# Good News : ಸರಕಾರಿ ಪ್ರಾಥಮಿಕ, ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ಸರಕಾರದಿಂದ ಗೌರವ ಸಂಭಾವನೆ ಬಿಡುಗಡೆ!!!

- Link: https://hosakannada.com/politics/good-news-for-government-teachers-karnataka/
- Published: 2022-09-16T09:50:43+00:00
- Author: ಕೆ. ಎಸ್. ರೂಪಾ

2022-23ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ನೇಮಿಸಲಾಗಿರುವ ಬೋಧಕ ಸಿಬ್ಬಂದಿ ಹುದ್ದೆಗಳಿಗೆ
ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಕರ್ತವ್ಯ ನಿರ್ವಹಿಸುತ್ತಿರುವ ಈ ಅತಿಥಿ ಶಿಕ್ಷಕರ ಸಂಭಾವನೆಗಾಗಿ
ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.
ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ನಡವಳಿ
ಹೊರಡಿಸಿದೆ.

Sponsored

ರಾಜ್ಯದ ತಾಲೂಕು ಪಂಚಾಯ್ತಿ ವ್ಯಾಪ್ತಿಯ ಶಿಕ್ಷಣ ಇಲಾಖೆಯಲ್ಲಿ 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ,
ಪ್ರೌಢ ಶಾಲೆಗಳಲ್ಲಿ ಭರ್ತಿ ಮಾಡಿರುವ ಶಿಕ್ಷಕ ಹುದ್ದೆಗಳ , ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ
ಶಿಕ್ಷಕರ ಸಂಭಾವನೆಗಾಗಿ 17,505.23 ಲಕ್ಷಗಳನ್ನು ಬಿಡುಗಡೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.

Advertisement

Advertisement

ಈ ಅನುದಾನವನ್ನು ಪ್ರಸ್ತಾವಿತ ಉದ್ದೇಶಕ್ಕಾಗಿ ಆದ್ಯತೆಯ ಮೇಲೆ ಖರ್ಚು ಮಾಡಬೇಕು. ಅಲ್ಲದೆ ಬಿಡುಗಡೆಗೊಳಿಸಿದ
ಅನುದಾನದ ಮೊತ್ತ ತಾಲೂಕು ಪಂಚಾಯ್ತಿ ಅಥವಾ ಅನುಷ್ಠಾನಾಧಿಕಾರಿಗಳ ಹಂತದಲ್ಲಿ ವಿಳಂಬಗೊಳಿಸಿದರೆ ಅಧಿಕಾರಿಗಳ
ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

![](https://hosakannada.com/wp-content/uploads/2022/09/IMG_20220916_094629.jpg)

Advertisement
