# Bantwala: ಬಂಟ್ವಾಳ; ಚುನಾವಣಾ ಕರ್ತವ್ಯದಲ್ಲಿದ್ದ ಪಂಚಾಯತ್‌ ಕಾರ್ಯದರ್ಶಿ ನಾಪತ್ತೆ

- Link: https://hosakannada.com/politics/panchayat-secretary-who-was-on-election-duty-has-gone-missing-in-bantwala/
- Published: 2024-03-29T14:06:51+00:00
- Author: ಹೊಸಕನ್ನಡ ನ್ಯೂಸ್

Bantwala: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ಅಧಿಕಾರಿಯೊಬ್ಬರು ಕಾಣೆಯಾಗಿರುವ ಕುರಿತು ಪೂಂಜಾಲಕಟ್ಟೆ
ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sponsored

**ಇದನ್ನೂ ಓದಿ : [Bengaluru: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಪ್ರಮುಖ ಆರೋಪಿ !!](https://hosakannada.com/2024/03/29/rameswaram-cafe-blast-case-main-accused-revealed-information/)**

Advertisement

Advertisement

ಅತ್ತ ಕರ್ತವ್ಯಕ್ಕೂ ಹೋಗದೆ, ಇತ್ತ ಮನೆಗೂ ಬಾರದೇ ಕಾಣೆಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. 
ಈ ಕುರಿತು ಪೂಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮ್ಟಾಡಿ ಗ್ರಾಮ ಪಂಚಾಯತ್‌ ಕಾರ್ಯದರ್ಶಿ, ಕೊಲ್ಪೆದಬೈಲು ನಿವಾಸಿ ಲಕ್ಷ್ಮೀನಾರಾಯಣ ಎಂಬುವವರೇ ಕಾಣೆಯಾದ
ವ್ಯಕ್ತಿ. ಬುಧವಾರ (ಮಾ.27) ಮಧ್ಯಾಹ್ನದ ನಂತರ ಇವರು ಕಚೇರಿಯಿಂದ ತೆರಳಿದ್ದಾರೆ. ಫೋನ್‌ ಸ್ವಿಚ್‌ಆಫ್‌
ಆಗಿದ್ದು, ಮನೆಯವರ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿದ್ದಾರೆ. ಈ ಕುರಿತು ಇವರ ಪತ್ನಿ ಪೂಂಜಾಲಕಟ್ಟೆ 
ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

**ಇದನ್ನೂ ಓದಿ: [Mangalore: ಮಂಗಳೂರು ಕ್ಷೇತ್ರದಲ್ಲಿ ‘ಸೌಜನ್ಯಗಳಿಗಾಗಿ ನೋಟಾ’ ಚಳವಳಿ ಶುರು – ಈ ಸಲ ಎಲ್ಲಾ ಮತ ಲೆಕ್ಕಾಚಾರ ಅಡಿ ಮೇಲು !](https://hosakannada.com/2024/03/29/nota-movement-in-mangalore-constituency-with-nota-for-soujanya-tag/)**

ಇವರು ಎಸ್‌ಎಸ್‌ಟಿ ತಂಡದಲ್ಲಿ ಚುನಾವಣೆಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದು, ಕರ್ತವ್ಯಕ್ಕೆ ಹಾಜರಾಗಿಲ್ಲ
ಎಂದು ಇತರೆ ಸಿಬ್ಬಂದಿ ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಇವರು ಈ ಹಿಂದೆ ಕೂಡಾ
ಇದೇ ರೀತಿ ಕಾಣೆಯಾಗಿದ್ದು, ಪೊಲೀಸರು ಪತ್ತೆ ಮಾಡಿದ್ದರು.

ಬೈಕ್‌ ಮತ್ತು ಮೊಬೈಲ್‌ ಫೋನ್‌ ಬೆಳ್ತಂಗಡಿಯಲ್ಲಿ ಪತ್ತೆಯಾಗಿದ್ದು, ಇದೀಗ ಪೊಲೀಸರು ಲಕ್ಷ್ಮೀನಾರಾಯಣ
ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Advertisement
