# HSRP ನಂಬರ್ ಪ್ಲೇಟ್ ಅಳವಡಿಕೆ ವಿಚಾರ – ಸಾರಿಗೆ ಇಲಾಖೆಯಿಂದ ಬಂತೊಂದು ಹೊಸ ಆದೇಶ !!

- Link: https://hosakannada.com/politics/hsrp-number-plate-installation-transport-department-issues-order/
- Published: 2023-11-18T15:13:17+00:00
- Author: ಹೊಸಕನ್ನಡ ನ್ಯೂಸ್

HSRP Number Plate: ರಾಜ್ಯದಲ್ಲಿ ಹಳೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (High Security
Registration Plates-HSRP) ಕಡ್ಡಾಯವಾಗಿ ಅಳವಡಿಸಬೇಕು. ಎಚ್ಎಸ್ಆರ್ಪಿ ನಂಬರ್ ಪ್ಲೇಟ್(HSRP Number
Plate)ಅಳವಡಿಕೆಗೆ ನವೆಂಬರ್ 17ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ವಾಹನ ಸವಾರರು ಎಚ್ಎಸ್ಆರ್ಪಿ 
ನಿರೀಕ್ಷೆಗಿಂತ ಕಡಿಮೆ ಸಂಖ್ಯೆಯಲ್ಲಿ ಅಳವಡಿಸಿದ ಮಾಡಿದ ಹಿನ್ನೆಲೆ ಈ ನಂಬರ್ ಪ್ಲೇಟ್ ಅಳವಡಿಕೆಗಿದ್ದ
ಅವಧಿಯನ್ನು 2024ರ ಫೆಬ್ರವರಿ 17 ರವರೆಗೆ ವಿಸ್ತರಣೆ ಮಾಡಲಾಗಿದೆ.

Sponsored

![](https://hosakannada.com/wp-content/uploads/2023/11/WhatsApp-Image-2023-11-18-
at-15.06.21.jpeg)

Advertisement

Advertisement

ಕರ್ನಾಟಕ ರಾಜ್ಯದಲ್ಲಿ 01-04- 2019ಕ್ಕಿಂತ ಮೊದಲು ನೋಂದಾಯಿಸಲಾದ ಹಳೆಯ ವಾಹನಗಳಿಗೆ 17-11-2023
ರೊಳಗಾಗಿ ಹೆಚ್.ಎಸ್.ಆರ್.ಪಿ ಅಳವಡಿಕೆಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರವು ಅದೇಶ ಹೊರಡಿಸಿದೆ.
ಇದೀಗ ಸರ್ಕಾರದ ಅಧಿಸೂಚನೆ ಅನುಸಾರ 17-02- 2024ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿರುತ್ತದೆ.
01-04-2019ಕ್ಕಿಂತ ಮೊದಲು ನೋಂದಾಯಿಸಲಾದ ಹಳೆಯ ವಾಹನಗಳ ಮಾಲೀಕರು 17-02-2024 ರೊಳಗಾಗಿ ತಮ್ಮ ವಾಹನಗಳಿಗೆ
ಹೆಚ್.ಎಸ್.ಆರ್.ಪಿ. ಅಳವಡಿಕೆ ಮಾಡಿಕೊಳ್ಳುವಂತೆ ಈ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ನಿಗದಿತ
ದಿನಾಂಕದೊಳಗೆ ಹೆಚ್.ಎಸ್.ಆರ್.ಪಿ. ಯನ್ನು ಅಳವಡಿಸದಿದ್ದಲ್ಲಿ ಸರ್ಕಾರಿ ಅಧಿಸೂಚನೆ ಅನುಸಾರ 21-09-
2019 ರ ಪ್ರಕಾರ ಮತ್ತು ಕಾಲ ಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶಗಳ ಅನುಸಾರ ದಂಡವನ್ನು ವಿಧಿಸಲಾಗುತ್ತದೆ.

Advertisement
