Home ದಕ್ಷಿಣ ಕನ್ನಡ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಾಲ್ಕನೇ ವ್ಯಕ್ತಿಯ ಸುಳಿವು ಕೊಟ್ಟ ಸ್ನೇಹಿತರು!!!

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಾಲ್ಕನೇ ವ್ಯಕ್ತಿಯ ಸುಳಿವು ಕೊಟ್ಟ ಸ್ನೇಹಿತರು!!!

Hindu neighbor gifts plot of land

Hindu neighbour gifts land to Muslim journalist

ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇದರ ನಂತರ ಅನೇಕ ಬೆಳವಣಿಗೆಗಳು ಆಗಿದ್ದು, ಅಲ್ಲಲ್ಲಿ ಪ್ರತಿಭಟನೆಗಳು ಕೂಡಾ ನಡೆದಿದ್ದವು. ಒತ್ತಡಕ್ಕೆ ಮಣಿದು ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೂಡಾ ನೀಡಿದ್ದರು.

ಇದೀಗ ಈ ಪ್ರಕರಣದಲ್ಲಿ ತಿರುವು ಕಂಡಿದೆ. ಪ್ರಕರಣದಲ್ಲಿ ಸಂತೋಷ್ ಸ್ನೇಹಿತ ರಾಜೇಶ್ ಎಂಬಾತನ ಹೆಸರು ಕೇಳಿ ಬರುತ್ತಿದೆ.

ಮೃತ ಸಂತೋಷ್ ಲಾಡ್ಡಲ್ಲಿ ರೂಂ ಬಾಡಿಗೆಗೆ ಪಡೆಯುವಾಗ ನನ್ನ ಸ್ನೇಹಿತ ರಾಜೇಶ್ ಸಹ ನನ್ನ ಜೊತೆ ಇರುತ್ತಾನೆ ಎಂದು ತಿಳಿಸಿದ್ದರು. ಬೇರೊಂದು ರೂಮ್ ಬಾಡಿಗೆ ಪಡೆದಿದ್ದ ಸ್ನೇಹಿತರಿಬ್ಬರ ದಿಕ್ಕು ತಪ್ಪಿಸಲು ಈ ರೀತಿ ಹೇಳಿದ್ದರಾ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ರಾಜೇಶ್ ಲಾಡ್ಜ್ ಗೆ ಬಂದು ಹೋಗಿದ್ದರಾ ಅಥವಾ ಇಲ್ಲವಾ ಎಂದು ಪೊಲೀಸರು ಲಾಡ್ಜ್ ನಲ್ಲಿರುವ ಸಿಸಿ ಟಿವಿ ಪರೀಕ್ಷಿಸುತ್ತಿದ್ದಾರೆ.