# ಒಂದೇ ಕುಟುಂಬದ ಮೂವರು ನೇಣಿಗೆ ಶರಣು | ನಿಗೂಢವಾಗಿದೆ ಈ ಅಜ್ಜಿ, ಮಗಳು, ಮೊಮ್ಮಗಳ ಸಾವಿನ ಹಿಂದಿರುವ ಕಾರಣ !!

- Link: https://hosakannada.com/social/shrungeri-news-one-family-3-members-death/
- Published: 2021-09-06T14:52:58+00:00
- Author: ಹೊಸಕನ್ನಡ ನ್ಯೂಸ್

ಚಿಕ್ಕಮಗಳೂರು: ಒಂದೇ ಕುಟುಂಬದ ಮೂವರು ಅತ್ಮಹತ್ಯೆಗೆ ಶರಣಾಗಿರುವ ಘಟನೆ ಶೃಂಗೇರಿ ತಾಲೂಕಿನ ಮಕ್ಕಿಮನೆಯಲ್ಲಿ
ನಡೆದಿದೆ.

Sponsored

ಅಜ್ಜಿ, ಮಗಳು, ಮೊಮ್ಮಗಳು ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದು,ಶಾರದಮ್ಮ (70), ವೀಣಾ (40), ಶ್ರಾವ್ಯ(
17)ಮೃತ ಪಟ್ಟವರೆಂದು ಗುರುತಿಸಲಾಗಿದೆ.ಇವರಲ್ಲಿ ವೀಣಾ ಎಂಬುವವರು ಅಂಗನವಾಡಿಯ ಶಿಕ್ಷಕಿಯಾಗಿದ್ದರು
ಎಂದು ತಿಳಿದು ಬಂದಿದೆ.

Advertisement

Advertisement

ಈ ಮೂವರ ದೇಹ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಇವರ ಈ ನಿರ್ಧಾರಕ್ಕೆ ಏನು ಕಾರಣ?
ಯಾಕೆ ಈ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಇನ್ನೂ ಮಾಹಿತಿ ತಿಳಿದು ಬಂದಿಲ್ಲ.

ಈ ಘಟನೆ ಬಗ್ಗೆ ಶೃಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀನೆ ನಡೆಸಿ, ತನಿಖೆ ನಡೆಸಿದ್ದಾರೆ.

Advertisement
