಯಿಂದ ಮೃತ ಕುಟುಂಬಗಳಿಗೆ ತಲಾ ರೂ.15ಲಕ್ಷ ಪರಿಹಾರ ಘೋಷಣೆ!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ನಗರದ ಉಲ್ಕಾ ಮೀನು ಕಾರ್ಖಾನೆ ದುರಂತ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಗಳಿಗೆ ಕಂಪನಿ ಪರಿಹಾರ ಧನ ನೀಡಲು ಕಡೆಗೂ ಒಪ್ಪಿಕೊಂಡಿದೆ. ಕಂಪೆನಿ ಪರಿಹಾರ ಧನ ನೀಡುವವರೆಗೂ, ಮೃತ ದೇಹ ಕಳುಹಿಸಿಕೊಡಲು ಸಮ್ಮತಿ ನೀಡಲಾಗುವುದಿಲ್ಲ ಎಂದು ಡಿ.ವೈ.ಎಫ್.ಐ, ಸಿಐಟಿಯು ನಾಯಕರು ಬೇಡಿಕೆಯಿಟ್ಟ ಪರಿಣಾಮ, ಸತತ ಮಾತುಕತೆಯ ನಂತರ ಕಂಪೆನಿ ಮೃತ ಕುಟುಂಬಸ್ಥರಿಗೆ ತಲಾ 15 ಲಕ್ಷ ರೂ.ಪರಿಹಾರ ಹಣ ನೀಡಲು ಒಪ್ಪಿದೆ.

ಈ ಹಣ 15 ದಿನದಲ್ಲಿ ಮೃತ ಕುಟುಂಬದವರಿಗೆ ವರ್ಗಾಯಿಸುವುದಾಗಿ ಲಿಖಿತ ರೂಪದಲ್ಲಿ ಕಂಪನಿ ಪತ್ರ ಬರೆದುಕೊಟ್ಟಿದ್ದು, ಕುಟುಂಬದವರಿಗೆ ನೀಡಿದೆ.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್, ಡಿವೈಎಫ್‌ಐ ನಾಯಕರಾದ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ಬಿಕೆ ಇಮ್ಮಿಯಾಝ್, ಮನೋಜ್ ಉರ್ವಸ್ಟೋರ್, ಪ್ರಶಾಂತ್ ಎಮ್.ಬಿ, ಬಜ್ಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಸಾಲಿ ಮರವೂರು ಮತ್ತಿತರರು ಉಪಸ್ಥಿತರಿದ್ದರು.