# ಹುಡುಗಿಯರೇ ಬಿಗಿಯಾದ ಜೀನ್ಸ್ ಧರಿಸುವಾಗ ಎಚ್ಚರ !! ಫಿಟ್ ಜೀನ್ಸ್ ಧರಿಸಿದ ಈಕೆಗೆ ಆಗಿದ್ದು ಏನು ಗೊತ್ತಾ!!?

- Link: https://hosakannada.com/social/grls-tight-jeans/
- Published: 2021-10-07T11:24:21+00:00
- Author: ನಿಶ್ಮಿತಾ ಎನ್.

ಇಂದಿನ ದಿನಗಳಲ್ಲಿ ಜೀನ್ಸ್ ಧರಿಸುವುದು ಈಗ ಸಾಮಾನ್ಯ ಸಂಗತಿ.ಅಲ್ಲದೇ ಫ್ಯಾಷನ್ ಕೂಡ ಆಗಿದೆ.ಪುರುಷರಿಂದ
ಹಿಡಿದು ಹುಡುಗಿಯರು, ಮಹಿಳೆಯರು ಎಲ್ಲರೂ ಜೀನ್ಸ್ ಧರಿಸುತ್ತಾರೆ.ಆದ್ರೆ ಇಲ್ಲೊಂದು ಕಡೆ ಆದ ಎಡವಟ್ಟು
ನೋಡಿದ್ರೆ ಒಮ್ಮೆ ನೀವೂ ಕೂಡ ಆಲೋಚಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

Sponsored

ಹೌದು. ಇಲ್ಲೊಬ್ಬಳು ಹುಡುಗಿ ಬಿಗಿಯಾದ ಜೀನ್ಸ್ ಧರಿಸಿ ಆಸ್ಪತ್ರೆ ಸೇರುವಂತೆ ಆಗಿದೆ.ಬಿಗಿಯಾದ ಜೀನ್ಸ್
ಧರಿಸಿದ್ದ ಹುಡುಗಿ, ಆಕೆಗೆ ಆದ ಸಮಸ್ಯೆ ಏನು ಎಂಬುದರ ಬಗೆಗೆ ಸಂಪೂರ್ಣವಾಗಿ ಹಂಚಿಕೊಂಡಿದ್ದಾಳೆ ನೋಡಿ..

Advertisement

Advertisement

ಅಂದ ಹಾಗೆ ಈ ಘಟನೆ ನಡೆದಿರುವುದು ಉತ್ತರ ಕೆರೊಲಿನಾದಲ್ಲಿ.ಆಕೆಯ ಹೆಸರು ಸ್ಯಾಮ್.ಸಾಮಾಜಿಕ ಜಾಲತಾಣದಲ್ಲಿ
ತಾನು ಎದುರಿಸಿದ ಸಮಸ್ಯೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾಳೆ.ಟಿಕ್ ಟಾಕ್ ನಲ್ಲಿ ಒಂದು ವಿಡಿಯೋ 
ಹಂಚಿಕೊಂಡಿದ್ದಾಳೆ.ಇದನ್ನು 80 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಸ್ಯಾಮ್, ಟೈಟ್ ಜೀನ್ಸ್ ಸ್ಕರ್ಟ್ ಧರಿಸುತ್ತಿದ್ದಳಂತೆ. ಇದ್ರಿಂದ ಆಕೆಗೆ ಚರ್ಮದ ಸೋಂಕು ತಗುಲಿದೆ.
ಸಮಸ್ಯೆ ಎಷ್ಟು ಹೆಚ್ಚಾಗಿತ್ತೆಂದ್ರೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಬೇಕಾಯ್ತಂತೆ.ಒಂದು ಹಂತದಲ್ಲಿ
ಐಸಿಯುಗೆ ಹೋಗಿ ಬಂದಿದ್ದಳಂತೆ.

ಬಾಯ್ ಫ್ರೆಂಡ್ ಜೊತೆ ಡೇಟ್ಸ್ ಗೆ ಹೋದವಳು ಟೈಟ್ ಜೀನ್ಸ್ ಧರಿಸಿದ್ದಳಂತೆ. ಸುಮಾರು 8 ಗಂಟೆಗಳ ಕಾಲ
ಅದನ್ನು ಧರಿಸಿದ್ದವಳಿಗೆ ಸೊಂಟದ ಕೆಳಗೆ ನೋವು ಕಾಣಿಸಿತ್ತಂತೆ. ವೈದ್ಯರ ಬಳಿ ಹೋದಾಗ, ಚರ್ಮದ ಸೋಂಕು
ತಗುಲಿದೆ ಎಂದು ವೈದ್ಯರು ಹೇಳಿದ್ದರಂತೆ.

ಆಕೆಗೆ ಸೆಪ್ಸಿಸ್ ಮತ್ತು ಸೆಲ್ಯುಲೈಟಿಸ್ ಆಗಿದ್ದು,ಆಸ್ಪತ್ರೆಯಲ್ಲಿ ದಾಖಲಿಸಿಕೊಂಡ ವೈದ್ಯರು ಚಿಕಿತ್ಸೆ
ಮುಂದುವರೆಸಿದ್ದರಂತೆ. ಆದ್ರೆ ಪರಿಸ್ಥಿತಿ ಕೈ ಮೀರ್ತಿದೆ ಎಂಬುದು ಗೊತ್ತಾಗ್ತಿದ್ದಂತೆ ಆಕೆಯನ್ನು 
ಐಸಿಯುಗೆ ದಾಖಲಿಸಲಾಗಿದೆ. 6 ದಿನಗಳ ನಂತ್ರ ಸ್ಯಾಮ್ ಸುಧಾರಿಸಿಕೊಂಡಿದ್ದಳಂತೆ.ಆದ್ದರಿಂದ ನೀವು ಕೂಡಾ
ಬಿಗಿಯಾದ ಜೀನ್ಸ್ ಹಾಕ್ತಾ ಇದ್ರೆ ಇನ್ಮುಂದೆ ಆಲೋಚನೆ ಮಾಡ್ಲೇಬೇಕು. ಇಲ್ಲಾಂದ್ರೆ ಕಥೆ ಬೇರೇನೆ ಆಗ್ಬಹುದು
ಜೋಕೆ.

Advertisement
