Home ದಕ್ಷಿಣ ಕನ್ನಡ ಪುತ್ತೂರು : ಹಿಂದೂ ದೇವರ ಅವಮಾನಿಸಿದ ಆರೋಪಿ ಕಾಂಗ್ರೆಸ್ ಮುಖಂಡೆ ಶೈಲಜಾ ಅಮರನಾಥ್ ಮನೆಗೆ ಅಟ್ಯಾಕ್...

ಪುತ್ತೂರು : ಹಿಂದೂ ದೇವರ ಅವಮಾನಿಸಿದ ಆರೋಪಿ ಕಾಂಗ್ರೆಸ್ ಮುಖಂಡೆ ಶೈಲಜಾ ಅಮರನಾಥ್ ಮನೆಗೆ ಅಟ್ಯಾಕ್ !

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಕಾಂಗ್ರೆಸ್ ನ ಐಟಿ ಸೆಲ್ ಕಾಯದರ್ಶಿಯಾಗಿರುವ ನ್ಯಾಯವಾದಿ ಶೈಲಜಾ ಅಮರನಾಥರವರ ಪುತ್ತೂರು ಬಪ್ಪಳಿಗೆ ಮನೆಗೆ ಯುವಕರ ತಂಡ ದಾಳಿ ನಡೆಸಿರುವ ಘಟನೆ ಜೂನ್ 18 ರಂದು ಸಂಜೆ ನಡೆದಿದೆ.

ಸಾಮಾಜಿಕ ಜಾಲತಾಣವಾದ ಕ್ಲಬ್ ಹೌಸ್ ಮೂಲಕ ನಡೆದ ಚರ್ಚಾಕೂಟದಲ್ಲಿ ಶ್ರೀರಾಮಚಂದ್ರ, ಸೀತಾಮಾತೆ ಮತ್ತು ಹನುಮಂತ ದೇವರನ್ನು ಶೈಲಜಾ ಅಮರನಾಥರವರು ಅವಮಾನಿಸಿದ್ದಾರೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷದ್ ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ಪ್ರಮುಖರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದಾದ ನಂತರ ಶೈಲಜಾ ಅವರ ಮನೆಯಂಗಳಕ್ಕೆ ಬಂದಿರುವ ಯುವಕರ ಗುಂಪೊಂದು ಮನೆಗೆ ದಾಳಿ ನಡೆಸಿ ಗಾಜುಗಳನ್ನು ಪುಡಿಗೈದು, ಕಪ್ಪು ಮಸಿ ಎರಚಿ ಪರಾರಿಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಮಹಿಳಾ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾಯದರ್ಶಿಯೂ ಆಗಿರುವ ಶೈಲಜಾ ಅಮರನಾಥರವರು ಮಾಹಿತಿ ನೀಡಿದ ಕೂಡಲೇ ಪೊಲೀಸರು ಶೈಲಜಾರವರ ಮನೆಗೆ ಭೇಟಿ ನೀಡಿದ್ದಾರೆ.