ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಕೊನೆಗೂ ಗಲ್ಲುಶಿಕ್ಷೆ ಕಾಯಂ.Final verdict.
ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಕೊನೆಗೂ ಗಲ್ಲುಶಿಕ್ಷೆ ಕಾಯಂ. ಇನ್ನು ಯಾವುದೇ ರೀತಿಯಿಂದಲೂ ಅಪರಾಧಿಗಳು ತಪ್ಪಿಸಿಕೊಳ್ಳುವಂತಿಲ್ಲ. ಈಗ ಅವರ ಬದುಕಿನ ಎಲ್ಲಾ ಬಾಗಿಲುಗಳು ಮುಚ್ಚಿ ಬಿಟ್ಟಿವೆ. ಕಣ್ಣ ಮುಂದೆ ಸಾವಿನ ಕುಣಿಕೆ ನೇತಾಡುತ್ತಿದೆ .
ಗಲ್ಲು ಶಿಕ್ಷೆ ಗೆ ಬೇಕಾದ ಎಲ್ಲ ತಯಾರಿಯೂ ನಡೆದಿದೆ. ಬಿಹಾರದ ಜೈಲು ಹಕ್ಕಿಗಲ ನೆಯ್ದ ನೇಣಿನ ಹಗ್ಗ ರೆಡಿಯಾಗಿದೆ. ಉತ್ತರಪ್ರದೇಶದ ಜೈಲಿನಿಂದ ಗಲ್ಲು ಹಾಕಲು ಪರಿಣಿತರು ಬಂದಿದ್ದಾರೆ.
ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ಯನ್ನು ವಿಧಿಸಿದ ನಂತರ ಅಪರಾಧಿಗಳು ರಾಷ್ಟ್ರಪತಿಗೆ ಕ್ಷಮಾದಾನದ ಅರ್ಜಿಯನ್ನು ಹಾಕಿದ್ದರು. ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರು ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದ್ದರು.
ಅನಂತರ ಅಪರಾಧಿಗಳನ್ನು ಒಬ್ಬರಾದ ಅಕ್ಷಯ್ ಶರ್ಮಾ ನು ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಿದ್ದನು.
ದೆಹಲಿಯ ವಾಯುಮಾಲಿನ್ಯ ವಿಪರೀತವಾಗಿದೆ, ಮನುಷ್ಯನ ಆಯುಷ್ಯ ದಿನೇದಿನೇ ಕ್ಷೀಣಿಸುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಾವು ಸಾಯಲಿದ್ದೇವೆ. ಹಾಗಾಗಿ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಿಕೊಂಡು ಹೇಗಾದರೂ ಅದನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿಕೊಂಡು ಬದುಕಲು ಕೊನೆಯ ಪ್ರಯತ್ನ ನಡೆಸಿದ್ದ.
ನಿರ್ಭಯಾಳನ್ನು ಅತ್ಯಾಚಾರ ಮಾಡಿ, ಆಕೆ ಬದುಕಿರುವ೦ತೆಯೇ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ಸರಳನ್ನು ತೂರಿಸಿ ಪೈಶಾಚಿಕತೆ ಯ ಪರಾಕಾಷ್ಟೆಯನ್ನು ಮೆರೆದಿದ್ದರು. ನಿರ್ಭಯಾಳ ನ್ನು ಕೊಂದ ಅಪರಾಧಿಗಳ ಗಲ್ಲಿನತ್ತಲೇ ಈಗ ದೇಶದ ಚಿತ್ತ.