Home ದಕ್ಷಿಣ ಕನ್ನಡ Belthangady : ಸುನ್ನತ್ ಮಾಡಿದ ರೀತಿಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಫೋಟೋ ವೈರಲ್..!! ತನ್ನ...

Belthangady : ಸುನ್ನತ್ ಮಾಡಿದ ರೀತಿಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಫೋಟೋ ವೈರಲ್..!! ತನ್ನ ಹೇಳಿಕೆಯೇ ಪೂಂಜಾಗೆ ತಿರುಗು ಬಾಣವಾಯ್ತಾ?

Hindu neighbor gifts plot of land

Hindu neighbour gifts land to Muslim journalist

Belthangady : ಬೆಳ್ತಂಗಡಿಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು ಶಾಸಕ ಹರೀಶ್ ಪೂಂಜ ಅವರ ಫೋಟೋವನ್ನು ಸುನ್ನತ್ ಮಾಡಿದ ರೀತಿಯಲ್ಲಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ.

ಕೆಲ ದಿನಗಳ ಹಿಂದೆ ದೀಪಾವಳಿ ದೋಸೆ ಹಬ್ಬದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ(Harish Poonja)ಅವರು ‘ನಮ್ಮ ಕಡೆಯ ಉಸಿರು ಇರುವವರೆಗೂ ಹಿಂದುತ್ವವೇ ಬದುಕು ಎಂಬ ರೀತಿಯ ರಾಜಕಾರಣ ಮಾಡದಿದ್ದರೆ… ಮುಂದೊಂದು ದಿನ ನಾವು ಸುನ್ನತ್ ಮಾಡಿಕೊಳ್ಳಬೇಕಾದ ಸಂದರ್ಭ ಬರಬಹುದು. ಆದ್ದರಿಂದ ನಾವು ಹಿಂದುತ್ವವನ್ನು ಮೈಗೂಡಿಸಿಕೊಂಡು ಕೆಲಸ ಮಾಡಬೇಕು’ ಎಂದು
ಸುನ್ನತ್ ವಿಚಾರವಾಗಿ ಹರೀಶ್ ಪೂಂಜಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು’

ಇದೀಗ ಇದೇ ವಿವಾದವಾಗುತ್ತಿದ್ದು ಶಾಸಕನ ಹೇಳಿಕೆಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಪೋಸ್ಟ್‌ಗಳು ವೈರಲ್ ಆಗ್ತಿವೆ. ಈ ಮಧ್ಯೆ ಸುನ್ನತ್ ಮಾಡಿದ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ಪೋಟೊ ಎಡಿಟ್ ಮಾಡಿ ವೈರಲ್ ಆಗಿದೆ. ಇತ್ತೀಚೆಗೆ ಕಿಡಿಗೇಡಿಗಳ ವಿಕೃತಿ ಮಿತಿ ಮೀರಿದ್ದು ಇದಕ್ಕೆ ಇದೀಗ ಮತ್ತೊಂದು ಘಟನೆ ಸೇರ್ಪಡೆಯಾಗಿದೆ.