# Free Call: ಇನ್ನು ಮುಂದೆ ರೀಚಾರ್ಜ್ ಮಾಡದೆಯೂ  ಫ್ರೀಯಾಗಿ ಕರೆ ಮಾಡಬಹುದು!! ಇಲ್ಲಿದೆ ಸಂಪೂರ್ಣ ವಿವರ

- Link: https://hosakannada.com/technology/you-can-make-free-call-without-recharging/
- Published: 2023-03-28T14:29:40+00:00
- Author: ಕಾವ್ಯ ವಾಣಿ

Free Call : ಎಷ್ಟೇ ದುಬಾರಿ ಸ್ಮಾರ್ಟ್ ಫೋನ್ (smartphone) ನಮ್ಮಲ್ಲಿ ಇದ್ದರೂ ನಾವು ಯಾರಿಗೆ 
ಕರೆ ಮಾಡಬೇಕಾದರೂ ರೀಚಾರ್ಜ್​​ ಇರಲೇ ಬೇಕು. ರಿಚಾರ್ಜ್ ಇಲ್ಲವಾದರೆ ಕಾಲ್ (Free Call) ಹೇಗೆ ಮಾಡೋದು
ಎಂಬ ಚಿಂತೆ ನಿಮಗೆ ಹಲವು ಸಲ ಕಾಡಿರಬಹುದು. ಆದರೆ ಇನ್ನು ಮುಂದೆ ನೀವು ರೀಚಾರ್ಜ್​ ಮಾಡದೆಯೇ ಉಚಿತವಾಗಿ
ಯಾರಿಗೆ ಬೇಕಾದರೂ ಕಾಲ್​ ಮಾಡಬಹುದು.

Sponsored

ನೀವು ಯಾರಿಗೂ ಕರೆ ಮಾಡಬೇಕಾದರೂ ಸಿಮ್​ಗೆ ರೀಚಾರ್ಜ್ ಮಾಡಲೇ ಬೇಕು. ಆದರೆ ಈ ಟ್ರಿಕ್ ಮೂಲಕ ನೀವು 
ಯಾರಿಗೆ ಬೇಕಾದರೂ ಉಚಿತವಾಗಿಯೇ ಕಾಲ್​ ಮಾಡಬಹುದು.

Advertisement

Advertisement

ಕೆಲವು ವರ್ಷಗಳ ಹಿಂದೆ ಟೆಲಿಕಾಂ ಕಂಪೆನಿಗಳು ಮಹತ್ತರವಾದ ನಿಯಮವೊಂದನ್ನು ಜಾರಿಗೆ ತಂದಿದೆ. ಈ ಮೂಲಕ
ಯಾರೇ ಆಗಲಿ, ಯಾವುದೇ ಸಿಮ್ ಹೊಂದಿದ್ದರು ತಮ್ಮ ಸಿಮ್​​ನಲ್ಲಿ ನಿಗದಿತವಾಗಿ ತಿಂಗಳ ರೀಚಾರ್ಜ್​ ಪ್ಯಾಕ್​
ಅನ್ನು ಹೊಂದಿರಬೇಕು. ಆದರೆ ಇನ್ಮುಂದೆ ಯಾವುದೇ ರೀಚಾರ್ಜ್​ ಮಾಡದೇ ಉಚಿತವಾಗಿಯೇ ಇನ್ನೊಬ್ಬರಿಗೆ ಕಾಲ್​
ಮಾಡಬಹುದಾಗಿದೆ.

ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್​ ಮೂಲಕ ಆ್ಯಪ್​ ಒಂದನ್ನು ಡೌನ್​ಲೋಡ್​ ಮಾಡಿಕೊಂಡರೆ ಸಾಕು.
ಅದಲ್ಲದೆ ಕಾಲ್​ ಮಾಡಲು ಇಂಟರ್ನೆಟ್​ ಸಹ ಅಗತ್ಯವಿರುವುದಿಲ್ಲ.

ಈ ಅಪ್ಲಿಕೇಶನ್‌ನ ಹೆಸರು ಬ್ಲೂಟೂತ್ ವಾಕಿ ಟಾಕಿ. ಇದನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬ್ಲೂಟೂತ್ (Bluetooth ) ವಾಕಿ ಟಾಕಿ ಅಪ್ಲಿಕೇಶನ್ (application)
ಅನ್ನು ಡೌನ್​ಲೋಡ್​ ಮಾಡಿದ ನಂತರ, ಇಲ್ಲಿ ನಿಮಗೆ ವೈ-ಫೈ ಮತ್ತು ರಿಫ್ರೆಶ್‌ಗಾಗಿ 2 ಆಯ್ಕೆಗಳನ್ನು
ತೋರಿಸಲಾಗುತ್ತದೆ.

ನೀವು ಈ ಅಪ್ಲಿಕೇಶನ್‌ ಮೂಲಕ ಉಚಿತವಾಗಿ ಕಾಲ್​ ಮಾಡಲು ಬಯಸಿದ್ರೆ , ನಂತರ ನೀವು ಮಾತನಾಡಲು ಬಯಸುವ
ವ್ಯಕ್ತಿಯಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್​ಲೋಡ್​ ಮಾಡಲು ಮತ್ತು ನೀವು ಮಾಡಿದಂತೆಯೇ ಲಾಗಿನ್​ ಆಗಲು
ಹೇಳಿ. ನಂತರ ನೀವು ರಿಫ್ರೆಶ್ ಆಯ್ಕೆಯನ್ನು ಸೆಲೆಕ್ಟ್ ಮಾಡಿದಾಗ ಅಲ್ಲಿ ನಿಮಗೆ ಆನ್​ ಆಗಿರುವ ಬ್ಲೂಟೂತ್​​
ಸಾಧನಗಳನ್ನು ತೋರಿಸುತ್ತದೆ. ಅದರಲ್ಲಿ ನೀವು ಕರೆ ಮಾಡಲು ಬಯಸುವಂತಹ ಬ್ಲೂಟೂತ್​ ಅನ್ನು ಆಯ್ಕೆ ಮಾಡ್ಬೇಕು.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಬ್ಲೂಟೂತ್ ವಾಕಿ ಟಾಕಿ ಅಪ್ಲಿಕೇಶನ್‌ನ ವ್ಯಾಪ್ತಿಯು 100 ಮೀಟರ್‌ಗಳವರೆಗೆ
ಮಾತ್ರ ಇರುತ್ತದೆ, ಅಂದರೆ, ಈ ಅಪ್ಲಿಕೇಶನ್ ಹೊಂದಿರುವ 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಯಾವುದೇ
ವ್ಯಕ್ತಿಯೊಂದಿಗೆ ನೀವು ಉಚಿತವಾಗಿ ಮಾತನಾಡಬಹುದು.

ಒಟ್ಟಿನಲ್ಲಿ ನೀವು ಹಣ ಮತ್ತು ಇಂಟರ್ನೆಟ್ ಖರ್ಚು ಮಾಡದೆಯೇ ಜೀವಮಾನದ ಉಚಿತ ಕರೆಗಳನ್ನು ಮಾಡಲು ಬಯಸಿದರೆ,
ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್
ಮಾಡಬಹುದಾಗಿದೆ.

Advertisement
