# Gruha Jyothi: ಗ್ಯಾರಂಟಿ ಯೋಜನೆ ಜಾರಿ ಬೆನ್ನಲ್ಲೇ ಗೃಹಜ್ಯೋತಿ ಫಲಾನುಭವಿಗಳಿಗೆ ಬೊಂಬಾಟ್ ಸುದ್ದಿ!!

- Link: https://hosakannada.com/politics/good-news-for-gruha-jyothi-beneficiaries/
- Published: 2024-01-18T11:38:35+00:00
- Author: ಹೊಸಕನ್ನಡ ನ್ಯೂಸ್

Gruha Jyothi Scheme: ಗ್ಯಾರಂಟೀ ಯೋಜನೆಗಳ ಮೂಲಕ ರಾಜ್ಯದ ಜನತೆಗೆ ನೆರವಾದ ರಾಜ್ಯ ಸರ್ಕಾರ(State
Government)ಇದೀಗ ಗೃಹಜ್ಯೋತಿ (Gruha Jyothi Scheme)ಫಲಾನುಭವಿಗಳಿಗೆ ಮತ್ತೊಂದು ಸಿಹಿಸುದ್ದಿ
ನೀಡಿದೆ. ಹೆಚ್ಚುವರಿ ಶೇ. 10% ಬದಲಾಗಿ, 10 ಯೂನಿಟ್ ಉಚಿತ ವಿದ್ಯುತ್ ನೀಡಲು ತೀರ್ಮಾನ ಕೈಗೊಂಡಿದೆ
ಎನ್ನಲಾಗಿದೆ.

Sponsored

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ವೇಳೆ ಹೆಚ್ಚುವರಿ
10 ಯೂನಿಟ್ ವಿದ್ಯುತ್ ನೀಡುವ ಕುರಿತು ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಗೃಹಜ್ಯೋತಿ ಫಲಾನುಭವಿಗಳು
200 ಯೂನಿಟ್ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ವಾರ್ಷಿಕ ವಿದ್ಯುತ್ ಬಳಕೆ ಆಧರಿಸಿ ಶೇ. 10 ರಷ್ಟು
ಹೆಚ್ಚುವರಿ ವಿದ್ಯುತ್ ನೀಡಲು ಸರ್ಕಾರ ಈ ಹಿಂದೆ ತೀರ್ಮಾನ ಕೈಗೊಂಡಿತ್ತು. ಇದೀಗ 10% ಬದಲಾಗಿ 10 
ಯೂನಿಟ್ ಹೆಚ್ಚುವರಿ ವಿದ್ಯುತ್ ನೀಡಲು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

Advertisement

Advertisement
