# Traffic Rules: ವಾಹನ ಸವಾರರೇ ಎಚ್ಚರ ಎಚ್ಚರ! ಇನ್ಮುಂದೆ ಇಲ್ಲೇನಾದರೂ ಬೈಕ್ ರೈಡ್ ಮಾಡಿದ್ರೆ ಫೈನ್​ ಜೊತೆಗೆ ಬೀಳುತ್ತೆ ಕೇಸ್

- Link: https://hosakannada.com/travel/traffic-rules-in-bengaluru/
- Published: 2023-01-24T11:06:44+00:00
- Author: ಕಾವ್ಯ ವಾಣಿ

ಸರ್ಕಾರದ ನಿಯಮಗಳ ಪಾಲನೆ ಆಗದೆ ಇರುವುದರಿಂದ ಮತ್ತು ಸಂಚಾರ ನಿಗಮದ ಅಸ್ತವ್ಯಸ್ತತೆಯಿಂದ ವಾಹನ ಸವಾರರಿಗೆ
ಈ ಹೊಸ ನಿಯಮ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ದಿನನಿತ್ಯ ಟ್ರಾಫಿಕ್ ಕಿರಿ ಕಿರಿ ಇದ್ದದ್ದೇ. 
ಈ ಕಾರಣವಾಗಿ ಬೆಂಗಳೂರು ನಗರದ ಫುಟ್​​ಪಾತ್ ಮೇಲೆ ವಾಹನ ಚಲಾಯಿಸುವುದು ಸಹಜವಾಗಿದೆ. ಸದ್ಯ ಫುಟ್​​
ಪಾತ್ ಮೇಲೆ ವಾಹನ ಚಲಾಯಿಸುವುದರಿಂದ ನೀವು ಕೋರ್ಟ್ ಕೇಸ್ ಎಂದು ಅಲೆದಾಡುವ ಪರಿಸ್ಥಿತಿ ಬರಬಹುದು.

Sponsored

ಹೌದು ಜನರು ಸಿಗ್ನಲ್​ ಸಮಸ್ಯೆಯಿಂದ ಪಾರಾಗಲು ಫುಟ್​ಪಾತ್​ ಮೇಲೂ ಬೈಕ್​ ಹತ್ತಿಸಿಕೊಂಡು ಹೋಗುತ್ತಾರೆ.
ಆದರೆ ಇನ್ಮುಂದೆ ಆ ರೀತಿ ಫುಟ್​​ಪಾತ್​ ಮೇಲೆ ವಾಹನ ಚಲಾಯಿಸಿದರೆ ಪೊಲೀಸರು ದಂಡದ ಜೊತೆ ಪ್ರಕರಣವನ್ನು
ದಾಖಲು ಮಾಡಿ ಕೋರ್ಟ್​ಗೆ ತಲುಪಿಸುತ್ತಾರೆ. ಅಲ್ಲದೇ ಪ್ರಕರಣ ದಾಖಲಿಸಿ ನಿಮ್ಮವಾಹನವನ್ನು ಸ್ಥಳದಲ್ಲೇ
ಸೀಜ್ ಮಾಡಲಾಗುತ್ತಿದೆ. ಬೆಂಗಳೂರಿನ ಫುಟ್ ಪಾತ್​ ಮೇಲೆ ವಾಹನ ಚಲಾಯಿಸುವುದು, ಪಾರ್ಕಿಂಗ್ ಮಾಡುವುದು
ತಡೆಯಲು ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.

Advertisement

Advertisement

ಈ ಕುರಿತಾಗಿ ಸಂಚಾರಿ ಪೋಲಿಸ್ ಇಲಾಖೆ ವಿಶೇಷ ಆಯುಕ್ತರಾದ ಡಾ ಎಂ.ಎ ಸಲೀಂ ಅವರು ಮಾಹಿತಿ ಪ್ರಕಾರ ಫುಟ್​​
ಪಾತ್​ ಮೇಲೆ ವಾಹನ ಚಲಾಯಿಸುವುದು ಬಹಳ ಅನಾಗರಿಕ ವರ್ತನೆ ಆಗಿದೆ. ಇದರಿಂದ ಪಾದಚಾರಿಗಳಿಗೆ ಬಹಳ ಸಮಸ್ಯೆ
ಆಗುತ್ತದೆ. ಅಲ್ಲದೇ ಪ್ರಾಣಹಾನಿ ಆಗುವ ಸಂಭವ ಹೆಚ್ಚು. ಆದ್ದರಿಂದ ಕಠಿಣ ಕ್ರಮದ ಭಾಗವಾಗಿ ಎಫ್​ಐಆರ್​
ಮಾಡಿ ಕೋರ್ಟಿಗೆ ಕಳುಹಿಸುತ್ತಿದ್ದೇವೆ. ಅಲ್ಲದೇ ವಾಹನ ಸೀಜ್ ವಶಕ್ಕೆ ಪಡೆದಕೊಂಡು ಕೋರ್ಟ್​ ವಶಕ್ಕೆ
ನೀಡುತ್ತಿದ್ದೇವೆ. ಕೋರ್ಟಿನಿಂದಲೇ ಮಾಲೀಕರು ವಾಹನ ಬಿಡುಗಡೆ ಮಾಡಿಕೊಳ್ಳಬೇಕು ಎಂದು ಆದೇಶ ನೀಡಿದ್ದಾರೆ.

ಅದಲ್ಲದೆ ಫುಟ್​ಪಾತ್ ಮೇಲೆ ವಾಹನ ನಿಲ್ಲಿಸಿದರೆ ಅಥವಾ ಚಲಾಯಿಸಿದರೆ ವಾಹನ‌ ಸೀಝ್ ಮಾಡಿ ಸೆಕ್ಷನ್ 
283 ಅಡಿಯಲ್ಲಿ FIR ದಾಖಲು ಮಾಡಲಾಗುತ್ತೆ. ಮೋಟಾರ್ ಸೈಕಲ್ ಆಕ್ಟ್ ಆಡಿ ಫೈನ್ ಹಾಕದೇ ಗಾಡಿಯನ್ನು 
ಸೀಝ್ ಮಾಡಲಾಗುತ್ತದೆ. ಬೇರೆ ಕೇಸ್​ಗಳ ರೀತಿಯಲ್ಲೇ ಕೋರ್ಟ್​ಗೆ ಹೋಗಿ ಫೈನ್​ ಕಟ್ಟಬೇಕಾಗುತ್ತದೆ. 
ಕಳೆದ 2 ತಿಂಗಳಲ್ಲಿ 3,500 ಕೇಸ್ ದಾಖಲು ಆಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಎರಡು ತಿಂಗಳಿನಿಂದ ಈ ಮೇಲಿನ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಅನಾವಶ್ಯಕ ಚಾಲನೆ ಮತ್ತು
ಫುಟ್​ಪಾತ್ ಪಾದಚಾರಿಗಳ ಸುರಕ್ಷಿತ ದೃಷ್ಟಿಯಿಂದ, ಪಾದಾಚಾರಿಗಳ ಸುರಕ್ಷತೆಗೆ ಈ ಮೇಲಿನ ನಿಯಮ ಜಾರಿಗೆ
ತರಲಾಗಿದೆ ಎಂದು ಸಂಬಂಧ ಪಟ್ಟ ಅಧಿಕಾರಿ ಮಾಹಿತಿ ನೀಡಿದ್ದಾರೆ.

Advertisement
