Home ದಕ್ಷಿಣ ಕನ್ನಡ ಮೂಡಬಿದಿರೆ : ಬಜರಂಗದಳ ಮುಖಂಡನಿಂದ ಕಾರ್ಯಕರ್ತನ ಪತ್ನಿಯ ಅಪಹರಣ ಪ್ರಕರಣ | ಮಹಿಳೆ ಪತ್ತೆ, ಪ್ರಜ್ಞಾ...

ಮೂಡಬಿದಿರೆ : ಬಜರಂಗದಳ ಮುಖಂಡನಿಂದ ಕಾರ್ಯಕರ್ತನ ಪತ್ನಿಯ ಅಪಹರಣ ಪ್ರಕರಣ | ಮಹಿಳೆ ಪತ್ತೆ, ಪ್ರಜ್ಞಾ ಕೌನ್ಸಿಲಿಂಗ್ ಕೇಂದ್ರಕ್ಕೆ

Hindu neighbor gifts plot of land

Hindu neighbour gifts land to Muslim journalist

ಮೂಡುಬಿದಿರೆ : ಕಾರ್ಕಳದ ಬಜರಂಗದಳದ ಮುಖಂಡನೋರ್ವ ಮೂಡುಬಿದಿರೆ ತಾಲೂಕಿನ ಬಜರಂಗದಳದ ಕಾರ್ಯಕರ್ತನೋರ್ವನ ಪತ್ನಿಯನ್ನೇ ಅಪಹರಿಸಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ಬಜರಂಗದಳದ ಬಜಗೋಳಿ ವಲಯ ಸಂಚಾಲಕ ಸಂದೀಪ್ ಆಚಾರ್ಯ ಅಪಹರಣ ಆರೋಪಿಯಾಗಿದ್ದಾನೆ. ಈತ ಶಿರ್ಲಾಲು ಹೈಸ್ಕೂಲ್ ಬಳಿ ಹಾಡಿಯಂಗಡಿ ಎಂಬಲ್ಲಿನ ನಿವಾಸಿ, ಬಜರಂಗದಳದ ಕಾರ್ಯಕರ್ತರೆನ್ನಲಾದ ಹರೀಶ್ ಎಂಬವರ ಪತ್ನಿಯನ್ನು ಅಪಹರಿಸಿರುವುದಾಗಿ ಮಹಿಳೆಯ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆ ವಾರದ ಹಿಂದೆ ಎರಡು ವರ್ಷದ ಮಗುವಿನೊಂದಿಗೆ ತವರು ಮನೆಗೆ ತೆರಳಿದ್ದಳು. ಈ ವೇಳೆ ಸಂದೀಪ್ ಆಚಾರ್ಯ ಆಕೆಯನ್ನು ಅಪಹರಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಹರಣಕ್ಕೊಳಗಾದ ಮಹಿಳೆ ಹಾಗೂ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಮಹಿಳೆಯನ್ನು ಮಂಗಳೂರಿನ ಪ್ರಜ್ಞಾ ಕೌನ್ಸಿಲಿಂಗ್ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.