# Karnataka Election: ನನಗೆ ಯಾವುದೇ ಬೇಡಿಕೆ ಇಲ್ಲ-ಕುಮಾರಸ್ವಾಮಿ ಹೊಸ ಹೇಳಿಕೆ

- Link: https://hosakannada.com/politics/i-have-no-demand-kumaraswamy-new-statement-karnataka-assembly-election-results-2023/
- Published: 2023-05-13T09:28:44+00:00
- Author: ಕಾವ್ಯ ವಾಣಿ

HD Kumaraswamy: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಕ್ಕೆ ಇನ್ನೇನು ಕೆಲವು ಗಂಟೆಗಳು
ಬಾಕಿ ಇದ್ದು, ಎಲ್ಲರ ಗಮನ ಫಲಿತಾಂಶದ ಮೇಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ
8 ಗಂಟೆಗೆ ಆರಂಭವಾಗಿದ್ದು, 2,615 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸದ್ಯ ನಾಯಕರೆಲ್ಲರೂ
ಫಲಿತಾಂಶದ ನಿರೀಕ್ಷೆಯಲಿದ್ದಾರೆ.

Sponsored

ಈ ನಡುವೆ ಸುದ್ದಿಸಂಸ್ಥೆಗಳೊಂದಿಗೆ ಮಾತನಾಡಿದ ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ (HD Kumaraswamy)
ಸರ್ಕಾರ ರಚನೆಗೆ ಸಂಬಂಧಿಸಿ, ನಮ್ಮದು ಸಣ್ಣ ಪಕ್ಷ, ನನಗೆ ಯಾವುದೇ ಬೇಡಿಕೆ ಇಲ್ಲ; ಸರ್ಕಾರ ರಚನೆ ಹಿನ್ನೆಲೆಯಲ್ಲಿ
ನನ್ನನ್ನು ಯಾರೂ ಸಂಪರ್ಕಿಸಿಲ್ಲʼ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

Advertisement

Advertisement

ಮತ ಎಣಿಕೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ʼಜೆಡಿಎಸ್‌ಗೆ ಸುಮಾರು 30-32 ಸ್ಥಾನಗಳು
ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಬಹುಮತ ಎಂದು ಭವಿಷ್ಯ ನುಡಿದಿರುವ ಎಕ್ಸಿಟ್ ಪೋಲ್‌ಗಳನ್ನು
ಉಲ್ಲೇಖಿಸಿ ʼಕೆಲವರು ಹಳೆಯ ಪಕ್ಷಕ್ಕೆ ಬಹುಮತದ ಮುನ್ಸೂಚನೆಯನ್ನು ಸಹ ನೀಡಿದ್ದಾರೆ. ಆದರೆ ಭವಿಷ್ಯವಾಣಿಗಳನ್ನು
ನಂಬಲು ಆಗುವುದಿಲ್ಲʼ ಎಂದಿದ್ದಾರೆ. ʼಮುಂದಿನ 2-3 ಗಂಟೆಗಳಲ್ಲಿ ಇದು ಸ್ಪಷ್ಟವಾಗಲಿದೆ. ಎಕ್ಸಿಟ್ 
ಪೋಲ್‌ಗಳು ಎರಡು ರಾಷ್ಟ್ರೀಯ ಪಕ್ಷಗಳು ಬಹುಮತ ಪಡೆಯಲಿವೆ ಎಂದು ತೋರಿಸುತ್ತವೆ.

ಈಗಾಗಲೇ ಸಮೀಕ್ಷೆಗಳು ಜೆಡಿಎಸ್‌ಗೆ 30-32 ಸ್ಥಾನಗಳನ್ನು ನೀಡಿವೆ. ನಮ್ಮದು ಸಣ್ಣ ಪಕ್ಷ. ನನಗೆ ಯಾವುದೇ
ಬೇಡಿಕೆಯಿಲ್ಲ…ಒಳ್ಳೆಯ ಬೆಳವಣಿಗೆಯ ನಿರೀಕ್ಷೆಯಲ್ಲಿದ್ದೇನೆʼ ಎಂದು ಅವರು ಹೇಳಿದರು. ಅದಲ್ಲದೆ ʼಇಲ್ಲಿಯವರೆಗೆ
ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಮೊದಲು ಅಂತಿಮ ಫಲಿತಾಂಶ ಆಧಾರದ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ
ಎಂದಿದ್ದಾರೆ.

Advertisement
