# Realme GT 3: ಅತ್ಯಂತ ವೇಗದ ಚಾರ್ಜಿಂಗ್‌ ಮೊಬೈಲ್‌, ಜಾಗತಿಕ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ರೆಡಿಯಾದ ರಿಯಲ್‌ GT 3 ಫೋನ್‌!

- Link: https://hosakannada.com/technology/realme-gt-3-phone-launched-to-ready-on-february-28th/
- Published: 2023-02-26T11:10:25+00:00
- Author: ಕಾವ್ಯ ವಾಣಿ

Realme GT 3 : ಮಾರುಕಟ್ಟೆಯಲ್ಲಿ (market )ಸ್ಮಾರ್ಟ್​ಫೋನ್​ಗಳ (smartphone )ಹವಾ ಯಾವತ್ತಿಗೂ
ಕಡಿಮೆ ಆಗಲ್ಲ. ಹಾಗಿರುವಾಗ ಸ್ಮಾರ್ಟ್ ಫೋನ್ ನ ವ್ಯಾಪಕವಾದ ಬಳಕೆಯಿಂದಾಗಿ ಕಂಪನಿಗಳು(company )ಕೂಡ
ಹೊಸ ಹೊಸ ರೀತಿಯ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಸದ್ಯ ಇದೀಗ ರಿಯಲ್​ಮಿ​ ಕಂಪನಿ(
Realme) ತನ್ನ ಬ್ರಾಂಡ್​ನ ಅಡಿಯಲ್ಲಿ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವುದು ವಿರಳವಾಗಿದೆ.
ಇದೀಗ ರಿಯಲ್ ಮಿ ಕಡೆಯಿಂದ ಸಿಹಿಸುದ್ದಿ ಇದೆ.

Sponsored

ಕೊನೆಗೂ ಮಾರುಕಟ್ಟೆಗೆ ರಿಯಲ್ ಮಿ ಕಂಪನಿ ಹೊಸ ಮೊಬೈಲ್ ಒಂದನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
ಅದುವೇ ರಿಯಲ್‌ ಮಿ ಜಿಟಿ 3 (Realme GT 3). ಇದು ಅತ್ಯಂತ ವೇಗದ(speed )ಚಾರ್ಜಿಂಗ್‌ ಮೊಬೈಲ್‌ 
ಆಗಿದ್ದು ಇದೇ ಫೆಬ್ರವರಿ 28 ರಂದು ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2023 ಈವೆಂಟ್‌ನಲ್ಲಿ ರಿಲೀಸ್ ಆಗಲಿದೆಯಂತೆ.
ಸದ್ಯ ರಿಯಲ್‌ ಮಿ GT 3 ಸ್ಮಾರ್ಟ್‌ಫೋನ್​ನಲ್ಲಿ ಏನೆಲ್ಲ ಫೀಚರ್​ಗಳು ಇರಲಿದೆ ಎಂಬ ಬಗ್ಗೆ ಅಧಿಕೃತ
ಮಾಹಿತಿ ಹೊರಬಿದ್ದಿಲ್ಲ. ಆದರೆ ಮೂಲಗಳ ಪ್ರಕಾರ ಕೆಲವು ಮಾಹಿತಿ ತಿಳಿದಿದೆ.

Advertisement

Advertisement

ರಿಯಲ್‌ ಮಿ ಜಿಟಿ 3 (Realme GT 3) ಫೀಚರ್ಸ್:

• ಮೂಲಗಳ ಪ್ರಕಾರ ಇದು 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ
ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿರಲಿದೆ ಎಂದು ವರದಿಯಾಗಿದೆ.
 • ಡಿಸ್‌ಪ್ಲೇ ಸ್ಕ್ರೀನ್ ಟು ಬಾಡಿ
ಅನುಪಾತ 87.79 % ಇರಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ಪ್ರೊಟೆಕ್ಷನ್‌ ಪಡೆದುಕೊಂಡಿರುವ
ಸಾಧ್ಯತೆ ಇದೆ. • ಬಲಿಷ್ಠವಾದ ಮೀಡಿಯಾಟೆಕ್‌ ಡೈಮೆನ್ಸಿಟಿ 8100 SoC ಪ್ರೊಸೆಸರ್‌ ವೇಗವನ್ನು ಹೊಂದಿರಲಿದೆ.•
ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. • ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ
ಸೆಟ್‌ಅಪ್‌ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ
8 ಮೆಗಾಪಿಕ್ಸೆಲ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿರಲಿದೆ.•
ಇದಲ್ಲದೆ ಈ ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು
ಒಳಗೊಂಡಿರಬಹುದು. • ಇದು 240W ವೇಗದ ಚಾರ್ಜಿಂಗ್‌ ಬೆಂಬಲಿಸುವ 4,500mAh ಸಾಮರ್ಥ್ಯ ಬ್ಯಾಟರಿ ಬ್ಯಾಕ್‌ಅಪ್‌
ಅನ್ನು ಹೊಂದಿರುವುದು ಬಹುತೇಕ ಖಚಿತವಾಗಿದೆ. • ಇದು 10 ನಿಮಿಷಗಳ ಒಳಗೆ 0-100% ಫುಲ್ ಚಾರ್ಜ್ ಆಗುತ್ತಂತೆ.•
ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌
ಅನ್ನು ಒಳಗೊಂಡಿರಬಹುದು.

ಈ ಫೋನಿನ ಬೆಲೆ ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ, ಸುಮಾರು 25,000-30,000 ರೂ. ಒಳಗಡೆ ಇರಬಹುದು
ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ರಿಯಲ್‌ ಮಿ GT 3 ಸ್ಮಾರ್ಟ್‌ಫೋನ್​ನ ಮುಖ್ಯ ಹೈಲೇಟ್ ಇದರ ಬ್ಯಾಟರಿ
ಹಾಗೂ ಫಾಸ್ಟ್ ಚಾರ್ಜಿಂಗ್ ಆಗಿದ್ದು ಇದು 10 ನಿಮಿಷಗಳ ಒಳಗೆ 0-100% ಫುಲ್ ಚಾರ್ಜ್ ಆಗುತ್ತಂತೆ. 
ಈ ಅಡ್ವಾಂಟೇಜ್ ನ್ನು ಜನರು ಇಷ್ಟಪಡುವ ಕಾರಣದಿಂದ ಮಾರುಕಟ್ಟೆಯಲ್ಲಿ ಈ ಫೋನಿಗೆ ಹೆಚ್ಚಿನ ಬೇಡಿಕೆ 
ಇರುವ ಸಾಧ್ಯತೆ ಇದೆ.

Advertisement
